ಮುಸ್ಲಿಂ ಲೀಗ್ ಆರೋಪಿಗಳನ್ನು ಸಂರಕ್ಷಿಸುವ ಪಕ್ಷವಲ್ಲ: ಔಫ್‍ರ ಮನೆಗೆ ಭೇಟಿ ನೀಡಿದ ಮುನವ್ವರಲಿ ತಂಙಳ್

0
1159

ಸನ್ಮಾರ್ಗ ವಾರ್ತೆ

ಕಾಂಞಂಗಾಡ್,ಡಿ.26: ಕೊಲೆಯಾದ ಡಿವೈಎಫ್‍ಐ ಕಾರ್ಯಕರ್ತ ಅಬ್ದುರ್ರಹ್ಮಾನ್ ಔಫ್‍ರ ಮನೆಗೆ ಮುಸ್ಲಿಂ ಯೂತ್ ಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್ ಭೇಟಿ ನೀಡಿದರು. ಶನಿವಾರ ಬೆಳಗ್ಗೆ ಇವರು ಕಲ್ಲೂರಿನ ಮನೆಗೆ ಬಂದು ಮನೆಯವರೊಂದಿಗೆ ಮಾತಾಡಿದ ಬಳಿಕ ಪ್ರಾರ್ಥನೆಯಲ್ಲಿ ಭಾಗಿಯಾದರು.

ಆರೋಪಿಗಳನ್ನು ಪಾರ್ಟಿಯಿಂದ ಅಮಾನತು ಮಾಡಿದ್ದೇವೆ. ಕೊಲೆ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ ಎಂದು ಮುನವ್ವರಲಿ ತಂಙಳ್ ಪತ್ರಕರ್ತರಿಗೆ ತಿಳಿಸಿದರು. ಮುಸ್ಲಿಂ ಲೀಗ್ ಮತ್ತು ಯೂತ್ ಲೀಗ್ ಎಂದು ಕೊಲೆ ಪಾತಕವನ್ನು ಬೆಂಬಲಿಸುವುದಿಲ್ಲ. ಇಂತಹ ಘಟನೆಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಹೈದರಲಿ ತಂಙಳ್ ನಿರ್ದೇಶನ ಪ್ರಕಾರ ಇಲ್ಲಿಗೆ ಬಂದಿದ್ದೇನೆ ಎಂದರು.  ಸಾವಿಗೆ ಮುಸ್ಲಿಂ ಲೀಗ್ ವಿಷಾದ ಸೂಚಿಸಿದೆ.

ಆರೋಪಿ ಮುಸ್ಲಿಂ ಲೀಗ್‍ನ ವ್ಯಕ್ತಿ ಎಂದು ಸಾಬೀತಾದರೆ ಆತ ಪಾರ್ಟಿಯಲ್ಲಿ ಇರುವುದಿಲ್ಲ. ಬಲಿಪಶುಗಳ ನೋವು ಅರ್ಥಮಾಡಿಕೊಳ್ಳುವ ಪಾರ್ಟಿ ಇದು. ಆರೋಪಿಗಳನ್ನು ಸಂರಕ್ಷಿಸುವ ಪರಂಪರೆ ಲೀಗಿಗಿಲ್ಲ ಎಂದರು.