ಸನ್ಮಾರ್ಗ ವಾರ್ತೆ
ಕೇರಳ,ಡಿ.30: ಕಾಂಞಂಗಾಡ್ ಕಲ್ಲೂರಾವಿಯಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರಿಂದ ಹತ್ಯೆಯಾದ ಅಬ್ದುರ್ರಹ್ಮಾನ್ ಔಫ್‍ರ ಮನೆಗೆ ಸಮಸ್ತ ಅಧ್ಯಕ್ಷ ಮುಹಮ್ಮದ್ ಜಿಫ್ರಿ ತಂಙಳ್ ಸಂದರ್ಶಿಸಿದ್ದು ಎಲ್‍ಡಿಎಫ್, ಎಸ್‍ವೈಎಸ್‍ನ ಸಕ್ರಿಯ ಕಾರ್ಯಕರ್ತನಾಗಿದ್ದ ಮೃತ ಔಫ್‌ರ ಮನೆಗೆ ಭೇಟಿ ನೀಡಿದರು.
ಔಫ್‍ರ ಕುಟುಂಬದೊಂದಿಗೆ ಮೊದಲೇ ಸಂಪರ್ಕವಿದೆ. ಕೊಲೆಯ ಹಿಂದೆ ಯಾರಿದ್ದಾರೆಂದು ಸಾಬೀತಾಗಬೇಕಾಗಿದೆ ಎಂದು ಜಿಫ್ರಿ ತಂಙಳ್ ಹೇಳಿದರು. ಕೊಲೆ ಕೃತ್ಯಕ್ಕೆ, ಅಕ್ರಮಗಳಿಗೆ ಯಾರೂ ಮುಂದಾಗಬಾರದೆಂದು ಜಿಫ್ರಿ ತಂಙಳ್ ಹೇಳಿದರು. ಈ ಹಿಂದೆ ಔಫ್‍ರ ಮನೆಗೆ ಮುಸ್ಲಿಂ ಯೂತ್ ಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್ ಭೇಟಿ ನೀಡಿದ್ದರು. ಆರೋಪಿಗಳನ್ನು ಪಾರ್ಟಿಯಿಂದ ಅಮಾನತು ಮಾಡಲಾಗಿದೆ. ಕೊಲೆ ಕೃತ್ಯವನ್ನು ಖಂಡಿಸುವುದಾಗಿ ಮುನವ್ವರಲಿ ತಂಙಳ್ ಹೇಳಿದ್ದರು.












