ಸನ್ಮಾರ್ಗ ವಾರ್ತೆ
ಬೆಂಗಳೂರು: ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಕರ್ನಾಟಕದ ವತಿಯಿಂದ ಬೀದರ್, ಶಿರಾಲ್ ಕೊಪ್ಪ, ಹುಮ್ನಾಬಾದ್, ಉಳ್ಳಾಲ, ಬೆಂಗ್ರೆ, ಬಾಗಲಕೋಟೆ, ಹಂಗಲ್ ಘಟಕಗಳಲ್ಲಿ ‘ಮರಳಿ ಶಾಲೆಗೆ ಸ್ವಾಗತ’ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಿ.ಐ.ಓ ಕಾರ್ಯಕರ್ತೆಯರು ಶಾಲಾ ಪರಿಸರವನ್ನು ಸ್ವಚ್ಛಗೊಳಿಸಿ ವಿದ್ಯಾರ್ಥಿಗಳಿಗೆ ಸ್ವಚ್ಛ ವಾತಾವರಣವನ್ನು ಕಲ್ಪಿಸುವಲ್ಲಿ ಯಶಸ್ವಿಯಾದರು. ವಿದ್ಯಾರ್ಥಿಗಳ ಸುರಕ್ಷಿತೆಯ ದೃಷ್ಟಿಯಿಂದ ಬೆಂಗ್ರೆ ಘಟಕವು ಸ್ಯಾನಿಟೈಝರ್ ಹಾಗೂ ಥರ್ಮೋ ಸ್ಕ್ಯಾನರನ್ನು ಉಡುಗೊರೆಯಾಗಿ ನೀಡಿತು.
ಶಿರಾಲ್ ಕೊಪ್ಪಾದಲ್ಲಿ ಉತ್ತಮ ಕಾರ್ಯಕ್ಕಾಗಿ ಜಿ.ಐ.ಓ ಕಾರ್ಯಕರ್ತೆಯರನ್ನು ಶಾಲಾ ವೃಂದದವರು ಅಭಿನಂದನಾ ಫಲಕವನ್ನು ನೀಡಿ ಸನ್ಮಾನಿಸಿದರು. ಒಟ್ಟು 12 ಶಾಲೆಗಳನ್ನು ಸ್ವಚ್ಛಗೊಳಿಸುವ ಮೂಲಕ ಶಿಕ್ಷಣ ಸಂಸ್ಥೆಗಳ ಪ್ರಶಂಸೆಗೆ ಜಿ.ಐ.ಓ ಪಾತ್ರವಾಗಿದೆ.













