ಸನ್ಮಾರ್ಗ ವಾರ್ತೆ
ಮಧ್ಯಪ್ರದೇಶ: ಇಲ್ಲಿನ ಗ್ವಾಲಿಯರ್‌ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕೊಂದ ಹಂತಕ ನಾಥೂರಾಮ್ ಗೋಡ್ಸೆಯ ಹೆಸರಿನಲ್ಲಿ ಗ್ರಂಥಾಲಯ ಆರಂಭಿಸಿರುವ ಹಿಂದೂ ಮಹಾ ಸಭಾದ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ಇದೊಂದು ದುರದೃಷ್ಟಕರ ಸಂಗತಿ ಎಂದು ಹೇಳಿದೆ.
ಗಾಂಧಿಯವರನ್ನು ಕೊಂಡ ಹಂತಕ ಗೋಡ್ಸೆ ಗೆ ಮೀಸಲಾಗಿರುವ ಅಧ್ಯಯನ ಕೇಂದ್ರವನ್ನು ತೆರೆದಿರುವ ಹಿಂದೂ ಮಹಾಸಭಾ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಝ್ ಹೇಳಿದ್ದಾರೆ.
“ಇದು ತುಂಬಾ ದುರದೃಷ್ಟಕರ. ಗೋಡ್ಸೆ ಗಾಂಧಿಯನ್ನು ಕೊಂದ ವ್ಯಕ್ತಿ, ಹಿಂದೂ ಮಹಾಸಭಾ ಅವನನ್ನು ಪೂಜಿಸುತ್ತಿರುವುದಲ್ಲದೆ, ಹಿಂಸಾಚಾರವನ್ನು ಪ್ರೋತ್ಸಾಹಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಮಧ್ಯಪ್ರದೇಶ ಬಿಜೆಪಿಯ ಮುಖಂಡ ಪಂಕಜ್ ಚತುರ್ವೇದಿ, ಇಂತಹ ಘಟನೆಗಳ ಬಗ್ಗೆ ಸರಕಾರ ಈ ಹಿಂದೆ ಕ್ರಮ ತೆಗೆದಿತ್ತು. ಈ ಬಗ್ಗೆ ಕೂಡಾ ಸೂಕ್ತ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆಯುವುದಾಗಿ ಹೇಳಿದ್ದಾರೆ.
ಭಾರತದ ವಿಭಜನೆಯ ಬಗ್ಗೆ ಯುವಕರಿಗೆ “ಶಿಕ್ಷಣ” ನೀಡಲು ಮತ್ತು ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಜಾಗೃತಿ ಮೂಡಿಸಲು ಹಿಂದೂ ಮಹಾಸಭಾ ಭಾನುವಾರ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ತನ್ನ ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆ ಕುರಿತು “ಜ್ಞಾನಶಾಲೆ” ತೆರೆದಿತ್ತು. “ನಾಥುರಾಮ್ ಗೋಡ್ಸೆ” ಜ್ಞಾನ ಶಾಲೆಯು ಭಾರತದ ವಿಭಜನೆಯ ವಿವಿಧ ಅಂಶಗಳ ಬಗ್ಗೆ ಯುವ ಜನಾಂಗಕ್ಕೆ ತಿಳಿಸಲಿದೆ ಮತ್ತು ಗುರು ಗೋಬಿಂದ್ ಸಿಂಗ್, ಛತ್ರಪತಿ ಶಿವಾಜಿ ಮತ್ತು ಮಹಾರಾಣಾ ಪ್ರತಾಪ್ ಅವರಂತಹ ರಾಷ್ಟ್ರೀಯ ನಾಯಕರ ಮಾಹಿತಿಯನ್ನು ಪ್ರಸಾರ ಮಾಡುತ್ತದೆ ” ಎಂದು ಹಿಂದೂ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾ ರದ್ವಾಜ್ ಉದ್ಘಾಟನೆಯ ಸಂದರ್ಭದಲ್ಲಿ ಹೇಳಿದ್ದರು.












