ಗಾಳಿಪಟ ಹಾರಿಸುವ ವೇಳೆ ಸೆಗಣಿ ಗುಂಡಿಗೆ ಬಿದ್ದು ಬಾಲಕನ ದಾರುಣ ಸಾವು

0
588

ಸನ್ಮಾರ್ಗ ವಾರ್ತೆ

ಮುಂಬೈ: ಗಾಳಿಪಟ ಹಾರಿಸುವ ವೇಳೆ ಸೆಗಣಿ ಗುಂಡಿಗೆ ಬಿದ್ದು ಹತ್ತು ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಕಾಂಡಿವಾಲಿಯಲ್ಲಿ ಗುರುವಾರ ನಡೆದಿದೆ. ಗಾಳಿಪಟ ಹಾರಿಸುವ ವೇಳೆ ದಾರ ಕತ್ತರಿಸಲ್ಪಟ್ಡು ಅದು ಸೆಗಣಿ ಗುಂಡಿಗೆ ಬಿದ್ದಿತ್ತು. ಅದನ್ನು ಮೇಲೆತ್ತಲು ಬಾಲಕ ಬಗ್ಗಿದಾಗ ಗುಂಡಿಗೆ ಬಿದ್ದಿದ್ದಾನೆ. ಸಮೀಪದಲ್ಲಿ ಕಟ್ಟಡದ ಕೆಲಸದಲ್ಲಿದ್ದ ಕಾರ್ಮಿಕರು ಬೊಬ್ಬೆ ಕೇಳಿ ಓಡಿ ಬಂದರೂ ಬಾಲಕನನ್ನು ಗುಂಡಿಯಿಂದ ಮೇಲೆತ್ತಲು ಆಗಿಲ್ಲ.

ಗುಂಡಿ ಬಹಳ ಆಳದಲ್ಲಿತ್ತು. ಊರವರು, ಪೊಲೀಸರು ಮತ್ತು ಅಗ್ನಿ ಶಾಮಕ ದಳ ಕಷ್ಟಪಟ್ಟು ಮೇಲೆತ್ತಲು ನೋಡಿದಾಗ ಬಾಲಕನ ದೇಹವು ಸಂಪೂರ್ಣ ಗುಂಡಿಯಲ್ಲಿ ಹೂತು ಹೋಗಿತ್ತು. ನಂತರ ಕ್ರೇನ್ ಉಪಯೋಗಿಸಿ ಬಾಲಕನ್ನು ಹೊರತರಲಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಮಗು ಬದುಕಿ ಉಳಿಯಲಿಲ್ಲ. ಪೊಲೀಸರು ಅಪಘಾತ ಸಾವು, ನಿರ್ಲಕ್ಷ್ಯ ಎಂದು ಕೇಸು ದಾಖಲಿಸಿಕೊಂಡಿದ್ದಾರೆ.