ಇಸ್ಲಾಂ ಸ್ವೀಕರಿಸಲು ಅನುಮತಿ ಯಾಚಿಸಿ ಯುವಕನಿಂದ ಗುಜರಾತ್ ಹೈಕೋರ್ಟ್‌ಗೆ ಅರ್ಜಿ

0
823

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್: ಇಸ್ಲಾಂ ಸ್ವೀಕರಿಸಲು ಅನುಮತಿ ಕೋರಿ 32 ವರ್ಷದ ಹಿಂದೂ ಯುವಕನೊಬ್ಬ ಗುಜರಾತ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಇಸ್ಲಾಮ್‍ಗೆ ಮತಾಂತರಗೊಳ್ಳಲು ಅನುಮತಿ ಕೇಳಿ ಭರೂಚ್ ಜಿಲ್ಲಾಧಿಕಾರಿಗೆ ನೀಡಿದ ಅರ್ಜಿ ಒಂದು ವರ್ಷದಿಂದ ತೀರ್ಮಾನವಾಗದ ಹಿನ್ನೆಲೆಯಲ್ಲಿ ಅರ್ಜಿದಾರ ಜಿಗ್ನೇಶ್ ಪಟೇಲ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ತನಿಖಿಸಿ ವರದಿ ನೀಡಿದರೂ ತನ್ನ ಅರ್ಜಿಯನ್ನು ಜಿಲ್ಲಾಧಿಕಾರಿ ತಡೆಹಿಡಿದಿದ್ದಾರೆ ಎಂದು ಜಿಗ್ನೇಶ್ ಹೇಳುತ್ತಿದ್ದಾರೆ. ಅರ್ಜಿದಾರ ಜಿಲ್ಲಾಧಿಕಾರಿಗೆ ಶೀಘ್ರದಲ್ಲಿ ತೀರ್ಮಾನ ತಳೆಯಲು ಸೂಚಿಸಬೇಕೆಂದು ಅರ್ಜಿಯಲ್ಲಿ ಹೈಕೋರ್ಟನ್ನು ಆಗ್ರಹಿಸಿದ್ದಾರೆ. ಆರು ವರ್ಷಗಳಿಂದ ಮುಸ್ಲಿಮ್ ಆಗಿ ಸ್ವ-ಇಚ್ಛೆಯಿಂದ ಮತಾಂತರಗೊಂಡು ಬದುಕುತ್ತಿದ್ದೇನೆ ಎಂದು ಅರ್ಜಿಯಲ್ಲಿ ಅರ್ಜಿದಾರ ತಿಳಿಸಿದ್ದಾರೆ.