ಪಾರ್ಟಿ ವಿರೋಧಿ ಚಟುವಟಿಕೆ: ಶಾಸಕಿಯನ್ನು ಉಚ್ಛಾಟಿಸಿದ ತೃಣಮೂಲ ಕಾಂಗ್ರೆಸ್

0
593

ಸನ್ಮಾರ್ಗ ವಾರ್ತೆ

ಕೊಲ್ಕತಾ: ಪಾರ್ಟಿ ವಿರೋಧಿ ಚಟುವಟಿಕೆಗಳಿಗಾಗಿ ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್‍ನ ಬಿಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕಿ ಬೈಶಾಲಿ ದಾಲ್ಮೀಯರನ್ನು ಮುಖ್ಯಮಂತ್ರಿ ಬ್ಯಾನರ್ಜಿ ಪಾರ್ಟಿಯಿಂದ ಉಚ್ಛಾಟಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದು ಶಾಸಕಿಯ ವಿರುದ್ಧ ಆರೋಪವಾಗಿದ್ದು ಪ್ರಾಮಾಣಿಕರಿಗೆ ಪಾರ್ಟಿಯಲ್ಲಿ ಸ್ಥಾನವಿಲ್ಲ ಎಂದು ಬೈಶಾಲಿ ಹೇಳಿಕೆ ನೀಡಿದ್ದರು. ನಂತರ ತೃಣಮೂಲಕ ಕಾಂಗ್ರೆಸ್‍ನ ಶಿಸ್ತು ಸಮಿತಿ ಸಭೆ ಸೇರಿ ಶಾಸಕಿಯನ್ನು ಪಕ್ಷದಿಂದ ಹೊರಹಾಕಿದೆ.

ಹಿರಿಯ ತೃಣಮೂಲ ನಾಯಕ ರಜೀಬ್ ಬ್ಯಾನರ್ಜಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಗಂಟೆಗಳೊಳಗೆ ಬೈಶಾಕಿಯವರನ್ನು ಪಕ್ಷ ಹೊರಹಾಕಿದೆ. ಇವರೆಲ್ಲ ಬಿಜೆಪಿ ಸೇರ್ಪಡೆಯಾಗಲಿದ್ದಾರೆಂದು ವರದಿಯಾಗಿದೆ.