ಕೇಂದ್ರ ಬಜೆಟ್: ಲಾಕ್‍ಡೌನ್ ಕಾಲದ ಯೋಜನೆಗಳಿಂದ ದೇಶಕ್ಕೆ ಪ್ರಯೋಜನವಾಗಿದೆ- ಕೇಂದ್ರ ವಿತ್ತ ಸಚಿವೆ

0
547

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹೊಸ ಆರ್ಥಿಕ ವರ್ಷದ ಕೇಂದ್ರ ಸರಕಾರದ ಬಜೆಟನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪಾರ್ಲಿಮೆಂಟಿನಲ್ಲಿ ಮಂಡಿಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಆವಿಷ್ಕರಿಸಿದ ಯೋಜನೆಗಳಿಂದ ದೇಶಕ್ಕೆ ಪ್ರಯೋಜನವಾಗಿದೆ ಎಂದು ಸೀತಾರಾಮನ್ ಬಜೆಟ್ ಭಾಷಣದಲ್ಲಿ ಹೇಳಿದರು. ಹಿಂದೆಂದೂ ಆಗದ ಬಿಕಟ್ಟು ಅರ್ಥವ್ಯವಸ್ಥೆ ಎದುರಿಸುತ್ತಿದ್ದು ಮೂರು ಆತ್ಮ ನಿರ್ಭರ್ ಪ್ಯಾಕೇಜುಗಳು ಜಿಡಿಪಿಯ ಶೇ.13ರಷ್ಟು ವ್ಯಯಿಸಲಾಗಿತ್ತು.

ಕೊರೋನ ವ್ಯಾಕ್ಸಿನ್ ಅಭಿವೃದ್ದಿ ದೇಶದ ಸಾಧನೆಯಾಗಿದೆ. ಇನ್ನೂ ಎರಡು ವ್ಯಾಕ್ಸಿನ್‍ಗಳಿಗೆ ಅಂಗೀಕಾರ ಲಭಿಸಲಿದೆ. ಭಾರತದ ಜನರಿಗೆ ವ್ಯಾಕ್ಸಿನ್ ಮತ್ತು ಜಗತ್ತಿನ ನೂರರಷ್ಟು ದೇಶಗಳಿಗೆ ಅಗತ್ಯವಿರುವ ವ್ಯಾಕ್ಸಿನ್ ದೇಶ ತಯಾರಿಸಲಿದೆ ಎಂದು ಸಚಿವೆ ಹೇಳಿದರು. ತೀವ್ರ ಆರ್ಥಿಕ ಬಿಕ್ಕಟ್ಟಿನ ನಡುವೆ ಮೋದಿ ಸರಕಾರ ಒಂಬತ್ತನೇ ಬಜೆಟ್ ಮಂಡಿಸುತ್ತಿದೆ. ಕೊರೋನ ಹಿನ್ನೆಲೆಯಲ್ಲಿ ಕಾಗದ ಮುಕ್ತ ಮತ್ತು ಸಂಪೂರ್ಣ ಇ-ಬಜೆಟ್ ಮಂಡಿಸಲಾಗುತ್ತಿದೆ.