ಸನ್ಮಾರ್ಗ ವಾರ್ತೆ
ಗಾಂಧಿನಗರ: ಗುಜರಾತ್ನಲ್ಲಿ ಖಾಲಿಯಿರುವ ಎರಡು ರಾಜ್ಯಸಭಾ ಸ್ಥಾನಗಳಿಗೆ ಉಪಚುನಾವಣೆ ಮಾರ್ಚ್ ಒಂದರಂದು ನಡೆಯಲಿದೆ. ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, ಬಿಜೆಪಿ ನಾಯಕ ಅಭಯ್ ಗಣಪತ್ರೇಯ ಭಾರದ್ವಾಜ್ ನಿಧನರಾಗಿ ತೆರವಾದ ಸ್ಥಾನಗಳಿಗೆ ಚುನಾವಣೆ ಮಾರ್ಚ್ಒಂದರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಅಹ್ಮದ್ ಪಟೇಲ್ 2020 ನವೆಂಬರ್ 25ಕ್ಕೆ ಮತ್ತು ಅಭಯ್ ಗಣಪತ್ರೇಯ ಭಾರಧ್ವಾಜ್ 2020 ಡಿಸೆಂಬರ್ ಒಂದಕ್ಕೆ ನಿಧನರಾಗಿದ್ದರು. ಕೊರೊನ ಹಿನ್ನೆಲೆಯಲ್ಲಿ ಚುನಾವಣಾ ವ್ಯವಸ್ಥೆಗೆ ಹಿರಿಯ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ ಎಂದು ಚುನಾವಣಾ ಆಯೋಗದ ಗುಜರಾತ್ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ. ಗುಜರಾತ್ ಚೀಫ್ ಇಲಕ್ಟರಲ್ ಆಫಿಸರ್ ಚುನಾವಣೆಯಲ್ಲಿ ನಿರೀಕ್ಷಕರಾಗಿರುವರು.












