ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕಾಶ್ಮೀರದಲ್ಲಿ ಕಪ್ಪು ಮಂಜು ಸುರಿದರೆ ಮಾತ್ರ ತಾನು ಬಿಜೆಪಿಗೆ ಸೇರುವೆ ಎಂಬ ವದಂತಿಗೆ ಉತ್ತರಿಸಿರುವ ಕಾಂಗ್ರೆಸ್ ನ ಹಿರಿಯ ನಾಯಕ ಗುಲಾಂ ನಬಿ ಆಝಾದ್, ಬಿಜೆಪಿ ಸೇರ್ಪಡೆ ವದಂತಿ ನಿರಾಕರಿಸಿದ್ದಾರೆ.
ಹಿಂದುಸ್ಥಾನ್ ಟೈಮ್ಸ್ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಮಾತ್ರವಲ್ಲ ಬೇರೆ ಯಾವುದೇ ಪಾರ್ಟಿಗೆ ಸೇರುವುದಿಲ್ಲ ಎಂದು ಗುಲಾಂ ನಬಿ ಆಝಾದ್ ಹೇಳಿದರು. ತಾನು ಬಿಜೆಪಿ ಸೇರುವೆ ಎಂಬ ವದಂತಿಯನ್ನು ಯಾರು ಹರಡುತ್ತಿದ್ದಾರೆ ಎಂದು ಗೊತ್ತಿಲ್ಲ ಅಂದರು.
ರಾಜಮಾತೆ ಸಿಂಧ್ಯ ಪ್ರತಿಪಕ್ಷದ ಉಪನಾಯಕಿಯಾಗಿದ್ದಾಗ ತನ್ನ ವಿರುದ್ಧ ಆರೋಪಗಳೊಂದಿಗೆ ಮುಂದೆ ಬಂದಿದ್ದರು. ಆರೋಪವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ವಿಶೇಷ ಸಮಿತಿ ರಚಿಸಬೇಕೆಂದು ಆಗ್ರಹಿಸಿದ್ದೆ. ಅಟಲ್ ಬಿಹಾರಿ ವಾಪೇಯಿ, ಸಿಂಧ್ಯ, ಎಲ್ಕೆ ಅಡ್ವಾಣಿ ಇದ್ದ ಕಮಿಟಿ ರೂಪಿಸಲು ಹೇಳಿದೆ. ಹದಿನೈದು ದಿನಗಳಲ್ಲಿ ವರದಿ ಸಲ್ಲಿಸಬೇಕು. ಆರೋಪ ನಿಜವಾದರೆ ಯಾವ ಶಿಕ್ಷೆಗೂ ತಯಾರೆಂದು ಹೇಳಿದೆ. ಆಗ ವಾಜಪೇಯಿ ತನ್ನ ಸಮೀಪಕ್ಕೆ ಬಂದು ತನ್ನೊಂದಿಗೆ ಸದನದ ಕ್ಷಮೆಯಾಚಿಸಿದ್ದರು. ಸಿಂಧ್ಯರಿಗೆ ತನ್ನ ಬಗ್ಗೆ ಗೊತ್ತಿಲ್ಲದಿರಬಹುದು. ಆದರೆ ವಾಜಪೇಯಿಯವರಿಗೆ ಚೆನ್ನಾಗಿ ಗೊತ್ತಿತ್ತು ಎಂದು ವಿವಾದಗಳಿಗೆ ಉತ್ತರವಾಗಿ ಗುಲಾಂ ನಬಿ ಆಝಾದ್ ಹೇಳಿದರು.
1990ರಿಂದ ನನಗೂ ನರೇಂದ್ರ ಮೋದಿಗೂ ಪರಿಚಯವಿದೆ. ನಾವು ಎರಡು ಪಾರ್ಟಿಗಳ ಪ್ರಧಾನ ಕಾರ್ಯದರ್ಶಿ ಆಗಿದ್ದೆವು. ನಮ್ಮ ನಮ್ಮ ಆಶಯಗಳನ್ನು ವ್ಯಕ್ತಪಡಿಸುವುದಕ್ಕೆ ತುಸು ಚರ್ಚೆಗೂ ಒಟ್ಟಿಗೆ ಬಂದೆವು. ವಾದ ಪ್ರತಿವಾದ ನಡೆಸಿದೆವು. ನಂತರ ಕೆಲವೊಮ್ಮೆ ನಾವು ಪರಸ್ಪರ ಒಟ್ಟಿಗೆ ಕೂತು ಚಾ ಕುಡಿದು ಸೌಹಾರ್ದದ ಮಾತುಕತೆ ಆಡಿದೆವು. ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನಾನು ಕೇಂದ್ರ ಆರೋಗ್ಯ ಸಚಿವ ಆಗಿದ್ದೆ. ವಿವಿಧ ಅಗತ್ಯಗಳಿಗೆ ನಾವು ಪರಸ್ಪರ ಭೇಟಿಯಾಗಿದ್ದೆವು. ಪರಸ್ಪರ ನಾವು ನಿಕಟವಾಗಿದ್ದೆವು ಆದ್ದರಿಂದ ನಾವು ಪರಸ್ಪರ ಅತ್ತದ್ದೆಂದು ಗುಲಾಂ ನಬಿ ಆಝಾದ್ ಹೇಳಿದರು.
ಶಶಿ ತರೂರು ಮೋದಿಯವರ ಕಣ್ಣೀರು ನಾಟಕವೆಂದು ಹೇಳಿದರು. ಅವರು ಯಾವ ಅರ್ಥದಲ್ಲಿ ಎಂದು ಹೇಳಿಕೆ ನೀಡಿದ್ದೆಂದು ನನಗೆ ಗೊತ್ತಿಲ್ಲ. ಒಬ್ಬ ಕಾಂಗ್ರೆಸ್ ನಾಯಕ ರಾಜ್ಯಸಭೆಯಿಂದ ಹೊರಹೋಗುತ್ತಿದ್ದಾರೆ ಎಂದು ಮಾತ್ರ ಮೋದಿ ಚಿಂತಿಸಿರುವುದು ಎಂದು ಗುಲಾಂ ನಬಿ ಆಝಾದ್ ಹೇಳಿದರು.












