ಸನ್ಮಾರ್ಗ ವಾರ್ತೆ
ದುಬೈ: ವಿಸಿಟಿಂಗ್ ವೀಸಾಗಳ ಕಾಲಾವಧಿಯನ್ನು ಉಚಿತವಾಗಿ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ ಎಂದು ವರದಿಯಾಗಿದೆ. ಅವಧಿ ಮೀರಿದ ವೀಸಾಗಳಿಗೆ ಇದೊಂದು ಬಹುದೊಡ್ಡ ಅವಕಾಶವಾಗಿದ್ದು ಕಾಲಾವಧಿ ಮುಗಿದ ವೀಸಾಗಲೂ ಎಮಿಗ್ರೇಶನ್ ವೆಬ್ಸೈಟಿನಲ್ಲಿ ಪರಿಶೀಲಿಸಿದಾಗ ಸಮಯ ವಿಸ್ತರಣೆ ಆಗಿರುವುದು ಕಂಡು ಬಂದಿದೆ. ಡಿಸೆಂಬರಿನಲ್ಲಿ ವೀಸಾ ಅವಧಿ ಕೊನೆಗೊಂಡವರ ಅವಧಿ ಈ ರೀತಿಯಲ್ಲಿ ವಿಸ್ತರಣೆಯಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಪ್ರಕಟನೆ ಹೊರಬಂದಿಲ್ಲ.
ಸಮಯ ಮುಗಿದು ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿರುವ ಅನಿವಾಸಿಗಳಿಗೆ ಇದು ಉಪಯುಕ್ತವಾಗಿದ್ದು ಹಲವರು ವೀಸಾ ಅವದಿ ಮುಗಿದ ಮೇಲೆಯೂ ಇಲ್ಲೇ ತಂಗಿದ್ದಾರೆ. ಮುಂದಿನ ದಿನಗಳಲ್ಲಿ ವೀಸಾ ಅವಧಿ ಕೊನೆಗೊಳ್ಳುವವರು ಇದ್ದಾರೆ. ವೀಸಾ ನವೀಕರಿಸಬೇಕಾದರೆ ಸುಮಾರು 1000 ದಿರ್ಹಮ್ ಬೇಕು.
ಆಹಾರಕ್ಕೂ ಹಣವಿಲ್ಲದ ಅವಸ್ಥೆಯಲ್ಲಿ ಅನಿವಾಸಿಗಳಿದ್ದು ವೀಸಾ ಅವಧಿ ವಿಸ್ತರಣೆ ಅವರಲ್ಲಿ ಭರವಸೆ ತುಂಬಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದರೆ ಮಾತ್ರ ಅನಿವಾಸಿಗಳಿಗೆ ಇದರಲ್ಲಿ ನಂಬಿಕೆ ಹೊಂದಬಹುದು. ಈ ಹಿಂದೆಯೂ ಲಾಕ್ಡೌನ್ ಆಗಿದ್ದಾಗ ಯುಎಇ ಉಚಿತವಾಗಿ ವೀಸಾ ಅವಧಿಯನ್ನು ವಿಸ್ತರಿಸಿತ್ತು.












