ಪಂಜಾಬಿನಲ್ಲಿ ಕಾಂಗ್ರೆಸ್ ವರ್ಚಸ್ಸು ವೃದ್ಧಿ: ಪಕ್ಷೇತರ ಅಭ್ಯರ್ಥಿಗಿಂತಲೂ ಹಿನ್ನಡೆ ಅನುಭವಿಸುತ್ತಿರುವ ಬಿಜೆಪಿ

0
739

ಸ್ಥಳೀಯ ಸಂಸ್ಥೆಯ ಚುನಾವಣೆಯ ಫಲಿತಾಂಶ

ಸನ್ಮಾರ್ಗ ವಾರ್ತೆ

ಜಲಂಧರ್: ರಾಜ್ಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಇಂದು ಪಂಜಾಬ್‌ನ ಏಳು ಪುರಸಭೆ ಸಂಸ್ಥೆಗಳನ್ನು ಕ್ಲೀನ್ ಸ್ವೀಪ್ ಸಾಧಿಸಿದೆ ಪಕ್ಷವು ಮೊಗಾ, ಹೋಶಿಯಾರ್‌ಪುರ್, ಕಪುರ್ಥಾಲಾ, ಅಬೋಹರ್, ಪಠಾಣ್‌ಕೋಟ್, ಬಟಾಲಾ, ಮತ್ತು ಬಟಿಂಡಾ – ಇವುಗಳೆಲ್ಲವನ್ನೂ ಪಡೆದುಕೊಂಡಿತು. 53 ವರ್ಷಗಳ ನಂತರ ಕಾಂಗ್ರೆಸ್ ತನ್ನ ಸಾಧನೆ ಮೆರೆಯುತ್ತಿದೆ.

ಬತಿಂಡಾ ಲೋಕಸಭಾ ಕ್ಷೇತ್ರವನ್ನು ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ಹರ್ಸಿಮ್ರತ್ ಬಾದಲ್ ಪ್ರತಿನಿಧಿಸುತ್ತಿದ್ದಾರೆ. ಇದು ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳಿಂದ ರಾಜ್ಯದ ರೈತರಲ್ಲಿ ಉಂಟಾದ ಅಶಾಂತಿಯ ನಂತರ ದೀರ್ಘಕಾಲದ ಮಿತ್ರ ಬಿಜೆಪಿಯೊಂದಿಗೆ ಇತ್ತೀಚೆಗೆ ಬೇರ್ಪಟ್ಟಿದೆ. ಫಲಿತಾಂಶದಲ್ಲಿ ಕಾಂಗ್ರೆಸ್‍ನ ಸ್ಪಷ್ಟ ಮೇಲುಗೈ ಗೋಚರಿಸುತ್ತಿದೆ. ಬಿಜೆಪಿಯು ಪಕ್ಷೇತರ ಅಭ್ಯರ್ಥಿಗಿಂತಲೂ ಹಿನ್ನಡೆ ಅನುಭವಿಸುತ್ತಿರುವ ಬಗ್ಗೆ ವರದಿಯಾಗಿದೆ.

ಅಮೃತಸರದ ಅಜನಾಲ ತಾಲೂಕಿ ಒಟ್ಟು ಹದಿನೈದು ಸೀಟುಗಳಲ್ಲಿ ಎಂಟು ಸ್ಥಾನಗಳ್ಲಿ ಅಕಾಲಿದಳ ಮತ್ತು 7 ಸೀಟುಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಜಂಡಿಯಾಲದಲ್ಲಿ ಆರು ಸೀಟುಗಳಲ್ಲಿ ಕಾಂಗ್ರೆಸ್ ಮತ್ತು ಎರಡು ಸ್ಥಾನಗಳಲ್ಲಿ ಅಕಾಲಿ ದಳ ಜಯಭೇರಿ ಬಾರಿಸಿದೆ. ಅಜ್‍ನಾಳದ ವಾರ್ಡ್ ನಂಬರ್ ಒಂದರಲ್ಲಿ ಕಾಂಗ್ರೆಸ್‍ನ ಜೊಗಿಂದರ್ ಕೌರ್ ಗೆಲುವು ಪಡೆದರು. ವಾರ್ಡ್ ನಂಬ್ರ 2ರಲ್ಲಿ ಅಕಾಲಿ ದಳದ ಬಿಕ್ರಮ್ ಬೇಡಿ ವಿಜಯಿಯಾಗಿದ್ದಾರೆ. ವಾರ್ಡ್ ನಂಬ್ರ 3ರಲ್ಲಿ ಅಕಾಲಿದಳದ ಸಿಮ್ಮಿ ಸರೀನ್ ಗೆದ್ದಿದ್ದಾರೆ. ವಾರ್ಡ್ ನಂಬ್ರ 4ರಲ್ಲಿ ಕಾಂಗ್ರೆಸ್‍ನ ಗುರದೇವ್ ಸಿಂಗ್ ಗೆಲುವು ಪಡೆದಿದ್ದಾರೆ. ವಾರ್ಡ್ ನಂಬ್ರ 5ರಲ್ಲಿ ಕಾಂಗ್ರೆಸ್‍ನ ಗ್ಯಾನ್ ಕೌರ್ ಜಯಗಳಿಸಿದ್ದಾರೆ.

ಲೂಧಿಯಾನದ ಮುಲ್ಲಾಂಪುರ ದಾಖಾ ವಾರ್ಡ್‍ನ8ರಲ್ಲಿ ಕಾಂಗ್ರೆಸ್‍ನ ಜಬ್‍ರಜಂಗ್ ಸಿಂಗ್ ಅಕಾಲಿದಳದ ಸುಶೀಲ್ ಕುಮಾರ್‍ರನ್ನು 446 ಮತಗಳಿಂದ ಸೋಲಿಸಿದ್ದಾರೆ. ಸಮರಾಲಾ ನಗರ ಸಭೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತಗಳಿಸಿದೆ. ಹತ್ತು ಸೀಟುಗಳಲ್ಲಿ ಗೆಲುವು ಸಾಧಿಸಿದ್ದು ಅಕಾಲಿದಳಕ್ಕೆ 5 ಸೀಟುಗಳು ಹೋಗಿವೆ. ಇಲ್ಲಿ ಆಮ್ ಆದ್ಮಿ ಪಾರ್ಟಿ ಹದಿನೈದು ವಾರ್ಡ್‍ಗಳಲ್ಲಿ ಸ್ಪರ್ಧಿಸಿತ್ತು ಹದಿನೈದರಲ್ಲೂ ಸೋಲುಂಡಿದೆ.

ಪಠಾಣ್‍ಕೋಟ್‍ನ ಸುಜಾನ್‍ಪುರದಲ್ಲಿ ಕಾಂಗ್ರೆಸ್‍ಗೆ 8 ಸೀಟು ಸಿಕ್ಕಿವೆ. ಬಿಜೆಪಿಗೆ ಆರು ಮತ್ತು ಪಕ್ಷೇತರ ಅಭ್ಯರ್ಥಿ ಒಬ್ಬರು ಗೆದ್ದರು. ಸುಜಾನಪುರ ವಾರ್ಡ್ ನಂಬರ್12ರಲ್ಲಿ ಪಕ್ಷೇತರ ಅಭ್ಯರ್ಥಿ ಸುರೇಂದ್ರ ಮಿನ್ಹಾಸ್ ಗೆದ್ದಿದ್ದಾರೆ. ಮೋಗಾದ ಕಾಂಗ್ರೆಸ್ ಶಾಸಕ ಹರಜೋತ್ ಕಮಲ್‍ರ ಪತ್ನಿ ಸೋಲನ್ನಪ್ಪಿದ್ದಾರೆ.

ಇಲ್ಲಿ ವಾರ್ಡ್ ನಂಬರ್ 1ರಲ್ಲಿ ಕಾಂಗ್ರೆಸ್ಸಿನ ಸುರೀಂದರ್ ಕೌರ್, ವಾರ್ಡ್ 2ರಲ್ಲಿ ಕಾಂಗ್ರೆಸ್ಸಿನ ಮಲಕೀತ್ ಸಿಂಘ್, ವಾರ್ಡ್3ರಲ್ಲಿ ಗುರುಕೃಪಾಲ್ ಸಿಂಗ್ ಕಾಂಗ್ರೆಸ್, ವಾರ್ಡ್ 4ರಲ್ಲಿ ಕಾಂಗ್ರೆಸ್ಸಿನ ಮನ್‍ಜೀತ್ ಕೌರ್, ವಾರ್ಡ್ 5ರಲ್ಲಿ ಕಾಂಗ್ರೆಸ್ಸಿನ ಧರ್ಮೇಂದರ್ ಸಿಂಗ್, ವಾರ್ಡ್6ರಲ್ಲಿ ಹರ್‍ಮೀತ್ ಸಿಂಗ್ ಪಕ್ಷೇತರ, ವಾರ್ಡ್7ರಲ್ಲಿ ಬಲವೀರ್ ಸಿಂಗ್ ಲಾಲಾ ಕಾಂಗ್ರೆಸ್, ವಾರ್ಡ್ 8ರಲ್ಲಿ ಹರಪ್ರೀತ್ ಸಿಂಗ್ ಕಾಂಗ್ರೆಸ್, ವಾರ್ಡ್ 9ರಲ್ಲಿಶಿರೊಮಣಿ ಅಕಾಲಿದಳದ ಹರ್‍ಪಂದರ್ ಸಿಂಘ್, ವಾರ್ಡ್ ನಂಬರ್ ಹತ್ತರಲ್ಲಿ ಅನುಸೋನಿ ಕಾಂಗ್ರೆಸ್, ವಾರ್ಡ್ ಹನ್ನೊಂದರಲ್ಲಿ ಕಾಂಗ್ರೆಸ್ಸಿನ ಬಲಜಿಂದರ್ ಕೌರ್ ವಿಜಯಿಯಾಗಿದ್ದಾರೆ.

ರಾಜಪುರದಲ್ಲಿ ಕಾಂಗ್ರೆಸ್ 27 ವಾರ್ಡ್‍ಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದರೆ ಬಿಜೆಪಿ ಕೇವಲ ಎರಡು ಸೀಟುಗಳಲ್ಲಿ ಗೆದ್ದಿದೆ. ಗೊರಾಯದಲ್ಲಿ ಬಿಜೆಪಿ ಖಾತೆ ತೆರೆಯಲು ವಿಫಲವಾಗಿದೆ. ಇಲ್ಲಿ ಕಾಂಗ್ರೆಸ್ 15 ಸೀಟುಗಳಲ್ಲಿ 11ರಲ್ಲಿ ಗೆಲುವು ಸಾಧಿಸಿತು. ಇಲ್ಲಿ ಮೂರು ಮಂದಿ ಪಕ್ಷೇತರು ಒಂದು ಸ್ಥಾನದಲ್ಲಿ ಬಿಎಸ್ಪಿ ಜಯಗಳಿಸಿದೆ. ಇಲ್ಲಿ ಎಎಪಿ, ಅಕಾಲಿದಳ, ಬಿಜೆಪಿ ಖಾತೆಯನ್ನು ತೆರೆಯಲು ವಿಫಲವಾಗಿದೆ.

ಜೀರಕಪುರದಲ್ಲಿ ವಾಡ್, ನಂಬ್ರ 1,2,4,5,6ರಲ್ಲಿ ಕಾಂಗ್ರೆಸ್ ಜಯಗಳಿಸಿದೆ. ವಾರ್ಡ್ 3ರಲ್ಲಿ ಅಕಾಲಿದಳದ ಆರತಿ ಶರ್ಮ ಗೆದ್ದಿದ್ದಾರೆ. ಫಾಜಿಲ್ಕದಲ್ಲಿ ಎಎಪಿಗೆ ಒಂದು ಸೀಟು ಸಿಕ್ಕಿದ್ದು ಕಾಂಗ್ರೆಸ್ ಹನ್ನೊಂದು ಅಕಾಲಿದಳಕ್ಕೆ ಐದು ಸೀಟುಗಳಲ್ಲಿ ವಿಜಯಿಯಾಗಿವೆ. ಗುರುದಾಸಪುರದಲ್ಲಿ ಒಟ್ಟು 29ವಾರ್ಡ್‍ಗಳಲ್ಲಿ ಈವರೆಗಿನ ಫಲಿತಾಂಶದಂತೆ ಕಾಂಗ್ರೆಸ್ 15 ಸೀಟುಗಳಲ್ಲಿ ಗೆದ್ದಿದೆ. ಇಲ್ಲಿ ಈವರೆಗೆ ಬೇರೆ ಪಾರ್ಟಿಗಳು ಖಾತೆ ತೆರೆದಿಲ್ಲ.