ಟ್ರಂಪ್ ಸ್ಥಗಿತಗೊಳಿಸಿದ ಇರಾನ್ ಅಣು ಒಪ್ಪಂದ ಚರ್ಚೆಗೆ ಸಜ್ಜಾದ ಬೈಡನ್

0
494

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಥಗಿತಗೊಳಿಸಿದ ಅಣು ಒಪ್ಪಂದ ಚರ್ಚೆಯಲ್ಲಿ ತನ್ನ ಪಾಲುದಾರಿಕೆಯನ್ನು ಪುನರಾರಂಭಿಸಲು ಬೈಡನ್ ಸರಕಾರ ಮುಂದಾಗಿದೆ. ಯುರೋಪಿಯನ್ ಯೂನಿಯನ್ ಮೇಲ್ನೋಟದಲ್ಲಿ ಪುನಃ ಚಚೇ ಆರಂಭಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಅಮೆರಿಕ ಭಾಗವಹಿಸಲಿದೆ ಎಂದು ಬೈಡನ್ ಸರಕಾರ ತಿಳಿಸಿದೆ.

2015ರಲ್ಲಿ ಇರಾನ್‍ನೊಂದಿಗೆ ಅಣು ಒಪ್ಪಂದಕ್ಕೆ ಸಹಿ ಹಾಕಿದ್ದವು. ಡೊನಾಲ್ಡ್ ಸರಕಾರ ಈ ಒಪ್ಪಂದದಿಂದಹಿಂದೆ ಸರಿದಿತ್ತು. ಮತ್ತು ಅಮೆರಿಕ ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹಾಕಿತ್ತು.

ದಿಗ್ಬಂಧನ ಸಡಿಲಿಕೆ ಎಂಬ ಪ್ರಸ್ತಾವದಲ್ಲಿ ಇರಾನ್ ಮೇಲೆ ಕಠಿಣ ನಿಬಂಧನೆಗಳೊಂದಿಗೆ 2015ರಲ್ಲಿ ವಿಶ್ವದ ಬೃಹತ್ ದೇಶಗಳು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಒಪ್ಪಂದಿಂದ ಅಮೆರಿಕ ಡೊನಾಲ್ಡ್ ಟ್ರಂಪ್ ಅಧಿಕಾರದ ಕಾಲದಲ್ಲಿ ಹಿಂದೆ ಸರಿದಿತ್ತು. 2018ರಲ್ಲಿ ಟ್ರಂಪ್ ಈ ನಿರ್ಧಾರ ತಳೆದಿದ್ದರು. ಇದರ ಬೆನ್ನಿಗೆ ಹೊಸದಾಗಿ ಅಮೆರಿಕ ಆರ್ಥಿಕ ನಿರ್ಬಂಧ ಹಾಕಿತ್ತು.

ಜೊ ಬೈಡನ್ ಅಮೆರಿಕ ಅಧ್ಯಕ್ಷರಾದ ಕೂಡಲೇ ಚರ್ಚೆ ಪುನರಾರಂಭಿಸಲಾಗುವುದು ಮತ್ತು ಇರಾನ್ ಇದಕ್ಕೆ ಸಿದ್ಧ ಎಂದು ಹೇಳಿಕೊಂಡಿತ್ತು. ಆದರೆ ಚೀನಾದ ವಿರುದ್ಧ ಹೊಸ ನಿಲುವಿನಲ್ಲಿ ಸಡಿಲಿಕೆಯಿಲ್ಲ ಎಂದು ಬೈಡನ್ ಘೋಷಿಸಿದ್ದರು.

ಈ ಹಿನ್ನೆಲೆಯಲ್ಲಿ ಅಣು ಒಪ್ಪಂದದ ಕುರಿತು ಚರ್ಚೆ ನಡೆಯಬಹುದೇ ಎಂಬ ಸಂದೇಹ ಬಲವಾಗಿತ್ತು. ಇದೇ ವೇಳೆ ಟ್ರಂಪ್ ಸರಕಾರ ಇರಾನ್ ಅಧಿಕಾರಿಗಳ ಮೇಲೆ ಹೇರಿದ್ದ ಪ್ರಯಾಣ ನಿಷೇಧ ಕ್ರಮವನ್ನು ತೆರವುಗೊಳಿಸಲು ಜೋ ಬೈಡನ್ ಆದೇಶಿಸಿರುವುದಾಗಿ ವರದಿಯಾಗಿದೆ.