ಸನ್ಮಾರ್ಗ ವಾರ್ತೆ
ಕೊಚ್ಚಿ: ಬೆತ್ತದಿಂದ ಹೊಡೆದುದರ ಪರಿಣಾಮವಾಗಿ ಹತ್ತನೆ ತರಗತಿಯ ವಿದ್ಯಾರ್ಥಿಯ ಕೈಗೆ ಗಾಯವಾದ ಪ್ರಕರಣದಲ್ಲಿ ಅಧ್ಯಾಪಕಿಯ ಬಂಧನಕ್ಕೆ ಹೈಕೋರ್ಟು ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದೆ. ವಿದ್ಯಾರ್ಥಿಯ ದೂರಿನಲ್ಲಿ ಆಲುವ ಈಸ್ಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಜಾಮೀನು ಯಾಚಿಸಿ ಅರ್ಜಿ ಸಲ್ಲಿಸಿದ್ದ ಆಲುವ ಕಟ್ಟಮಶ್ಶೇರಿ ಸರಕಾರಿ ಶಾಲೆಯ ಅಧ್ಯಾಪಕಿಯ ಬಂಧನಕ್ಕೆ ಹೈಕೋರ್ಟು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಕೈಗಳಿಗೆ ಗಾಯವಾಗಿರುವುದರ ಕುರಿತು ಮೆಡಿಕಲ್ ಸರ್ಟಿಫಿಕೇಟು ಹಾಜರುಪಡಿಸುತ್ತೇವೆಂದು ಪ್ರಾಸಿಕ್ಯೂಶನ್ ತಿಳಿಸಿದಾಗ ಅರ್ಜಿ ವಿಚಾರಣೆಯನ್ನು ಮಂಗಳವಾರಕ್ಕೆ ಕೋರ್ಟು ಮುಂದೂಡಿತು. ಫೆಬ್ರವರಿ 17ಕ್ಕೆ ನಡೆದಿದ್ದ ಘಟನೆಯಲ್ಲಿ 22ನೇ ತಾರೀಕಿಗೆ ಕೇಸು ದಾಖಲಿಸಲಾಯಿತು. ಕೇಸು ದಾಖಲಿಸಿದ್ದು ನ್ಯಾಯೋಚಿತವಲ್ಲ ಎಂದು ಬೆಟ್ಟು ಮಾಡಿ ಅಧ್ಯಾಪಕಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ರಾಜಕೀಯ ಪ್ರಭಾವ ಇರುವ ಪಿಟಿಎ ಅಧ್ಯಕ್ಷ ಮಧ್ಯಪ್ರವೇಶದ ಬಳಿಕ ಪ್ರಕರಣದಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ವಾದಿಸಿದ್ದಾರೆ.












