ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಹಾಲುತ್ಪಾದನೆ ನಿಲ್ಲಿಸಿದ ಉತ್ತರಪ್ರದೇಶ ರೈತರು

0
389

ಸನ್ಮಾರ್ಗ ವಾರ್ತೆ

ಲಕ್ನೊ: ಕೇಂದ್ರ ಸರಕಾರದ ರೈತ ಕಾನೂನಿನ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಉತ್ತರ ಪ್ರದೇಶದ ಹಾಲುತ್ಪಾದಕ ರೈತರು ಹಾಲು ವಿತರಣೆಯನ್ನು ಸ್ಥಗಿತಗೊಳಿಸಿದರು.

ಅಮ್ರೋಹದ ಜಿಲ್ಲೆಯ ಮೂರು ಗ್ರಾಮಗಳ ರೈತರು ಸಹಕಾರಿ ಸಂಘಗಳಿಗೆ ಹಾಲು ಕೊಡುವುದನ್ನು ನಿಲ್ಲಿಸಿದ್ದಾರೆ. ರಸೂಲ್ ಪುರ ಮಾಫಿ, ಚುಚ್ಚಾಲಿಯ ಕುರ್ದ್, ಶಹಝಾದ್‍ಪುರ ಗ್ರಾಮಗಳು ಹಾಲು ವಿತರಿಸುವುದನ್ನು ನಿಲ್ಲಿಸಿದ್ದಾರೆ.

ಸಹಕಾರಿ ಸಂಘಗಳ ಹಾಲಿನ ಕ್ಯಾನ್‍ಗಳನ್ನು ಉಲ್ಟಾ ಇರಿಸಿದ್ದಾರೆ. ಹಾಲು ಸಂಗ್ರಹಿಸಲು ಬಂದ ಟ್ರಾಂಕರ್‍ಗಳು ಖಾಲಿ ಹೋಗಿವೆ. ಪೆಟ್ರೋಲ್ ಬೆಲೆ ನೂರು ರೂಪಾಯಿ ಆಗಿದ್ದರಿಂದ ಮಾರ್ಚ್ 6ರ ರಿಂದ ಹಾಲು ಲೀಟರಿಗೆ ನೂರು ರೂಪಾಯಿಗೆ ಮಾರುತ್ತೇವೆ ಎಂದು ರೈತ ಸಂಘಟನೆಗಳು ಹೇಳಿವೆ. ಈಗ 35 ರೂಪಾಯಿಗೆ ಅವರು ಹಾಲು ಕೊಡುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಹಾಲು ಉತ್ಪಾದನೆ ನಿಲ್ಲಿಸಲು ತಾವು ಹೇಳಿಲ್ಲ.
ಆದರೆ ಸ್ವಯಂ ಪ್ರೇರಿತವಾಗಿ ರೈತ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಅವರು ಹಾಲು ಕೊಡುವುದು ನಿಲ್ಲಲಿಸಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಯುವಜನ ವಿಭಾಗದ ನಾಯಕ ದಿಗಂಬರ್ ಸಿಂಗ್ ಹೇಳಿದರು.

ರೈತರ ಹೋರಾಟ ನಮಗೆ ಮಾತ್ರ ಸೀಮಿತವಲ್ಲ ಕಾರ್ಮಿಕರಿಂದ ಹಿಡಿದು ಜನಸಾಮಾನ್ಯರು ಈ ಹೋರಾಟದ ಭಾಗವಾಗಿದ್ದಾರೆ ಎಂದು ದಿಗಂಬರ್ ಸಿಂಗ್ ಹೇಳಿದರು. ರೈತ ಸಹೋದರರಿಗೆ ಬೆಂಬಲ ಸೂಚಿಸಿ ಹಾಲು ಉತ್ಪಾದನೆ ವಿತರಣೆ ನಿಲ್ಲಿಸಿದ್ದೆಂದು, ಇದು ನಮ್ಮ ಪ್ರತಿಭಟನೆಯಾಗಿದೆ ಎಂಬುದಾಗಿ ಹಾಲುತ್ಪಾದಕ ರೈತ ದಿನೇಶ್ ಕುಮಾರ್ ಹೇಳಿದರು.