ಹರ್ಯಾಣ| ಪೊಲೀಸ್ ಠಾಣೆಯಿಂದ 29,000 ಲೀ. ವಿದೇಶಿ ಮದ್ಯ ನಾಪತ್ತೆ: ಕೇಳಿದ್ದಕ್ಕೆ ಇಲಿ ಕುಡಿದದ್ದು ಎಂದರು!

0
812

ಸನ್ಮಾರ್ಗ ವಾರ್ತೆ

ಫರೀದಾಬಾದ್: ಹರಿಯಾಣದ ಪೊಲೀಸ್ ಠಾಣೆಯಿಂದ 29,000 ಲೀ. ಮದ್ಯ ನಾಪತ್ತೆಯಾಗಿದ್ದು 25 ವ್ಯತ್ಯಸ್ಥ ಪೊಲೀಸ್ ಠಾಣೆಗಳಲ್ಲಿ ತೆಗೆದಿಟ್ಟ ಮದ್ಯ ಗಾಯಬ್ ಆಗಿದೆ. ಸ್ಥಳೀಯವಾಗಿ ತಯಾರಿಸಿದ 50,000 ಲೀ. ಮದ್ಯ ಹಾಗೂ 30,000 ಲೀ ವಿದೇಶಿ ಮದ್ಯದ 3,000 ಕ್ಯಾನ್ ಬಿಯರ್‌ಗಳನ್ನು 30 ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿತ್ತು. 825 ಪ್ರಕರಣಗಳಲ್ಲಿ ಇಷ್ಟು ಪ್ರಮಾಣದ ಮದ್ಯವನ್ನು ವಶಪಡಿಸಲಾಗಿತ್ತು. ಆದರೆ ಮದ್ಯ ಕಾಣೆಯಾಗಿದೆ ಎಂದು ಹರಿಯಾಣ ಪೊಲೀಸರು ಹೇಳುತ್ತಿದ್ದಾರೆ.

ಇತ್ತೀಚೆಗೆ ವಶಪಡಿಸಿಕೊಂಡ ಮದ್ಯ ಪೊಲೀಸ್ ಠಾಣೆಗಳಲ್ಲಿ ಮಾಲ್‍ಖಾನ್ ಎಂದು ಕರೆಯುವ ಸಾಕ್ಷ್ಯ ಜೋಪಾನವಾಗಿಡುವ ಕೋಣೆಗಳಲ್ಲಿ ಇರಿಸಲಾಗಿತ್ತು. ಪ್ರಕರಣದ ವಿಚಾರಣೆ ಆರಂಭವಾಗಿಲ್ಲ. ತೀರ್ಪು ಪ್ರಕಟವಾದ ಬಳಿಕ ನಿಯಮದಂತೆ ಮದ್ಯವನ್ನು ನಾಶಪಡಿಸಲಾಗುತ್ತದೆ. ಮದ್ಯವನ್ನು ನಾಶಪಡಿಸುವ ಮೊದಲೇ ಕಾಣೆಯಾಗಿದೆ ಆಜ್‍ತಕ್ ವರದಿ ಮಾಡಿದೆ. ಮದ್ಯ ಹೇಗೆ ಕಾಣದಾಯಿತು ಎಂದು ಕೇಳಿದಾಗ ಪೊಲೀಸರು ಇಲಿಗಳು ಕುಡಿದಿವೆ ಎಂದು ಹೇಳಿದ್ದು ಹುಬ್ಬೇರಿಸುವಂತೆ ಮಾಡಿದೆ.

ಸ್ಟೋರ್ ರೂಮ್‍ಗಳಲ್ಲಿ ಮದ್ಯವನ್ನು ಇಲಿಗಳು ಕುಡಿದಿವೆ. ಸ್ಥಳೀಯವಾಗಿ ತಯಾರಿಸಲಾಗಿದ್ದ ಕಳ್ಳ ಭಟ್ಟಿಯನ್ನು ಬಾಟ್ಲಿಗೆ ಹಾಕಿ ಜೋಪಾನವಾಗಿಡಲಾಗಿತ್ತು. ಪೊಲೀಸ್ ಠಾಣೆಯಲ್ಲಿ ಇರಿಸುವಾಗ ಇದನ್ನು ಡ್ರಮ್‍ನಲ್ಲಿ ಹಾಕಿ ಇರಿಸಲಾಗುತ್ತದೆ. ಇದೇ ವೇಳೆ ವಿದೇಶಿ ಮದ್ಯ ಗಾಜಿನ ಬಾಟ್ಲಿಯಲ್ಲಿತ್ತು. ಇವುಗಳನ್ನೆಲ್ಲ ಇಲಿಗಳು ಹೇಗೆ ಕುಡಿಯುವ ಎಂಬುದಕ್ಕೆ ಉತ್ತರ ಲಭಿಸಿಲ್ಲ. ಹರಿಯಾಣ ಸರಕಾರ ತನಿಖೆಗೆ ಆದೇಶಿಸಿದೆ.