ಸನ್ಮಾರ್ಗ ವಾರ್ತೆ
ಆಗ್ರಾ: ಇತಿಹಾಸ ಪ್ರಸಿದ್ಧ ತಾಜ್ಮಹಲ್ ಸಮುಚ್ಚಯದೊಳಗೆ ಪೂಜೆ ನಡೆಸಿದ ಮೂವರು ಹಿಂದೂ ಮಹಾಸಭಾದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ತಾಜ್ಮಹಲ್ ಕಂಪೌಂಡಿನೊಳಗೆ ಪ್ರವೇಶಿಸಿದ ಇವರು ಶಿವ ಪೂಜೆ ಮಾಡಿದ್ದರು. ಒಬ್ಬ ಮಹಿಳೆ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಮಾರಕದ ಸಂರಕ್ಷಣೆಗೆ ನಿಯೋಜಿಸಿದ್ದ ಸಿಐಎಸ್ಎಫ್ ಯೋಧರು ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದೇವೆ ಎಂದು ತಾಜ್ಮಹಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಉಮೇಶ್ ಚಂದ್ರ ತ್ರಿಪಾಠಿ ಹೇಳಿದರು. ಸಮುಚ್ಚಯದ ಸೆಂಟ್ರಲ್ ಟ್ಯಾಂಕಿನ ಸಮೀಪದ ಬೆಂಚಲ್ಲಿ ಹಿಂದೂ ಮಹಾಸಭಾದ ಪ್ರಾಂತ್ ಅಧ್ಯಕ್ಷೆ ಮೀನಾ ದಿವಾಕರ್ ಮತ್ತು ಇಬ್ಬರು ಸೇರಿ ಪೂಜಾ ಕಾರ್ಯ ನಡೆಸಿದ್ದರು.
ಕಳೆದ ವರ್ಷ ಅಕ್ಟೋಬರಿನಲ್ಲಿ ತಾಜ್ಮಹಲಿನೊಳಗೆ ಕೇಸರಿ ಧ್ವಜವನ್ನು ತೆಗೆದುಕೊಂಡು ನುಗ್ಗಿದ ಹಿಂದೂ ಜಾಗರಣ್ ಮಂಚ್ನ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಆರೆಸ್ಸೆಸ್ನ ನಿಕಟ ಸಂಘಟನೆ ಇದು. ಇದರ ಆಗ್ರಾ ಘಟಕದ ಅಧ್ಯಕ್ಷ ಗೌರವ್ ಠಾಕೂರ್ ನೇತೃತ್ವದಲ್ಲಿ ಅಂದು ಧ್ವಜ ಹಾರಾಟ ಕಾರ್ಯ ನಡೆದಿತ್ತು.
ತಾಜ್ಮಹಲ್ ತೇಜೋಮಹಲ್ ಆಗಿದೆ ಅದು ಶಿವನ ಕ್ಷೇತ್ರವಾಗಿತ್ತು. ಕೆಲವು ವರ್ಷಗಳಿಂದ ನಾನು ತಾಜ್ಮಹಲ್ಗೆ ಬಂದಿದ್ದೇನೆ. ಇಲ್ಲಿ ಐದು ಬಾರಿಯಾದರೂ ಶಿವನೊಂದಿಗೆ ನಾನು ಪ್ರಾರ್ಥಿಸಿದ್ದೇನೆ. ಸ್ಮಾರಕ ಹಿಂದೂಗಳಿಗೆ ಕೊಡಲು ಸರಕಾರ ಒಪ್ಪಿಕೊಳ್ಳುವವರೆಗೆ ಇದು ಮುಂದುವರಿಸುತ್ತೇವೆ ಎಂದು ಗೌರವ್ ಠಾಕೂರ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದನು.












