ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಜಮೀಯತ್ ಉಲೇಮಾ-ಏ-ಹಿಂದ್ ಅಧ್ಯಕ್ಷ ಸ್ಥಾನಕ್ಕೆ ಸತತ ಏಳನೇ ಬಾರಿಗೆ ಅರ್ಷದ್ ಮದನಿ ಆಯ್ಕೆಯಾದರು. ಕಳೆದ ದಿವಸ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆ ಸೇರಿತ್ತು. ಸಭೆಯಲ್ಲಿ ಪುನಃ ಅಧ್ಯಕ್ಷೀಯ ಆಯ್ಕೆ ಪ್ರಕ್ರಿಯೆ ನಡೆದು ಎಲ್ಲ ರಾಜ್ಯಗಳ ಘಟಕಗಳು ಒಕ್ಕೊರಲಿನಿಂದ ಅರ್ಷದ್ ಮದನಿಯವರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದರೆಂದು ಪದಾಧಿಕಾರಿಗಳೂ ತಿಳಿಸಿದ್ದಾರೆ.
ದೇಶದಲ್ಲಿ ಕಾನೂನು ವ್ಯವಸ್ಥೆ ಪುನಃ ತಾರುಮಾರಾಗುತ್ತಿರುವುದು ಆತಂಕವನ್ನು ಸೃಷ್ಟಿಸಿದೆ ಎಂದು ಅರ್ಷದ್ ಮದನಿ ಅಭಿಪ್ರಾಯ ವ್ಯಕ್ತಪಡಿಸಿದರು. ಒಂದೂವರೆ ಕೋಟಿ ಸದಸ್ಯರಿರುವ ಸಂಘಟನೆಯಾದ ಜಮೀಯತ್ ಉಲೇಮಾ-ಏ-ಹಿಂದ್ ಹೊಸ ಸದಸ್ಯತನ ಅಭಿಯಾನವನ್ನು ಆರಂಭಿಸಿದೆ.












