ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಮಗನ ಹೊಡೆತಕ್ಕೆ ವಯಸ್ಸಾದ ತಾಯಿ ಕ್ಷಣಾರ್ಧದಲ್ಲಿ ಮೃತಪಟ್ಟ ಘಟನೆ ದಿಲ್ಲಿಯಲ್ಲಿ ನಡೆದಿದೆ. ದಿಲ್ಲಿಯ ದ್ವಾರಕದಲ್ಲಿ ಈ ದಾರುಣ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯವು ಸೆರೆಯಾಗಿದೆ. 76 ವರ್ಷದ ಅವತಾರ್ ಕೌರ್ ಮೃತಪಟ್ಟ ನತದೃಷ್ಟ ಮಹಿಳೆ. ಉದ್ದೇಶ ರಹಿತ ಹತ್ಯೆಗೆ ಮಗ ರಣ್ಬೀರ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ನೆರೆಯ ಮನೆಯವರ ಜೊತೆ ಪಾರ್ಕಿಂಗ್ ಸಮಸ್ಯೆ ಕುರಿತು ಸೋಮವಾರ ಮಧ್ಯಾಹ್ನ ನಂತರ ಮಗ ಮತ್ತು ಸೊಸೆಯೊಂದಿಗೆ ಕೌರ್ ಜಗಳಕ್ಕೆ ನಿಂತರು. ಇದೇ ವೇಳೆ ಮಗ ಅಮ್ಮನ ಕೆನ್ನೆಗೆ ಬಾರಿಸಿದ್ದಾನೆ. ಮಗನ ಪೆಟ್ಟಿಗೆ ಸಿಲುಕಿ ತಾಯಿ ಬಿದ್ದರು. ಪ್ರಜ್ಞೆ ಕಳಕೊಂಡರು. ಇವೆಲ್ಲ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೌರ್ರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು ಅವರು ಮೃತಪಟ್ಟರು.
Horrible. A man in Delhi slaps his old mother, she dies. pic.twitter.com/NsAO8PZb7b
— Sandeep Singh (@PunYaab) March 16, 2021












