ಅಮೇರಿಕ: 3 ಸ್ಪಾ‌ಗಳಲ್ಲಿ ಗುಂಡು ಹಾರಾಟ; 8 ಮಂದಿ ಗುಂಡೇಟಿಗೆ ಬಲಿ

0
438

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ಸ್ಪಾಗಳಲ್ಲಿ ಗುಂಡು ಹಾರಾಟ ನಡೆದ ಪರಿಣಾಮ ಆರು ಮಹಿಳೆಯರ ಸಹಿತ ಎಂಟು ಮಂದಿ ಕೊಲ್ಲಲ್ಪಟ್ಟಿದ್ದಾರೆ. ಮೂರು ಸ್ಪಾಗಳಲ್ಲಿ ಗುಂಡು ಹಾರಾಟ ನಡೆದಿದೆ ಎಂಬುದಾಗಿ ವರದಿಯಾಗಿದೆ. ಆರೋಪಿ ಎಂದು ಶಂಕಿಸಿ 21 ವರ್ಷದ ಯುವಕನನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಇದೇ ವೇಳೆ ಗುಂಡು ಹಾರಾಟಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

ಅಟ್ಲಾಂಟ ಪೊಲೀಸ್ ವರದಿಯ ಪ್ರಕಾರ ಮೃತಪಟ್ಟ ನಾಲ್ವರು ಮಹಿಳೆಯರು ಏಷ್ಯನರು. ಏಶ್ಯನ್ ವಂಶಜರಾದ ಮಹಿಳೆಯರು ಹಂತಕನ ಗುಂಡಿಗೆ ಬಲಿಯಾಗಿದ್ದು ಇವರಿಗೆ ಗೋಲ್ಡನ್ ಮಸಾಜ್, ಆರಾಮ ತೆರಪಿ ಸ್ಪಾಗಳಲ್ಲಿ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದುವರೆಗೆ ಗುಂಡು ಹಾರಾಟದ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ ಎಂದು ಪೊಲೀಸರು ತಿಳಿಸಿದರು.