ನೀತಾ ಅಂಬಾನಿಯವರನ್ನು ವಿಸಿಟಿಂಗ್ ಪ್ರೊಫೆಸರ್ ಮಾಡಲು ಶಿಫಾರಸು: ಬನಾರಸ್ ಹಿಂದೂ ವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

0
962

ಸನ್ಮಾರ್ಗ ವಾರ್ತೆ

ಲಕ್ನೊ: ರಿಲಯನ್ಸ್ ಇಂಡಸ್ಟ್ರಿಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ನೀತಾ ಅಂಬಾನಿಯವರನ್ನು ವಿಸಿಟಿಂಗ್ ಪ್ರೊಫೆಸರ್ ಮಾಡುವ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ತೀರ್ಮಾನದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. 40ರಷ್ಟು ವಿದ್ಯಾರ್ಥಿಗಳು ಯುನಿವರ್ಸಿಟಿಯ ಉಪಕುಲಪತಿ ರಾಕೇಶ್ ಭಟ್‍ನಾಗರ್ ಮನೆಯ ಮುಂದೆ ಪ್ರತಿಭಟನೆ ಮಾಡಿದರು.

ವ್ಯೂಮನ್ ಸ್ಟಡೀಸ್ ಆಂಡ್ ಡೆವಲಪ್ಮೆಂಟ್ ಪಾಠ ವಿಭಾಗದಲ್ಲಿ ಯುನಿವರ್ಸಿಟಿ ನೀತಾ ಅಂಬಾನಿಯವರನ್ನು ಸಂದರ್ಶಕ ಪ್ರಾಧ್ಯಾಪಕಿ ಮಾಡಲು ತೀರ್ಮಾನಿಸಿದೆ. ಪ್ರಭಾವಿ ಮಹಿಳೆ ಎಂಬ ನೆಲೆಯಲ್ಲಿ ಅವರನ್ನು ಪ್ರೊಫೆಸರ್ ಮಾಡುವುದಾಗಿ ಯುನಿವರ್ಸಿಟಿ ವಿವರಣೆ ನೀಡುತ್ತಿದೆ.

ನೀತಾ ಮಹಿಳಾ ಉದ್ಯಮಿಯಾಗಿದ್ದು ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಹುದು. ಆದ್ದರಿಂದ ಅವರನ್ನು ವಿಸಿಟಿಂಗ್ ಪ್ರೊಫೆಸರ್ ಮಾಡಲು ಶಿಫಾರಸ್ಸು ಕಳುಹಿಸಿದೆವೆಂದು ಯುನಿವರ್ಸಿಟಿ ಅಧಿಕಾರಿಗಳು ತಿಳಿಸಿದರು.