ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೊರೋನ ಪೀಡಿತರಾಗಿದ್ದ ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ದಿಲೀಪ್ ಗಾಂಧಿ(70) ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಮಂಗಳವಾರ ಅವರಿಗೆ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿತ್ತು. ಅಹ್ಮದ್ ನಗರ ದಕ್ಷಿಣ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಮೊದಲ ಬಾರಿ ಅವರು ಲೋಕಸಭೆಗೆ ಚುನಾಯಿತರಾಗಿದ್ದರು. 2009 ಮತ್ತು 2011ರಲ್ಲಿ ಪುನಃ ಗೆದ್ದಿದ್ದರು. ವಾಜಪೇಯಿಯವರ ಎನ್ಡಿಎ ಸರಕಾರದಲ್ಲಿ ಅವರು ಬಂದರು ಸಚಿವಾಲಯದ ಸಹಸಚಿವರಾಗಿದ್ದರು.












