20 ಮಕ್ಕಳಿದ್ದಿದ್ದರೆ ಕ್ವಿಂಟಲ್ ರೇಶನ್ ಸಿಗುತ್ತಿತ್ತು: ಲಾಕ್‌ಡೌನ್ ಪಡಿತರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರಾಖಂಡ ಸಿಎಂ

0
539

ಸನ್ಮಾರ್ಗ ವಾರ್ತೆ

ರಾಮನಗರ(ಉತ್ತರಾಖಂಡ): ಬಡಕುಟುಂಬಗಳಿಗೆ ಹೆಚ್ಚು ಮಕ್ಕಳಿದ್ದರೆ ಹೆಚ್ಚು ರೇಶನ್ ಸಿಗುತ್ತಿತ್ತು ಎಂದು ಉತ್ತರಾಖಂಡ ಬಿಜೆಪಿ ಮುಖ್ಯಮತ್ರಿ ತೀರ್ಥ ಸಿಂಗ್ ರಾವತ್ ಹೇಳಿದರು. ಹೇಳಿಕೆ ನೀಡಿ ವಿವಾದ ಸೃಷ್ಟಿಸುವುದರಲ್ಲಿ ಅವರು ಎತ್ತಿದ ಕೈ. ಅವರ ಹೇಳಿಕೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತೀಕ್ಷ್ಣ ವಿರೋಧ ವ್ಯಕ್ತವಾಗಿದೆ. ಜನಸಂಖ್ಯೆಯ ಕ್ರಮಾತೀತ ಹೆಚ್ಚಳವನ್ನು ಸೂಚಿಸಲು ಈ ರೀತಿ ಅವರು ವ್ಯಂಗ್ಯವಾಡಿದ್ದರು. ಆದರೆ, ಸಾಮಾಜಿಕ ಮಾಧ್ಯಮಗಳು ಅವರನ್ನೆ ವ್ಯಂಗ್ಯ ಮಾಡುತ್ತಿವೆ.

ಒಬ್ಬರಿಗೆ ಐದು ಕಿಲೊ ರೇಶನ್ ಕೊಡುತ್ತೇವೆ. ಒಂದು ಮನೆಯಲ್ಲಿ ಹತ್ತು ಮಕ್ಕಳಿದ್ದರೆ 50ಕೆಜಿ ಸಿಗುತ್ತದೆ. 20 ಮಂದಿ ಇದ್ದರೆ ಒಂದು ಕ್ವಿಂಟಲ್. ಆದರೆ ಹೆಚ್ಚು ಸಿಗುವವರಲ್ಲಿ ಕೆಲವರಿಗೆ ಅಸೂಯೆ. ನಿಮಗೆ ಇಬ್ಬರನ್ನೇ ಹುಟ್ಟಿಸಲು ಸಮಯ ಸಿಕ್ಕಿದ್ದು. ಯಾಕೆ ಇಪ್ಪತ್ತು ಮಂದಿಯನ್ನು ಹುಟ್ಟಿಸಲು ಆಗಿಲ್ಲ ಎಂದು ಒಂದು ಸಾರ್ವಜನಿಕ ಸಭೆಯಲ್ಲಿ ತೀರ್ಥ ಸಿಂಗ್ ಪ್ರಶ್ನಿಸಿದರು.

ಲಾಕ್ ಡೌನಿನಿಂದ ಕೆಲಸ ಇಲ್ಲದಾದಾಗ ವಿತರಣೆ ಮಾಡಿದ ರೇಶನ್‍ಗೆ ಸಂಬಂಧಿಸಿ ತೀರ್ಥ ಸಿಂಗ್ ಹೀಗೆ ಹೇಳಿದ್ದಾರೆ. ಲಾಕ್‍ಡೌನ್ ಮೊದಲು ಕೆಲಸ, ವರಮಾನ ಇಲ್ಲದೆ ನಿತ್ಯ ಜೀವನಕ್ಕೆ ಕಷ್ಟ ಪಡುತ್ತಿದ್ದ ಕುಟುಂಬಗಳೊಂದಿಗೆ ನೀವು ಯಾಕೆ ಇಪ್ಪತ್ತು ಮಕ್ಕಳನ್ನು ಮಾಡಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಮಾರ್ಚ್ 10ಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತೀರ್ಥ ಸಿಂಗ್ ಹಲವು ಬಾರಿ ಇಂತಹ ವಿವಾದಾತ್ಮಕ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ರಿಪ್ಡ್ ಜೀನ್ಸ್ ನಮ್ಮ ಸಂಸ್ಕೃತಿಯಲ್ಲ ಎಂದುದು, 200 ವರ್ಷ ಅಮೆರಿಕ ನಮ್ಮನ್ನು ಗುಲಾಮರನ್ನಾಗಿ ಮಾಡಿ ಆಳ್ವಿಕೆ ನಡೆಸಿತ್ತು ಎಂದು ತೀರ್ಥ ಸಿಂಗ್ ಹೇಳಿದ್ದರು.