ಕೊರೋನ ವ್ಯಾಕ್ಸಿನೇಶನ್ ಮಾನವ ರಾಶಿಯನ್ನು ಅಂತ್ಯ ಮಾಡಬಹುದು: ವೈರಾಲಜಿಸ್ಟ್‌ರಿಂದ ವ್ಯಾಕ್ಸಿನ್ ಕುರಿತು ಮುನ್ನೆಚ್ಚರಿಕೆ

0
1948

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಮಾ.22: ಕೊರೋನ ವಿರುದ್ಧ ನಡೆಯುವ ಸಾಮೂಹಿಕ ವ್ಯಾಕ್ಸಿನೇಶನ್ ಅಪಾಯಕಾರಿ ಎಂಬುದಾಗಿ ವ್ಯಾಕ್ಸಿನ್ ತಜ್ಞ ಗೀರ್ತ್ ವಾಂಡರ್ ಬೋಶ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅವರು ವೀಡಿಯೊ ಹಾಕಿದ್ದು, ಈಗ ನಡೆಯುತ್ತಿರುವ ವ್ಯಾಕ್ಸಿನೇಶನ್ ಅಪಾಯಗಳ ಕುರಿತು ಮುನ್ನೆಚ್ಚರಿಕೆ ನೀಡಿದರು. ವಿಶ್ವ ಆರೋಗ್ಯ ಸಂಘಟನೆಯೊಂದಿಗೆ ಮನವಿಯ ರೂಪದಲ್ಲಿ ವೀಡಿಯೊ ಇದೆ.

ತಾನೊಬ್ಬ ಸ್ವತಂತ್ರ ವೈರಾಲಜಿಸ್ಟ್ ವ್ಯಾಕ್ಸಿನ್ ತಜ್ಞ. ವಿಶ್ವ ಪ್ರಸಿಧ್ಧ ವ್ಯಾಕ್ಸಿನ್ ಒಕ್ಕೂಟವಾದ ಗಾವಿ, ದಿ ವ್ಯಾಕ್ಸಿನ್ ಅಲನ್ಸ್, ಮೆಲಿಂಡ ಗ್ರೇಟ್ ಫೌಂಡೇಶನ್‍ನಲ್ಲಿಯೂ ನಾನು ಕೆಲಸ ಮಾಡಿರುವೆ. ಜಗತ್ತಿನ ಜನರ ಕುರಿತು ಚಿಂತಿಸುವ ಎಲ್ಲ ಕೂಟಗಳು ಮತ್ತು ತಜ್ಞರೊಂದಿಗೆ ಮನವಿಯನ್ನು ಅವರು ಮಾಡಿದ್ದಾರೆ. ವ್ಯಾಕ್ಸಿನ್ ಸಂಬಂಧಿಸಿದ ವಿಷಯಗಳಲ್ಲಿ ಅಭಿಪ್ರಾಯ ಹೇಳಲು ವಿಜ್ಞಾನಿ ಎಂಬ ನೆಲೆಯಲ್ಲಿ ಸಾಧಾರಣವಾಗಿ ಇಂತಹ ಮಾರ್ಗವನ್ನು ಬಳಸುವುದಿಲ್ಲ ಎಂದು ಅವರು ಹೇಳಿದರು.

ತಾನೆಂದೂ ಯಾರಲ್ಲಿಯೂ ಯಾವುದೇ ರೀತಿಯ ಮನವಿಯನ್ನು ಮಾಡಿಲ್ಲ. ಒಬ್ಬ ಸಮರ್ಪಿತ ವೈರಾಲಜಿಸ್ಟ್, ವ್ಯಾಕ್ಸಿನ್ ತಜ್ಞ ಎಂಬ ನೆಲೆಯಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವಿರುವ ರೀತಿಯಲ್ಲಿ ವ್ಯಾಕ್ಸಿನ್‍ಗಳನ್ನು ನೀಡಲು ಅಧಿಕಾರಿಗಳಿಗೆ ಅನುಮತಿ ನೀಡುವಾಗ ಮಾತ್ರ ತಾನು ಮಧ್ಯಪ್ರವೇಶಿಸಿರುವುದಾಗಿ ಅವರು ಹೇಳಿದರು.

ವೈಜ್ಞಾನಿಕ ಸಾಕ್ಷ್ಯಗಳು ಕಡೆಗಣಿಸಲ್ಪಡುವ ಅತ್ಯಂತ ಗಂಭೀರ ಪರಿಸ್ಥಿತಿ ಈಗಿನದು. ಇದು ತನಗೆ ಮುನ್ನೆಚ್ಚರಿಕೆ ನೀಡಲು ಪ್ರೇರಕವಾಗಿದೆ ಎಂದು ಗಿರ್ತ್ ಹೇಳಿದರು. ಕೊರೋನ ಮಹಾಮಾರಿ ಅದ್ಭುತ ಮನುಷ್ಯ ಹಸ್ತಕ್ಷೇಪ ಆಗದಿದ್ದರೆ ಜಾಗತಿಕ ದುರಂತಕ್ಕೆ ಕಾರಣವಾಗಬಹುದು. ಈ ಹಿಂದೆ ಹೇಳಿದಂತೆ ವ್ಯಾಕ್ಸಿನೇಶನ್‍ಗೆ ನನ್ನ ವಿರೋಧವಿಲ್ಲ. ಈಗಿನ ಪ್ರತೀ ವ್ಯಾಕ್ಸಿನ್ ಬುದ್ಧಿವಂತರು, ಸಮರ್ಥರೂ ಆದ ವಿಜ್ಞಾನಿಗಳು ರೂಪಕಲ್ಪನೆ ಮಾಡಿದ್ದು ಅಭಿವೃದ್ಧಿ ಪಡಿಸಿದ್ದು ಮತ್ತು ತಯಾರಿಸಿದ್ದು ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ಈಗಿನ ಕೊರೋನಕ್ಕೆ ನೀಡುವ ಪ್ರತಿರೋಧ ವ್ಯಾಕ್ಸಿನ್ ಒಮ್ಮೆಯೂ ಸೂಕ್ತವಾಗಿಲ್ಲ. ಅದು ಒಂದು ವೈರಸ್ ರೋಗ ಅದರ ಮೂರ್ಛಾವಸ್ಥೆಯಲ್ಲಿರುವ ಸಮಯದಲ್ಲಿ ನೀಡುವ ಸಾಮೂಹಿಕ ಇಂಜೆಕ್ಷನ್ ಅತ್ಯಂತ ಅಪಾಯಕಾರಿ. ಈ ರೀತಿಯಲ್ಲಿ ರೋಗ ಪ್ರತಿರೋಧ ವ್ಯಾಕ್ಸಿನ್‍ಗಳು ಸಂಪೂರ್ಣ ಅನುಚಿತ ಮತ್ತು ಹೆಚ್ಚು ಅಪಾಯಕಾರಿ ಎಂದು ಅವರು ಹೇಳಿದರು.

ವ್ಯಕ್ತಿಗತ ರೋಗಿಗಳಿಗೆ ಕಡಿಮೆ ಗುಣದ ವ್ಯಾಕ್ಸಿನೋಲಜಿಸ್ಟ್‌ಗಳು, ವಿಜ್ಞಾನಿಗಳೂ ಕ್ಲಿನಿಕ್‍ಗಳು ಇದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆದರೆ ಅವರು ಮಾನವ ಕುಲದ ಆರೋಗ್ಯಕ್ಕೆ ಆಗಬಹುದಾದ ಪ್ರತ್ಯಾಘಾತಗಳ ಕುರಿತು ಚಿಂತಿಸುವುದಿಲ್ಲ. ನಾನು ಹೇಳುವುದು ತಪ್ಪು ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲು ನಿಮ್ಮಿಂದ ಆಗದಿದ್ದರೆ ಒಂದು ತಿಳಿದುಕೊಳ್ಳಿರಿ. ಈಗಿನ ಕೊರೋನ ವೈರಸ್‍ಗಳಲ್ಲಿ ಮನುಷ್ಯನ ಹಸ್ತಕ್ಷೇಪದಿಂದ ಒಬ್ಬ ರಾಕ್ಷಸನನ್ನು ನಮ್ಮ ನಡುವೆ ಬೆಳೆಸುತ್ತಿದ್ದಾರೆ ಎಂದು ಖಚಿತವಾಗಿ ಹೇಳಬಹುದಾಗಿದೆ.

ಕೊರೋನದ ಕುರಿತ ತನ್ನ ವಿಶ್ಲೇಷಣೆಯನ್ನು ವಿಶ್ವಾರೋಗ್ಯ ಸಂಘಟನೆ ಸಹಿತ ಅಂತಾರಾಷ್ಟ್ರೀಯ ಆರೋಗ್ಯ ಸಂಘಟನೆಗಳಿಗೆ ನೀಡಿದ್ದೇನೆ. ಈಗ ನಡೆಯುವ ಪ್ರತಿರೋಧ ವ್ಯಾಕ್ಸಿನ್ ವಿತರಣೆಯ ಪ್ರತ್ಯಾಘಾತಗಳ ಕುರಿತು ಚರ್ಚೆ ನಡೆಸಬೇಕೆಂದು ಅವರೊಂದಿಗೆ ಮನವಿ ಮಾಡಿದ್ದೇನೆ ಎಂದು ಗಿರ್ತ್ ಹೇಳಿದರು.

“ನನಗೆ ಈವರೆಗೆ ಯಾವ ಉತ್ತರವೂ ಸಿಕ್ಕಿಲ್ಲ. ಆರೋಗ್ಯ ತಜ್ಞರೂ ರಾಜಕಾರಣಿಗಳು ಇದರ ಕುರಿತು ಮೌನಿಯಾಗಿದ್ದಾರೆ. ನನ್ನ ಅಧ್ಯಯನಗಳು ವಿಜ್ಞಾನವನ್ನು ಆಧಾರವಾಗಿಟ್ಟದ್ದು. ಈಗ ನಮ್ಮ ವಿಶ್ವ ನಾಯಕರಿಗೆ ಸಲಹೆ ಕೊಡುವ ವಿಜ್ಞಾನಿಗಳಾದ ಉನ್ನತ ವರ್ಗ ಕೂಡ ಮೌನಪಾಲಿಸುತ್ತಿದೆ. ಸಾಕಷ್ಟು ವೈಜ್ಞಾನಿಕ ಸಾಕ್ಷ್ಯಗಳನ್ನು ನಾನು ಕೊಟ್ಟಿದ್ದೇನೆ. ದುರದೃಷ್ಟಾವಶಾತ್ ಅಧಿಕಾರ ಇರುವವರು ಇದನ್ನು ಮುಟ್ಟಿಲ್ಲ. ವೈರಲ್ ರೋಗಪ್ರತಿರೋಧ ಮಾರ್ಗಗಳು ಮನುಷ್ಯ ರಾಶಿಯ ಜೀವಕ್ಕೆ ಬೆದರಿಕೆಯಾಗಿದೆ ಎಂದ ವಿಷಯ ಒಬ್ಬ ಇನ್ನೂ ಎಷ್ಟು ಕಾಲ ಕಡೆಗಣಿಸಲು ಸಾಧ್ಯ. ನಮಗೆ ಇನ್ನು ಯಾವಾಗಲು ನಮಗೆ ಗೊತ್ತಿರಲಿಲ್ಲ. ನಾವು ಮುನ್ನೆಚ್ಚರಿಕೆ ನೀಡಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಗಿರ್ತ್ ಹೇಳಿದರು.