ಸನ್ಮಾರ್ಗ ವಾರ್ತೆ
ಬಿಕಾನೇರ್: ರಾಜಸ್ಥಾನದಲ್ಲಿ ಆಟವಾಡುತ್ತಿದ್ದ ವೇಳೆ ಧಾನ್ಯವನ್ನು ತೆಗೆದಿರಿಸುವ ಕಣಜದಲ್ಲಿ ಸಿಲುಕಿಕೊಂಡು ಐವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟ ಘಟನೆ ನಡೆದಿದೆ. ಬಿಕಾನೇರಿನ ಹಿಮ್ಮಾತಾಸಾರ್ ಗ್ರಾಮದಲ್ಲಿ ನಾಲ್ಕು ವರ್ಷದ ಸೆವಾರಾಂ, ಏಳು ವರ್ಷದ ರವೀನ, ಐದು ವರ್ಷದ ರಾಧಾ, ಎಂಟು ವರ್ಷದ ಪೂನಂ ಮತ್ತು ಮಾಲಿ ಎಂಬ ಮಕ್ಕಳು ಮೃತಪಟ್ಟ ನತದೃಷ್ಟರು.
ಮಕ್ಕಳು ಕಣಜದೊಳಗೆ ಹಾರಿದ್ದು ಒಳಗೆ ಹೋದ ನಂತರ ಅದರ ಬಾಗಿಲು ಮುಚ್ಚಿಕೊಂಡಿತು. ಉಸಿರಾಡಲಾಗದೆ ಮಕ್ಕಳು ಜೀವ ಕಳಕೊಂಡರು. ತಾಯಿ ಮನೆಗೆ ಬಂದಾಗ ಮಕ್ಕಳು ಎಲ್ಲಿದ್ದಾರೆ ಎಂಬುದು ಗೊತ್ತಾಗಲಿಲ್ಲ. ಹುಡುಕಿದಾಗ ಕಣಜದೊಳಗೆ ಬೋಧವಿಲ್ಲದ ಸ್ಥಿತಿಯಲ್ಲಿ ಕಂಡು ಬಂದರು. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ಪ್ರಜ್ಞೆ ಮರಳಿ ಬರಲಿಲ್ಲ. ವೈದ್ಯಾಧಿಕಾರಿಗಳು ಮೃತಪಟ್ಟಿದ್ದಾರೆಂದು ಘೋಷಿಸಿದರು.












