ಸನ್ಮಾರ್ಗ ವಾರ್ತೆ
ಮಂಗಳೂರು: ದೇಶದ ಶಾಂತಿ ಸೌಹಾರ್ಧತೆಯ ಹರಿಕಾರರಾಗಿದ್ದು ಕೊಂಡು ಎಲ್ಲಾ ರೀತಿಯ ಭಯೋತ್ಪಾದನೆ, ಕೋಮುವಾದಗಳ ವಿರುದ್ದ ನಿರಂತರ ಧ್ವನಿ ಎತ್ತುತ್ತಾ ದೇಶದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿರುವ ಸೌಹಾರ್ದತೆಯ ಪ್ರಚಾರಕರಾದ ಮಸ್ಜಿದ್ ಇಮಾಮರ ಮೇಲೆ ವಿನಾಃ ಕಾರಣ ಹಲ್ಲೆ ನಡೆಸುವುದು ದೇಶದ್ರೋಹ ಕೃತ್ಯವಾಗಿದೆ ಎಂಬುದಾಗಿ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಉಗ್ರವಾಗಿ ಖಂಡಿಸಿದೆ.
ದೇಶ ಪ್ರೇಮ ಎಂದರೆ ದೇಶದ ಕಾನೂನಿಗೆ ಬದ್ದವಾಗಿ ಬದುಕುವ ಪ್ರತಿಯೊಬ್ಬ ಪ್ರಜೆಯನ್ನು ಪ್ರೀತಿಸುವುದಾಗಿದೆ. ಶಾಂತಿ-ಕೋಮು ಸಾಮರಸ್ಯಕ್ಕೆ ಹೆಸರಾದ ಹಾಸನ ಜಿಲ್ಲೆಯ ಸುಂಡಕೆರೆಯ ಮುಸ್ಲಿಮ್ ಧರ್ಮ ಗುರು ನಾಸಿರ್ ದಾರಿಮಿ ಎಂಬವರ ಮೇಲೆ ಹಲ್ಲೆ ನಡೆಸುವ ಮೂಲಕ ಜಿಲ್ಲೆಯ ಕೋಮು ಸಾಮರಸ್ಯವನ್ನು ಕದಡಲು ದುಷ್ಟ ಶಕ್ತಿಗಳು ರೂಪಿಸಿದ ಷಡ್ಯಂತ್ರವಿದು. ಇವರು ರೂಪಿಸಿದ ಈ ವಿಛಿದ್ರಕಾರಿ ಅಜೆಂಡಾ ಸೋಲುವಂತಾಗಲು ಹಲ್ಲೆ ಕೋರರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸುವಂತೆ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಆಗ್ರಹಿಸಿದೆ.
ಈ ಬಗ್ಗೆ ಸರಕಾರ ಕೂಡಲೇ ಎಚ್ಚೆತ್ತು ಕ್ರಮ ಕೈಗೊಂಡು ರಾಜ್ಯವನ್ನು ಕೋಮು ದಳ್ಳುರಿಯಿಂದ ಸಂರಕ್ಷಿಸಲು ಮುಂದೆ ಬರಬೇಕೆಂದು ಒಕ್ಕೂಟವು ಆಗ್ರಹಿಸಿದೆ.












