ಅಮೆರಿಕ| ಕೊಲರಾಡೊದಲ್ಲಿ ದುಷ್ಕರ್ಮಿಯಿಂದ ಗುಂಡು ಹಾರಾಟ: ಪೊಲೀಸ್ ಅಧಿಕಾರಿ ಸಹಿತ 10 ಮಂದಿ ಮೃತ್ಯುವಶ

0
510

ಸನ್ಮಾರ್ಗ ವಾರ್ತೆ

ಕೊಲರಾಡೊ: ಅಮೆರಿಕದ ಕೊಲರಾಡೊದಲ್ಲಿ ನಡೆದ ಗುಂಡುಹಾರಾಟದಲ್ಲಿ ಪೊಲೀಸ್ ಅಧಿಕಾರಿ ಸಹಿತ ಹತ್ತು ಮಂದಿ ಹತ್ಯೆಯಾಗಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆಯೆಂದು ವರದಿ ತಿಳಿಸಿದೆ. ಬೋಲ್ಟನ್ ನಗರದ ಕಿಂಗ್ ಶಾಪರ್ಸ್ ಎಂಬ ಅಂಗಡಿಯಲ್ಲಿ ಗುಂಡು ಹಾರಾಟ ನಡೆಯಿತು. ದುಷ್ಕರ್ಮಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈತನ ಕಾಲಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸ್ಥಳೀಯ ಸಮಯ ಮೂರು ಗಂಟೆಗೆ ಕೊಲರಾಡೊ ವಿಶ್ವವಿದ್ಯಾನಿಲಯ ಇರುವ ನಗರದಿಂದ 40 ಕಿಲೊಮೀಟರ್ ದೂರದಲ್ಲಿ ಡೆನ್‍ವರ್ನ್‌ಲ್ಲಿ ದಾರುಣ ಘಟನೆ ನಡೆದಿದೆ. ಆಯುಧಧಾರಿಯಾದ ದುಷ್ಕರ್ಮಿ ಅಂಗಡಿಯ ಮುಂದೆ ಇದ್ದ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಕೊರೊನಕ್ಕೆ ವ್ಯಾಕ್ಸಿನ್ ಪಡೆಯಲು ಸ್ಥಳೀಯರು ಬಂದಿದ್ದಾಗ ಈತ ಗುಂಡು ಹಾರಿಸಿದ್ದಾನೆ. ಗುಂಡು ಹಾರಾಟದಿಂದ ಭಯಗ್ರಸ್ತ ಜರನು ಸ್ಥಳದಿಂದ ಚದುರಿ ಓಡಿಹೋದರು. ಗುಂಡು ಹಾರಾಟಕ್ಕೆ ಕಾರಣವೇನೆಂದು ತನಿಖೆ ನಡೆಯುತ್ತಿದೆ.ಇತ್ತೀಚೆಗೆ ಅಟ್ಲಾಂಟದ ಮಸಾಜ್ ಪಾರ್ಲರಿನಲ್ಲಿ ಗುಂಡು ಹಾರಾಟ ನಡೆದಿದ್ದು ಏಷ್ಯದ ಏಳು ಮಂದಿ ಕೊಲ್ಲಲ್ಪಟ್ಟಿದ್ದರು.