ಮತಾಂತರ ಆರೋಪ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕ್ರೈಸ್ತ ಸನ್ಯಾಸಿನಿಯರ ಮೇಲೆ ಹಿಂದುತ್ವ ಗುಂಪಿನಿಂದ ದಾಳಿ

0
1233

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿಯಿಂದ ಒಡಿಸ್ಸಕ್ಕೆ ತೆರಳುತ್ತಿದ್ದ ಕ್ರೈಸ್ತ ಸನ್ಯಾಸಿಯರ ಮೇಲೆ ಹಿಂದುತ್ವ ಗುಂಪು ದಾಳಿ ಮನಡೆಸಿದ್ದು, ದಾಳಿಕೋರರಿಂದ ಪಾರಾಗಲು ಸನ್ಯಾಸಿನಿಯರು ಸಾಮಾನ್ಯ ವಸ್ತ್ರ ಧರಿಸಿ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಈ ತಿಂಗಳು ಹತ್ತೊಂಬತ್ತನೇ ತಾರೀಖಿಗೆ ನಾಲ್ವರು ಕ್ರೈಸ್ತ ಸನ್ಯಾಸಿನಿಯರನ್ನು ನಿಝಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಹಿಂಬಾಲಿಸಿದ ಭಜರಂಗದಳದವರು ಎನ್ನಲಾದ ಗುಂಪು ಅತಿಕ್ರಮ ಎಸಗಿದರು.

ನಿಝಾಮುದ್ದೀನ್‍ನಿಂದ ಕ್ರೈಸ್ತ ಸನ್ಯಾಸಿನಿಯರು ಹತ್ತಿದ ಅದೇ ರೈಲನ್ನು ಅವರು ಹತ್ತಿದರು. ಒಡಿಸ್ಸದಿಂದ ಇಬ್ಬರು ಸಭಾ ವಿದ್ಯಾರ್ಥಿನಿಯರನ್ನು ರಜೆಯಲ್ಲಿ ದಿಲ್ಲಿಗೆ ಕರೆದುಕೊಂಡು ಬಂದಿದ್ದರು. ಇಬ್ಬರು ಸಾಮಾನ್ಯ ಬಟ್ಟೆ ಧರಿಸಿದ್ದರು. ಇಬ್ಬರು ಸನ್ಯಾಸಿನಿಯರ ಉಡುಪಿನಲ್ಲಿದ್ದರು. ಥಾರ್ಡ್ ಎಸಿಯಲ್ಲಿ ಪ್ರಯಾಣದ ವೇಲೆ ಝಾನ್ಸಿಗೆ ತಲುಪಿದಾಗ ಭಜರಂಗದಳದ ಕಾರ್ಯಕರ್ತರು ಅಕಾರಣವಾಗಿ ತಗಾದೆ ಎತ್ತಿದ್ದು, ಮತಾಂತರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿ ಗಲಾಟೆ ಮಾಡಿದ್ದರು.

ವಿದ್ಯಾರ್ಥಿನಿಯರು ತಾವು ಕ್ರೈಸ್ತ ಕುಟುಂಬದಲ್ಲಿ ಹುಟ್ಟಿದವರು ಎಂದು ಹೇಳಿದರೂ ಕೇಳಲಿಲ್ಲ. ಝಾನ್ಸಿ ನಿಲ್ದಾಣಕ್ಕೆ ಬಂದಾಗ ಉತ್ತರಪ್ರದೇಶದ ಪೊಲೀಸಧಿಕಾರಿಗಳು ಬಂದು ನಾಲ್ಕು ಜನರ ಲಗೇಜ್ ತೆಗೆದುಕೊಂಡು ಹೊರಬರಲು ಹೇಳಿದರು. ಆ ವೇಳೆ ಜೈಶ್ರೀರಾಮ್ ಕೂಗುತ್ತಾ ನೂರೈವತ್ತಕ್ಕೂ ಹೆಚ್ಚು ಭಜರಂಗದಳದವರು ಅಲ್ಲಿ ಗುಂಪುಗೂಡಿದ್ದರು. ರಜೆಯಲ್ಲಿ ಊರಿಗೆ ಹೋಗುತ್ತಿದ್ದೇವೆ. ಮಹಿಳಾ ಪೊಲೀಸರಿಲ್ಲದೆ ಹೊರಗೆ ಬರುವುದಿಲ್ಲ ಎಂದು ಹೇಳಿದರೂ ಪೊಲೀಸರು ಒಪ್ಪಲಿಲ್ಲ.

ಆಧಾರ್ ಕಾರ್ಡ್ ಸಹಿತ ದಾಖಲೆಗಳನ್ನು ತೋರಿಸಿದರೂ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ರಾತ್ರೆ ಹನ್ನೊಂದು ಗಂಟೆಗೆ ಠಾಣೆಯಿಂದ ಬಿಷಪ್ ಹೌಸ್‍ಗೆ ಕಳುಹಿಸಲಾಯಿತು. ಶನಿವಾರ ಒಡಿಸ್ಸಕ್ಕೆ ಪೊಲೀಸರ ರಕ್ಷಣೆಯೊಂದಿಗೆ ಸಾಮಾನ್ಯ ಉಡುಪು ತೊಟ್ಟು ಕ್ರೈಸ್ತ ಸನ್ಯಾಸಿನಿಯರು ತೆರಳಿದ್ದಾರೆ.