ಉಯಿಘರ್ ಜನಾಂಗೀಯ ಹತ್ಯೆ: ಚೀನಕ್ಕೆ ದಿಗ್ಭಂಧನ ಹೇರಿದ ಪಾಶ್ಚಾತ್ಯ ದೇಶಗಳು

0
758

ಸನ್ಮಾರ್ಗ ವಾರ್ತೆ

ಲಂಡನ್: ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಉಯಿಗಹರ್ ಮುಸ್ಲಿಮ್ ಅಲ್ಪಸಂಖ್ಯಾತರ ಜನಾಂಗೀಯ ಹತ್ಯೆ ನಡೆಸುತ್ತಿರುವ ಚೀನಾ ಸರಕಾರದ ವಿರುದ್ಧ ಪಾಶ್ಚಾತ್ಯ ದೇಶಗಳು ದಿಗ್ಬಂಧನ ಹೇರಿವೆ. ಯುರೋಪಿಯನ್ ಯುನಿಯನ್, ಇಂಗ್ಲೆಂಡ್, ಅಮೆರಿಕ ಕೆನಡಾ ದೇಶಗಳು ಕ್ರಮ ಜರಗಿಸಿವೆ. ಇದನ್ನು ವಿರೊಧಿಸಿ ಯುರೋಪಿಯನ್ ಅಧಿಕಾರಗಳ ವಿರುದ್ಧ ಚೀನ ಕೂಡ ದಿಗ್ಬಂಧನ ಘೋಷಿಸಿದೆ.

ಉಯಿಘರ್ ಮುಸ್ಲಿಮರ ಮೂಲಭೂತ ಹಕ್ಕುಗಳನ್ನು ಕೂಡ ಚೀನ ನಿಷೇಧಿಸಿದೆ ಎಂದು ಇಂಗ್ಲೆಂಡಿನ ವಿದೇಶಾಂಗ ಕಾರ್ಯದರ್ಶಿ ಡೆಮಿನಿಕ್ ರಾಬ್ ಹೇಳಿದರು. 1989ರಲ್ಲಿ ಟಿಯೋನ್ಮಾನ್ ಚೌಕದಲ್ಲಿ ನಡೆದ ರಕ್ತ ಚೆಲ್ಲಾಟದ ಬಳಿಕ ಮೊದಲ ಬಾರಿಗೆ ಯುರೋಪಿಯನ್ ಯೂನಿಯನ್ ಚೀನದ ಮೇಲೆ ದಿಗ್ಬಂಧನ ವಿಧಿಸಿತ್ತು. ಸಿಂಜಿಯಾಂಗ್ ಪ್ರಾಂತ್ಯಕ್ಕೆ ಸಂಬಂಧಿಸಿ ಇಲಾಖಾ ಮುಖ್ಯಸ್ಥ, ಪಾರ್ಟಿ ಮುಖ್ಯಸ್ಥರು ದಿಗ್ಬಂದನದ ಮೊಣೆಯಲ್ಲಿದ್ದಾರೆ. ಸಾರ್ವಜನಿಕ ಸುರಕ್ಷಾ ಬ್ಯೂರೋ ನಿರ್ದೇಶಕ ಚೆನ್ ಮಿಗುವೊವಾ, ಕಮ್ಯುನಿಸ್ಟ್ ಪಾರ್ಟಿ ಸ್ಟಾಂಡಿಂಗ್ ಕಮಿಟಿ ಸದಸ್ಯ ವಾಂಗ್ ಮಿಂಗ್‍ಶನ್, ಉಪಮುಖ್ಯಸ್ಥ ಸು ಹಿಯಾಲೂನ್, ಪ್ರೊಡಕ್ಷನ್ ಆಂಡ್ ಕಂಟ್ರಸ್ಟ್ರಕ್ಟಿಂಗ್ ಕಮಿಟಿ ಸದಸ್ಯ ವಾಂಗ್ ಜುನ್‍ಶೆಂಗ್ ಮಾತ್ರವಲ್ಲದೆ ಉಯಿಘರ್ ಕ್ಯಾಂಪ್ ನಿರ್ವಹಣೆ ಹೊಣೆಯಿರುವ ಸಿಂಜಿಯಾಂಗ್ ಪ್ರೊಡಕ್ಷನ್ ಆಂಡ್ ಕನ್‍ಸ್ಟ್ರಕ್ಷನ್ ಕಾಪ್ರ್ಸ್ ಪಬ್ಲಿಕ್ ಸೆಕ್ಯೂರಿಟಿ ಬ್ಯೂರೊಗೆ ದಿಗ್ಬಂಧನ ಹೇರಲಾಗಿದೆ.