ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಕೇಸು ಹಾಕಲು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅನುಮತಿ ನಿರಾಕರಿಸಿದ್ದಾರೆ.
ರಾಹುಲ್ರ ಹೇಳಿಕೆಗಳು ಕಾನೂನು ವ್ಯವಸ್ಥೆಯ ಅಂತಸ್ತು ಕಡಿಮೆಗೊಳಿಸುವಂಥದ್ದಲ್ಲ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಹುಲ್ ಗಾಂಧಿಯವರು ಕಾನೂನು ವ್ಯವಸ್ಥೆಯನ್ನು ಅಪಮಾನಿಸಿದ್ದಾರೆ ಎಂದು ವಕೀಲ ವಿನೀತ್ ಜಿಂದಾಲ್ ಅಟಾರ್ನಿ ಜನರಲ್ರನ್ನು ಸಂಪರ್ಕಿಸಿ ಮಾನನಷ್ಟ ಮೊಕದ್ದಮೆ ಹೂಡಲು ಅನುಮತಿ ಕೇಳಿದ್ದರು.
ದೇಶದ ಕಾನೂನು ವ್ಯವಸ್ಥೆ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಶೇ.100ರಷ್ಟು ಸ್ವಾತಂತ್ರ್ಯವನ್ನು ನೀಡುತ್ತಿದೆ. ಸ್ವಂತ ಜನರನ್ನು ಇಂತಹ ಸಂಸ್ಥೆಗಳಿಗೆ ತುರುಕುವ ಮೂಲಕ ಬಿಜೆಪಿ ಅವುಗಳನ್ನು ದುರ್ಬಲಗೊಳಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇದನ್ನು ಬೆಟ್ಟು ಮಾಡಿ ವಿನೀತ್ ಜಿಂದಾಲ್ ಮಾನನಷ್ಟ ಕೇಸು ಹಾಕಲು ಹೊರಟಿದ್ದರು.
ನ್ಯಾಯ ವ್ಯವಸ್ಥೆಯನ್ನು ಅಪಮಾನಿಸುವ ಹೇಳಿಕೆ ರಾಹುಲ್ ನೀಡಿದರೆನ್ನಲಾಗದು. ಸುಪ್ರೀಂಕೋರ್ಟನ್ನೋ, ಜಡ್ಜನ್ನೋ ರಾಹುಲ್ ಗಾಂಧಿ ಉಲ್ಲೇಖಿಸಿಲ್ಲ ಎಂದು ವೇಣುಗೋಪಾಲ್ ಹೇಳಿದ್ದಾರೆ ಎಂದು ಎನ್ ಡಿ ಟಿ ವಿ ವರದಿ ಮಾಡಿದೆ.












