ಉದ್ಯಮಿ, ಎಕ್ಸ್ ಪರ್ಟೈಸ್ ಸಮೂಹ ಸಂಸ್ಥೆಯ ಚೇಯರ್ ಮೆನ್ ಹಾಜಿ ಕೆ.ಎಸ್‌. ಸಯೀದ್ ಕರ್ನೀರೆ ನಿಧನ

0
1027

ಸನ್ಮಾರ್ಗ ವಾರ್ತೆ

ಮಂಗಳೂರು: ಖ್ಯಾತ ಉದ್ಯಮಿ, ಪ್ರತಿಷ್ಠಿತ ಎಕ್ಸ್‌ಪರ್ಟೈಸ್ ಸಮೂಹ ಸಂಸ್ಥೆಯ ಚೇಯರ್‌ಮೆನ್ ಹಾಜಿ ಕೆ.ಎಸ್.ಸಯೀದ್ ಕರ್ನಿರೆ (80) ಶುಕ್ರವಾರ ತಡರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೊಡುಗೈ ದಾನಿಯಾಗಿದ್ದ ಕೆ.ಎಸ್.ಸಯೀದ್ ಕರ್ನೀರೆಯವರು ಕರ್ನೀರೆ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷರು ಕೂಡಾ ಆಗಿದ್ದರು.

30 ವರ್ಷಗಳ ಕಾಲ ಕಾಲ ಜಮಾಅತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ‘ಸನ್ಮಾರ್ಗ’ ಪತ್ರಿಕೆಯ ಹಿತೈಷಿಯೂ ಆಗಿದ್ದರು.

ಇವರ ಪುತ್ರರು ಎಕ್ಸ್‌ಪರ್ಟೈಸ್ ಸಮೂಹ ಸಂಸ್ಥೆಯನ್ನು ಸೌದಿ ಅರೇಬಿಯಾದಲ್ಲಿ ಕಟ್ಟಿ ಬೆಳೆಸಿದ್ದಾರೆ.

ಮೃತರು ಆರು ಮಂದಿ ಪುತ್ರರು, ಐವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಶನಿವಾರ (ಮಾ.27) ಮಧ್ಯಾಹ್ನ 12ಕ್ಕೆ ಕರ್ನೀರೆ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳು ಮಾಹಿತಿ ನೀಡಿದೆ‌.