ಅಸ್ಸಾಂನ 47, ಪಶ್ಚಿಮ ಬಂಗಾಳದ 30 ವಿಧಾನಸಭಾ ಕ್ಷೇತ್ರಕ್ಕೆ ಮೊದಲ ಹಂತದ ಮತದಾನ ಆರಂಭ: ಎಲ್ಲೆಡೆ ಸುರಕ್ಷತಾ ಕ್ರಮ

0
498

ಸನ್ಮಾರ್ಗ ವಾರ್ತೆ

ಅಸ್ಸಾಂ/ಪಶ್ಚಿಮ ಬಂಗಾಳ: ಕೊರೋನಾ ಸಾಂಕ್ರಾಮಿಕ ರೋಗದ ಕಠಿಣ ಪರಿಸ್ಥಿತಿಯಲ್ಲೂ ದೇಶದಲ್ಲಿ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಇಂದು ಆರಂಭಗೊಂಡಿದ್ದು, ಮತದಾರರು ಬೆಳಗ್ಗೆಯಿಂದಲೇ ಮತ ಚಲಾಯಿಸಲು ಮತಕೇಂದ್ರಗಳಿಗೆ ಆಗಮಿಸುತ್ತಿದ್ದಾರೆ. ಎಲ್ಲಾ ಮತ ಕೇಂದ್ರಗಳಲ್ಲಿ ಸರತಿ ಸಾಲು ಕಂಡು ಬಂದಿದೆ.

ಕೋವಿಡ್ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಂಪೂರ್ಣ ಸುರಕ್ಷತಾ ಕ್ರಮಗಳೊಂದಿಗೆ ಮತದಾನ ಪ್ರಕ್ರಿಯೆಯನ್ನು ಆರಂಭಿಸಿದೆ‌‌.

ಮೊದಲ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದಲ್ಲಿ 30 ಮತ್ತು ಅಸ್ಸಾಂನಲ್ಲಿ 47 ಸ್ಥಾನಗಳಿಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ಬಂಗಾಳದಲ್ಲಿ‌ ಮಮತಾ ಬ್ಯಾನರ್ಜಿಯವರ ನೇತೃತ್ವದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ನಡುವೆ ನೇರ ಹಣಾಹಣಿ ಕಂಡು ಬಂದಿದ್ದು, ಈ ಚುನಾವಣೆಯು ಪ್ರತಿಷ್ಠೆಯಾಗಿ ಎರಡೂ ಪಕ್ಷಕ್ಕೆ ಮಾರ್ಪಟ್ಟಿದೆ.

ಅಸ್ಸಾಂನಲ್ಲಿ ಬಿಜೆಪಿಯುಬಕಾಂಗ್ರೆಸ್ ನೇತೃತ್ವದ ‘ಮಹಾ ಮೈತ್ರಿಯನ್ನು ಸೋಲಿಸಿ, ಅಧಿಕಾರವನ್ನು ಉಳಿಸಿಕೊಳ್ಳುವ ಸವಾಲನ್ನು ಎದುರಿಸುತ್ತಿದೆ.

ಕೋವಿಡ್ ಕಾರಣದಿಂದಾಗಿ ಮತದಾನ‌‌ ಪ್ರಕಿಯೆಗೆ ಚುನಾವಣಾ ಆಯೋಗವು ಒಂದು ಗಂಟೆಯನ್ನು ವಿಸ್ತರಿಸಿದೆ. ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿರುವ ಮತದಾನವು ಸಂಜೆ 6 ಗಂಟೆಯವರೆಗೆ ನಡೆಯಲಿದೆ.