ಸನ್ಮಾರ್ಗ ವಾರ್ತೆ
ಮಹಾರಾಷ್ಟ್ರ: ಕೊರೋನಾ ಸಂಕಷ್ಟದ ಮಧ್ಯೆ ಸರಿಯಾದ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ಪುಣೆಯ ಪ್ರಸಿದ್ಧ ಫ್ಯಾಷನ್ ಸ್ಟ್ರೀಟ್ ನ ವ್ಯಾಪಾರಿಗಳಿಗೆ ನಿನ್ನೆ ರಾತ್ರಿ ಸಂಭವಿಸಿದ ಅಗ್ನಿ ಅವಘಡವು ಗಾಯದ ಮೇಲೆ ಬರೆ ಎಳೆದಂತಹಾ ಪರಿಸ್ಥಿತಿ ತಂದೊಟ್ಟಿದೆ.
ಪುಣೆ ಕಂಟೋನ್ಮೆಂಟ್ ಪ್ರದೇಶದ ಪ್ರಸಿದ್ಧ ಫ್ಯಾಶನ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಶುಕ್ರವಾರ ತಡರಾತ್ರಿ ದೊಡ್ಡ ಮಟ್ಟದ ಬೆಂಕಿ ಕಾಣಿಸಿಕೊಂಡು ಸುಮಾರು 500ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿದೆ ಸ್ಥಳೀಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ 11 ಗಂಟೆಗೆ ದೊಡ್ಡ ಮಟ್ಟದ ಬೆಂಕಿ ಕಾಣಿಸಿಕೊಂಡ ಬಗ್ಗೆ ಸ್ಥಳೀಯರಿಂದ ಕರೆ ಬಂದಿದ್ದು, ಕೂಡಲೇ ವಾಟರ್ ಟ್ಯಾಂಕರ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದರೂ
ಬೆಂಕಿಯ ಕೆನ್ನಾಲಿಗೆ 500ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲಾಗಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ನಷ್ಟವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಘಟನೆಗೆ ಸರಿಯಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಪುಣೆ ಕಂಟೋನ್ಮೆಂಟ್ ಪ್ರದೇಶದ ಎಂಜಿ ರಸ್ತೆಯಲ್ಲಿರುವ ಫ್ಯಾಶನ್ ಸ್ಟ್ರೀಟ್ ಪ್ರಸಿದ್ಧವಾದ ಶಾಪಿಂಗ್ ತಾಣವಾಗಿದ್ದು, ಉಡುಪುಗಳು, ಚಪ್ಪಲಿಗಳು, ಕನ್ನಡಕಗಳು ಮತ್ತು ಇತರ ಪರಿಕರಗಳನ್ನು ಮಾರಾಟ ಮಾಡುವ ಸಣ್ಣ ಸಣ್ಣ ಮಳಿಗೆಗಳನ್ನು ಹೊಂದಿತ್ತು. ಕೊರೋನಾ ಸಂಕಷ್ಟದ ಮಧ್ಯೆ ಸರಿಯಾದ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ವ್ಯಾಪಾರಿಗಳಿಗೆ ಈ ಅಗ್ನಿ ಅವಘಡವು ಗಾಯದ ಮೇಲೆ ಬರೆ ಎಳೆದಂತಹಾ ಪರಿಸ್ಥಿತಿ ತಂದೊಟ್ಟಿದೆ.

A huge fire broke out at the popular #FashionStreet on #MGRoad in #Pune last night around 11 pm, gutting almost 400 shops in the area. More details awaited.
Video courtesy: @mataonline pic.twitter.com/3NDZhbhmGN— Pune Times (@PuneTimesOnline) March 27, 2021












