ಸನ್ಮಾರ್ಗ ವಾರ್ತೆ
ರಿಯಾದ್ : ಸೌದಿ ಅರೇಬಿಯಾ ಮತ್ತು ಇಸ್ರೇಲಿನ ನಡುವೆ ನಡೆದ ಒಪ್ಪಂದವನ್ನು ಪ್ರಯೋಜನಕ್ಕೆ ಬಳಸಲಾಗುವುದು ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅಲ್ ಸವೂದ್ ಹೇಳಿದರು.
ಒಪ್ಪಂದ ಪ್ರಗತಿಯಲ್ಲಿದೆ. ಶಾಂತಿ ಪ್ರಕ್ರಿಯೆಗಾಗಿ ಈ ಒಪ್ಪಂದ ಇದೆ. ಆರ್ಥಿಕ ಸಾಮಾಜಿಕ ಸುರಕ್ಷಾ ಕ್ಷೇತ್ರದಲ್ಲಿ ಖಂಡಿತ ಇದು ಉಪಯೋಗಕ್ಕೆ ಬರುತ್ತದೆ. 1967ರ ಗಡಿಯೊಳಗೆ ಫೆಲಸ್ತೀನ್ಗೆ ನಾಗರಿಕ ಹಕ್ಕು ಕೊಟ್ಟರೆ ಮಾತ್ರ ಇದು ಸಾಧ್ಯವಾಗಲಿದೆ ಎಂದು ಸಿಎನ್ಎನ್ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.
ಫೆಲಸ್ತೀನಿಯರ ಸಾರ್ವಭೌಮತೆಯ ದೇಶ ಕೊಡಬೇಕು ಎಂಬ ಆಧಾರದಲ್ಲಿ ಇಸ್ರೇಲಿನೊಂದಿಗೆ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರಲಾಗುತ್ತಿದೆ ಎಂದು ಈ ಹಿಂದೆಯೂ ಸೌದಿ ಅರೇಬಿಯಾ ಹೇಳಿಕೊಂಡಿತ್ತು. ಕಳೆದ ವರ್ಷ ಸೆಪ್ಟಂಬರಿನಲ್ಲಿ ಯುಎಇ, ಬಹ್ರೈನ್ ಅಬ್ರಾಹಾಂ ಒಪ್ಪಂದ ಎಂದು ಕರೆದಿತ್ತು. ಈ ಒಪ್ಪಂದದ ಮೂಲಕ ಸಂಬಂಧ ಸಾಮಾನ್ಯ ಸ್ಥಿತಿಗೆ ತರಲಾಗಿತ್ತು. ನಂತರ ಮೊರಾಕ್ಕೋ ಸುಡಾನ್ ಇಸ್ರೇಲಿನೊಂದಿಗೆ ಸಂಬಂಧ ಸ್ಥಾಪಿಸಿತ್ತು. 1979ರಲ್ಲಿ ಈಜಿಪ್ಟ್ ಈ ಪ್ರಕ್ರಿಯೆ ಚಾಲನೆ ನೀಡಿತ್ತು. 1994ರಲ್ಲಿ ಜೋರ್ಡಾನ್ ಇಸ್ರೇಲನ್ನು ಅಂಗೀಕರಿಸುವುದರೊಂದಿಗೆ ಇವೆಲ್ಲ ಚಾಲನೆಗೆ ಬಂದಿವೆ.












