ಸನ್ಮಾರ್ಗ ವಾರ್ತೆ
ಮಂಗಳೂರು: ಮೂಲತಃ ಮಂಗಳೂರಿನ ಬೋಳಾರ ನಿವಾಸಿ, ಪ್ರಸ್ತುತ ವಾಮಂಜೂರು ಪ್ರದೇಶದಲ್ಲಿ ವಾಸವಾಗಿದ್ದ ಸಮಾಜ ಸೇವಕ, ಜಮಾಅತೆ ಇಸ್ಲಾಮಿ ಹಿಂದ್ ನ ಹಿರಿಯ ಕಾರ್ಯಕರ್ತ ಅಬ್ದುರ್ರಶೀದ್ ಬೋಳಾರ ಇಂದು ನಿಧನರಾಗಿದ್ದಾರೆ.
ಅವರಿಗೆ 82 ವರ್ಷ ವಯಸ್ಸಾಗಿತ್ತು. ಬೋಳಾರದ ಶಾದಿ ಮಹಲ್ ನ ಸ್ಥಾಪಕ ಸದಸ್ಯರಾಗಿದ್ದ ಇವರು, ಹಲವಾರು ಬಡ ಜನರ ಸೇವೆ ಮಾಡುವ ಮೂಲಕ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದ್ದರು. ವಾಮಂಜೂರಿನ ಹಮ್ಡ್ ಟ್ರಸ್ಟ್ ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ಇವರ ಪತ್ನಿ ನಿಧನರಾಗಿದ್ದರು. ವಯೋ ಸಹಜ ಸಮಸ್ಯೆಯಿಂದ ಗಂಜಿಮಠದಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿದ್ದರು. ಅಪಾರ ಬಂಧುಗಳನ್ನು ಅಗಲಿರುವ ಇವರು, ಜನಾನುರಾಗಿಯಾಗಿದ್ದರು.
ಇವರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿ, ನಗರ ಅಧ್ಯಕ್ಷ ಕೆ. ಎಂ. ಅಶ್ರಫ್ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಬೋಳಾರದ ಜುಮಾ ಮಸೀದಿಯಲ್ಲಿ ಮೃತರ ದಫನ ಕಾರ್ಯ ನಡೆಸಲಾಯಿತು.












