ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಮದ್ಯಪಾನ ಮಾಡಿ ಅತಿವೇಗದಿಂದ ಸ್ಪರ್ಧಾತ್ಮಕ ಮತ್ತು ಅಪಾಯಕಾರಿಯಾಗಿ ಚಾಲನೆ ಮಾಡುವುದು, ಹೆಲ್ಮೆಟ್ ಧರಿಸದೆ ನಿರಂತರ ಟ್ರಾಫಿಕ್ ಕಾನೂನು ಉಲ್ಲಂಘಿಸುವವರ ಹೆಸರಿನ ಪಟ್ಟಿಯನ್ನು ಮಾಡಿ ಕೇಂದ್ರ ಸಾರಿಗೆ ಕಾನೂನು ಪ್ರಕಾರ ರಾಜ್ಯ ಸಾರಿಗೆ ಇಲಾಖೆಗಳು ಅವರ ವೆಬ್‌ಪೋರ್ಟಲ್‍ನಲ್ಲಿ ಹಾಕಲಿವೆ. ಅದಕ್ಕಾಗಿ ಕೇಂದ್ರ ಸಾರಿಗೆ ಸಚಿವಾಲಯ ಕಾನೂನಿನಲ್ಲಿ ಸುಧಾರಣೆ ತಂದಿದೆ. ಟ್ರಾಫಿಕ್ ನಿಯಮ ಉಲ್ಲಂಘಿಸುವ ವ್ಯಕ್ತಿಗಳ ಒಂದು ಪಟ್ಟಿಯನ್ನು ಈ ಪೋರ್ಟಲ್‍ನಲ್ಲಿ ಪ್ರಕಟಿಸಲಾಗುವುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಸಾರಿಗೆ ಇಲಾಖೆಗಳು ಅವರ ಪೋರ್ಟಲ್‍ನಲ್ಲಿ ಕಾನೂನಿನ ಸೆಕ್ಷನ್ 19ರ ಉಪ ವಿಭಾಗ(1ಎ) ಪ್ರಕಾರ ಡ್ರೈವಿಂಗ್ ಲೈಸನ್ಸ್ ಅಸಿಂಧುಗೊಳಿಸುವುದು ಎಂಬ ಒಂದು ವಿಶೇಷ ವಿಭಾಗವನ್ನು ಮಾಡಲಿದೆ. ಅದು ಸಾರ್ವಜನಿಕರಿಗೆ ಲಭಿಸುವಂತೆ ಮಾಡಲು ಮುದ್ರಿಸಿ ಹಂಚಲು ಸಾಧ್ಯವಿರುವ ಪಿಡಿಎಫ್ ರೂಪದಲ್ಲಿ ಇರಲಿದೆ.
ಕಾನೂನುಗಳಲ್ಲಿ ತಂದ ಹೊಸ ಬದಲಾವಣೆಗಳು ಆನ್‍ಲೈನ್‍ನಲ್ಲಿ ಸಿಗುವಂತಿರುವುದರಿಂದ ಜನರಿಗೆ ಸಂಚಾರಕ್ಕೆ ಸಂಬಂಧಿಸಿದ ಸೇವೆಗಳು ಸುಲಭದಲ್ಲಿ ಲಭ್ಯಗೊಳಿಸಲು ಉಪಯುಕ್ತವಾಗಲಿದೆ.
ಅರ್ಜಿ ಸಲ್ಲಿಸುವುದು, ಲೈಸೆನ್ಸ್ ನೀಡುವುದರಿಂದ ಹಿಡಿದು ಮೆಡಿಕಲ್ ಸರ್ಟಿಫಿಕೆಟ್ ಸಲ್ಲಿಸುವವರೆಗಿನ ಅರ್ಜಿಗಳ ಸಲ್ಲಿಕೆಗಳು ಮತ್ತು ಚಾಲಕ ಪರವಾನಗಿ ನವೀಕರಣದಂತಹ ಸೇವೆಗಳು ಲಭ್ಯವಾಗಲಿದೆ.












