ಸನ್ಮಾರ್ಗ ವಾರ್ತೆ
ಕೊಲ್ಲಂ: ಮಾಜಿ ಸಚಿವ ಕೇರಳ ಕಾಂಗ್ರೆಸ್ ಸ್ಥಾಪಕ ಅಧ್ಯಕ್ಷ ಆರ್.ಬಾಲಕೃಷ್ಣ ಪಿಳ್ಳೈ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಅಸೌಖ್ಯದಿಂದ ಅವರು ನಿಧನರಾಗಿದ್ದು, ಕೊಟ್ಟಾರಕ್ಕರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಗ್ಗೆ ಅವರ ಬಹಳಷ್ಟು ವಿಶೇಷತೆಗಳು ತುಂಬಿದ ರಾಜಕೀಯ ಜೀವನವು ಅವರ ನಿಧನದೊಂದಿಗೆ ಕೊನೆಗೊಂಡಿತು.
ಬೆಳಗ್ಗೆ ಒಂಬತ್ತೂವರೆ ಗಂಟೆಯವರೆ ಅವರ ಕೊಟ್ಟರಕ್ಕರ ಮನೆಯಲ್ಲಿ ಮತ್ತು ಒಂಬೂತ್ತೂವರೆಯಿಂದ ಎನ್ಎಸ್ಎಸ್ ತಾಲೂಕ್ ಕೇಂದ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು.
1935ರಲ್ಲಿ ಜನಿಸಿದ ಅವರು ಕಾಂಗ್ರೆಸ್ ಮೂಲಕ ಸಕ್ರಿಯ ರಾಜಕೀಯ ಪ್ರವೇಶಿಸಿದ್ದರು. ನಂತರ ಕೇರಳ ಕಾಂಗ್ರೆಸ್ಗೆ ಹೋದರು. ಅಲ್ಲಿಂದ ಸ್ವಂತ ಪಾರ್ಟಿ ಕಟ್ಟಿದರು. 16ನೇ ವರ್ಷದಲ್ಲಿ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಸದಸ್ಯರಾಗಿದ್ದರು. ಕೇರಳ ಕಾಂಗ್ರೆಸ್ಸಿನ ಸ್ಥಾಪಕ ನಾಯಕರೊಲ್ಲಬ್ಬರಾಗಿದ್ದರು. ಪ್ರಥಮ ಜನರಲ್ ಸೆಕ್ರಟರಿಯಾಗಿಯೂ ರಾಜಕೀಯದ ಜೊತೆಗೆ ಸಮುದಾಯಿಕ ಕೆಲಸದಲ್ಲಿಯೂ ಅವರು ಸಕ್ರಿಯವಾಗಿದ್ದರು. ಆರು ದಶಕಕ್ಕಿಂತಲೂ ಹೆಚ್ಚು ಕಾಲ ಪತ್ತನಾಪುರಂ ತಾಲೂಕ ಎನ್ಎಸ್ ಯೂನಿಯನ್ ಅಧ್ಯಕ್ಷರಾಗಿದ್ದರು. ಎನ್ಎಸ್ಎಸ್ ನಿರ್ದೇಶಕ ಮಂಡಳಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.












