ಪ.ಬಂಗಾಳ: ಬಿಜೆಪಿಯಿಂದ ಆಯ್ಕೆಯಾದ ಎಲ್ಲ 77 ಶಾಸಕರಿಗೆ ಸಶಸ್ತ್ರ ಕಮಾಂಡೊಗಳ ಸುರಕ್ಷೆ

0
589

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಹೊಸದಾಗಿ ಆಯ್ಕೆಯಾದ ಎಲ್ಲ 77 ಬಿಜೆಪಿ ಶಾಸಕರಿಗೆ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಅರೆ ಸೈನಿಕ ಪಡೆಗಳ ಸುರಕ್ಷೆ ಸಿಗಲಿದೆ. ಪ.ಬಂಗಾಳದ ವಿಧಾನಸಭೆಯ ಬಿಜೆಪಿ ಸದಸ್ಯರಿಗೆ ಸಿಐಎಸ್‍ಎಫ್ ಮತ್ತು ಸಿಆರ್‍ ಪಿ ಎಫ್ ಸಶಸ್ತ್ರ ಕಮೊಂಡೊಗಳು ಸುರಕ್ಷೆಯನ್ನು ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳಿಂದ ವರದಿಯಾಗಿದೆ.

ಪಶ್ಚಿಮ ಬಂಗಾಳದ ಮತ ಎಣಿಕೆಯ ನಂತರದ ಅಕ್ರಮಗಳ ಕುರಿತು ಉನ್ನತ ಮಟ್ಟದ ಸತ್ಯಶೋಧನಾ ಸಮಿತಿಯ ವರದಿ ಮತ್ತು ಪ.ಬಂಗಾಳದ ಕೇಂದ್ರ ಸುರಕ್ಷಾ ಏಜೆನ್ಸಿಯ ವರದಿಯ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಈ ತೀರ್ಮಾನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

77 ಬಿಜೆಪಿ ಶಾಸಕರಲ್ಲಿ 61 ಮಂದಿಗೆ ಅತ್ಯಂತ ಕಡಿಮೆಯ ಎಕ್ಸ್ ಕೆಟಗರಿ ಸುರಕ್ಷೆ ಮತ್ತು ಉಳಿದವರಿಗೆ ಝೆಡ್ ಕ್ಯಾಟಗರಿ ಸುರಕ್ಷೆ ಸಿಗಲಿದೆ ಎಂದು ವರದಿಯಾಗಿದೆ.