ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೊರೋನದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೇರಿದ್ದ ನಿಯಂತ್ರಣಗಳಲ್ಲಿ ಇಂದಿನಿಂದ ಸಡಿಲಿಕೆ ಮಾಡಲಾಗುತ್ತಿದೆ. ಕೆಲವು ರಾಜ್ಯಗಳು ಹೆಚ್ಚಿನ ನಿಯಂತ್ರಣಗಳನ್ನು ತೆಗೆದು ಹಾಕಲು ಸಜ್ಜಾಗಿದೆ. ಆದರೆ, ಇನ್ನೊಂದು ಕೊರೋನ ತರಂಗದ ಸಾಧ್ಯತೆ ಇರುವುದರಿಂದ ತುಂಬ ಎಚ್ಚರಿಕೆಯಿಂದ ಹಂತ ಹಂತವಾಗಿ ಕೆಲವು ರಾಜ್ಯಗಳು ನಿಯಂತ್ರಣ ಸಡಿಲಿಕೆ ಮಾಡುತ್ತಿದೆ.
ತಮಿಳ್ನಾಡಿನಲ್ಲಿ ಕೊರೋನ ಪ್ರಕರಣಗಳು ಹೆಚ್ಚು ವರದಿಯಾಗಿರುವ ಹನ್ನೊಂದು ಜಿಲ್ಲೆಗಳನ್ನು ಹೊರತುಪಡಿಸಿ ಅಂದರೆ ಕೋಯಮತ್ತೂರ್, ನೀಲಗಿರಿ, ತಿರುಪುರ, ಈರೋಡ್, ಸಏಲಂ ಕಾರೂರ್, ನಮಕ್ಕಳ್, ತಂಜಾವೂರ್ ತಿರುವಾರೂರ್, ನಾಗಪಟ್ಟಣ, ಮಯಿಲಾಡುತುರೈ ಜಿಲ್ಲೆಗಳಲ್ಲಿ ನಿಯಂತ್ರಣಗಳನ್ನು ಮುಂದುವರಿಸಲಾಗಿದ್ದು, ಇತರ ಜಿಲ್ಲೆಗಳಲ್ಲಿ ಅಗತ್ಯ ವಸ್ತುಗಳ ವ್ಯಾಪಾರವನ್ನು ಬೆಳಗ್ಗೆ ಆರು ಗಂಟೆಯಿಂದ ಸಂಜೆ ಐದು ಗಂಟೆಗಳವರೆಗೆ ಮಾಡುವ ಅನುಮತಿ ನೀಡಲಾಗಿದೆ. ಇಲೆಕ್ಟ್ರಿಕಲ್ ಉಪಕರಣಗಳು ಹಾಗೂ ಮುಂತಾದುದರ ಅಂಗಡಿಗಳು ತೆರೆಯಬಹುದು ಬೆಂಕಿ ಪೊಟ್ಟಣ ಕಾರ್ಖಾನೆಯಲ್ಲಿ ಅರ್ಧ ಹಾಜರಾತಿಯೊಂದಿಗೆ ಕೆಲಸ ಮಾಡಬಹುದು. ಸರಕಾರಿ ಕಚೇರಿಗಳಲ್ಲಿ ಶೇ. 30ರಷ್ಟು ಹಾಜರಾತಿಗೆ ಅವಕಾಶ ಕಲ್ಪಿಸಲಾಗಿದೆ.
ಇಲಕ್ಟ್ರಿಶಿಯನ್, ಫ್ಲಂಬರ್, ಮರಗೆಲಸ ಮುಂತಾದವರು ಬೆಳಗೆ ಆರು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಕೆಲಸ ಮಾಡಬಹುದು. ಕಾಲ್ ಟ್ಯಾಕ್ಸಿ, ಇತರ ಟ್ಯಾಕ್ಸಿ, ಆಟೊ ಈ ರಿಜಿಸ್ಟ್ರೇಶನ್ ಮಾಡಿಕೊಂಡು ಓಡಾಟ ಮಾಡಬಹುದು.
ದಿಲ್ಲಿಯಲ್ಲಿ ಶೇ.50ರಷ್ಟು ಪ್ರಯಾಣಿಕರೊಂದಿಗೆ ಮೆಟ್ರೊ ಓಡಾಟ ಸಾಗಲಿದೆ. ಮಾಲ್ಗಳು ವಾರದ ಸಂತೆಗಳು ಇರುವ ಮಾರುಕಟ್ಟೆಗಳು ಸಮ ಬೆಸ ಆಧಾರದಲ್ಲಿ ತೆರೆಯಬಹುದು. ಅಂಗಡಿಗಳ ನಂಬರ್ ಪ್ರಕಾರ ಈ ಕ್ರಮವನ್ನು ಅಳವಡಿಸಿಕೊಳ್ಳಲಾಗುವುದು. ಬೆಳಗ್ಗೆ ಹತ್ತು ಗಂಟೆಯಿಂದ ರಾತ್ರೆ ಎಂಟು ಗಂಟೆಯವರೆಗೆ ತೆರದಿಡಬಹುದು.
ರೆಸೆಡೆನ್ಶಿಯಲ್ ಕಾಂಪ್ಲೆಕ್ಸ್ಗಳ ಎಲ್ಲ ಅಂಗಡಿಗಳನ್ನು ಎಲ್ಲ ದಿನವೂ ತೆರೆಯಬಹುದು. ಖಾಸಗಿ ಸಂಸ್ಥೆಗಳ ಕಚೇರಿಗಳು ಅರ್ಧಾಂಶ ಜನರೊಂದಿಗೆ ಕೆಲಸ ಮಾಡಬಹುದು. ಸರಕಾರಿ ಕಚೇರಿಗಳಲ್ಲಿ ಉನ್ನತ ಹೊಣೆಗಾರಿಕೆ ಇರುವ ಎ ಗ್ರೂಪ್ ಸಿಬ್ಬಂದಿಗಳು ಎಲ್ಲರೂ ಮತ್ತು ಇತರ ಸಿಬ್ಬಂಧಿಗಳು ಅರ್ಧಾಂಶ ಕಚೇರಿಗೆ ಬರಬೇಕು. ಉತ್ತರಪ್ರದೇಶಲದಲಿ ಕರೊನ ರೋಗಿಗಳ ಸಂಖ್ಯೆ 600ಕ್ಕಿಂತ ಕಡಿಮೆ ಇರುವ 71 ಜಿಲ್ಲೆಗಳಲ್ಲಿ ನಿಯಂತ್ರಣ ಸಡಿಲಿಕೆ ಆಗಿದೆ. ಲಕ್ನೊ, ಗೊರಕಪುರ, ಸಹಾರನ್ಪುರ, ಮೀರತ್ ಜಿಲ್ಲೆಗಳಲ್ಲಿ ಕಫ್ರ್ಯೂ ಮುಂದುವರಿಯಲಿದೆ. ಇಲ್ಲಿ ಕೊರೋನ ರೋಗಿಗಳ ಸಂಖ್ಯೆ ಆರು ನೂರಕ್ಕಿಂತ ಹೆಚ್ಚಿದೆ. ಕಂಟೈನ್ಮೆಂಟ್ ಝೋನ್ಗಳ ಹೊರಗಿನ ಅಂಗಡಿ ಮಾರುಕಟ್ಟೆಗಳು ವಾರದಲ್ಲಿ ಐದು ದಿವಸ ತೆರೆಯಬಹುದು. ವಾರಣಾಸಿ , ಮುಝಪ್ಫರ್ ನಗರ್ , ಗೌತಂ ಬುದ್ಧ ನಗರ್, ಗಾಝಿಯಾಬಾದ್ಗಳು ಕಂಟೈನ್ಮೆಂಟ್ ಝೊನ್ಗಳಾಗಿವೆ.
ಮಹಾರಾಷ್ಟರ ಐದು ಹಂತಗಳಲ್ಲಿ ಸಡಿಲಿಕೆ ಮಾಡುತ್ತಿದೆ. 36 ಜಿಲ್ಲೆಗಳಲ್ಲಿ ಹದಿನೆಂಟು ಜಿಲ್ಲೆಗಳಲ್ಲಿ ಇಂದಿನಿಂದ ನಿಯಂತ್ರಣಗಳಿಲ್ಲ. ಔರಂಗಾಬಾದ್, ಬಂದಾರ, ಬುಲ್ಧಾನ, ಚಂದ್ರಪುರ, ಧುಲೆ, ಗಡ್ಚಿರೊಳಿ, ಗಾಂಡಿಯ, ಜಿಲ್ಲ್ಗೋನ್, ಜಲ್ನ,ಲಾತೂರ್ , ನಾಗಪುರ, ನದೇಂಡ್, ನಾಸಿಕ್ ಪಾರ್ಬನಿ, ಥಾಣೆ, ವಾಸಿ, ವಾರ್ಧ, ಯವ್ತ್ಮಲ್ಜಿಲ್ಲೆಗಳಲ್ಲಿ ಇಂದಿನಿಂದ ನಿಯಂತ್ರಣಗಳು ತೆರವುಗೊಳ್ಳಲಿದೆ. ಇಲ್ಲೆಲ್ಲ ಸಾಮಾನ್ಯ ನೆಲೆಯಲ್ಲಿ ಜನಜೀವನ ಮುಂದೆ ಸಾಗಲಿದೆ.
ಧಾರ್ಮಿಕ ಕೇಂದ್ರಗಳಲ್ಲಿ ಒಂದೇ ಸಮಯದಲ್ಲಿ 21 ಮಂದಿಗೆ ಪ್ರವೇಶ ನೀಡುವ ನಿರ್ಧಾರಕ್ಕೆ ಉತ್ತರಪ್ರದೇಶ ಸರಕಾರ ಬಂದಿದೆ. ಮನೆಗಳು ಹಾಗೂ ಹೊರಗೆ ಮದುವೆ ಮಾಡಿಕೊಳ್ಳುವ ಅನುಮತಿ ಇಂದಿನಿಂದಿದೆ. ಮದುವೆ ಹೊರತು ಶವಸಂಸ್ಕಾರದಂತಹ ಕಾರ್ಯದಲ್ಲಿ ಶೇ.50 ಮಂದಿಗೆ ಮಾತ್ರ ಭಾಗವಹಿಸಬಹುದು. ಐವತ್ತಕ್ಕಿಂತ ಹೆಚ್ಚು ಜನರು ಸಮಾರಂಭಕ್ಕೆ ಡೆಪ್ಯುಟಿ ಕಮಿಶನರ್ ಅನುಮತಿ ಪಡೆದಿರಬೇಕು.
ಉತ್ತರಖಂಡದಲ್ಲಿ ಜೂನ್ 9 ರಿಂದ ಹದಿನಾಲ್ಕರವರೆಗೆ ಅಗತ್ಯವಸ್ತುಗಳು ಮಾರುವ ಅಂಗಡಿಗಳು ಬೆಳಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಕಾರ್ಯ ನಿರ್ವಹಿಸಬಹುದು. ಇತರ ಅಂಗಡಿಗಳು ವಾರದಲ್ಲಿ ಎರಡು ದಿವಸ ತೆರೆಯಬಹುದು. ಮದ್ಯದಂಗಡಿ ವಾರದಲ್ಲಿ ಮೂರು ತಿಂಗಳೂ ಮಾತ್ರ ತೆರೆಯಬಹುದು.












