ಗಂಡು ಮಗು ಹೆತ್ತಿಲ್ಲವೆಂದು ಪತ್ನಿ-ಮಕ್ಕಳನ್ನು ಬಾವಿಗೆ ತಳ್ಳಿದ ಪತಿ

0
556

ಸನ್ಮಾರ್ಗ ವಾರ್ತೆ

ಭೋಪಾಲ: ಗಂಡು ಮಗುವನ್ನು ಹೆತ್ತಿಲ್ಲವೆಂದು ಕೋಪಗೊಂಡ ವ್ಯಕ್ತಿಯೊಬ್ಬ ಪತ್ನಿ-ಮಕ್ಕಳನ್ನು ಬಾವಿಗೆ ದೂಡಿ ಬೈಕ್‌ನೊಂದಿಗೆ ಪರಾರಿಯಾದ ಘಟನೆ ಮಧ್ಯಪ್ರದೇಶದ ಛತರ್ಪುರ ಎಂಬಲ್ಲಿ ನಡೆದಿದೆ.

ಸಣ್ಣ ಮಗುವಿನ ವಯಸ್ಸು ಕೇವಲ ಮೂರು ತಿಂಗಳು ಆಗಿತ್ತು. ರವಿವಾರ ಪತ್ನಿಯ ಮನೆಯಿಂದ ಪತ್ನಿ ಮಕ್ಕಳನ್ನು ಕರೆದುಕೊಂಡು ಬೈಕ್‍ನಲ್ಲಿ ಮರಳಿದ ಈತ ದಾರಿ ಮಧ್ಯೆ ಬಾವಿ ಸಮೀಪ ಬೈಕ್ ನಿಲ್ಲಿಸಿ ಪತ್ನಿ ಮಕ್ಕಳನ್ನು ಅದರೊಳಗೆ ದೂಡಿ ಹಾಕಿದ್ದಾನೆ.

ಸಹಾಯಕ್ಕಾಗಿ ಬೊಬ್ಬೆಹೊಡೆಯುತ್ತಿದ್ದ ಪತ್ನಿಮಕ್ಕಳನ್ನು ಆತ ಬಿಟ್ಟು ಬೈಕ್‍ನೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಮೂರು ತಿಂಗಳ ಮಗುವಿನಿಂದ ಮಹಿಳೆ ಮೇಲೆ ಹತ್ತಿ ಬಂದಿದ್ದಾರೆ. ಸ್ಥಳೀಯರು ನೆರವಿಗೆ ಬರುವಷ್ಟರಲ್ಲಿ ಹಿರಿಯ ಮಗಳು ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾಳೆ.

ಮಹಿಳೆ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಕೊಲೆ ಮಾಡುವುದಾಗಿ ಈತ ಪತ್ನಿ ಮಕ್ಕಳಿಗೆ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದರು.