ಕೊವಾಕ್ಸಿನ್‍ಗಿಂತ ಹೆಚ್ಚು ಕೊವಿಶೀಲ್ಡ್‌ನಲ್ಲಿ ಆಂಟಿಬೋಡಿಕ್‍ಗಳು ಆಗುತ್ತವೆ- ಅಧ್ಯಯನ

0
645

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೊರೋನ ವಿರುದ್ಧ ವ್ಯಾಕ್ಸಿನ್‍ಗಳಲ್ಲಿ ಕೊವಾಕ್ಸಿನ್‍ಗಿಂತ ಹೆಚ್ಚು ಕೊವಿಶೀಲ್ಡ್ ಪರಿಣಾಮಕಾರಿ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಕೊವಿಶೀಲ್ಡ್ ಹೆಚ್ಚು ಅಂಟಿಬಾಡಿಕ್‍ಗಳನ್ನು ಉಂಟು ಮಾಡುತ್ತವೆ. ಕೊವಿಶೀಲ್ಡ್ ಮತ್ತು ಕೋವಾಕ್ಸಿನ್ ತೆಗೆದುಕೊಂಡ ಆರೋಗ್ಯ ಕಾರ್ಯಕರ್ತರಲ್ಲಿ ನಡೆಸಿದ ಅಧ್ಯಯನದಿಂದ ಇದು ತಿಳಿದು ಬಂದಿದೆ. ಇವರಲ್ಲಿ ಕೊವಾಟ್ ಟೆಸ್ಟ್ ನಡೆಸಲಾಗಿತ್ತು.

ಕೊವಾಕ್ಸಿನ್ ಸ್ವೀಕರಿಸಿದವರಿಗಿಂತ ಕೊವಿಶೀಲ್ಡ್ ತೆಗೆದುಕೊಂಡವರಲ್ಲಿ ಉತ್ತಮ ಫಲಿತಾಂಶ ಕಂಡು ಬಂದಿದೆ ಎಂದು ಅಧ್ಯಯನ ತಿಳಿಸಿದೆ. ಕೊವಾಕ್ಸಿನ್ ಮತ್ತು ಕೊವಿಶೀಲ್ಡ್ ಎರಡು ಡೋಸ್ ತೆಗೆದುಕೊಂಡವರಲ್ಲಿ ಉತ್ತಮ ಫಲಿತಾಂಶ ಲಭ್ಯವಾಗಿದೆ ಎಂದು ಅಧ್ಯಯನ ತಿಳಿಸುತ್ತಿದೆ. ಆದರೆ ವ್ಯಾಕ್ಸಿನ್ ಸ್ವೀಕರಿಸಿದ ಮೊದಲ ಹಂತದಲ್ಲಿ ಸೆರೊಪೊಸಿಟಿವಿಟಿ ದರ ಕೊವಿಶೀಲ್ಡ್ ತೆಗೆದುಕೊಂಡವರಲ್ಲಿ ತುಂಬ ಹೆಚ್ಚಿತ್ತು.

325 ಪುರುಷರು 227 ಮಹಿಳೆಯರು ಅಧ್ಯಯನದಲ್ಲಿ ಭಾಗಿಯಾಗಿದ್ದರು. ಸಾರ್ಸ್ ರೋಗ ಬರದಿರುವರಲ್ಲಿ ಅಧ್ಯಯನ ನಡೆಸಲಾಗಿತ್ತು. ಕೊರೋನ ವೈರಸ್ ಇಂಡ್ಯೂಸ್ಟ್ ಆಂಟಿ ಬೊಡಿಟೈಟರ್ (ಕೊವಾಟ್) ಪರೀಕ್ಷೆಯನ್ನು ಆರೋಗ್ಯ ಕಾರ್ಯಕರ್ತರಲ್ಲಿ ಮಾಡಲಾಗಿತ್ತು. ಅಧ್ಯಯನ ಸಂಪೂರ್ಣ ಅವಲೋಕನ ಆಗಿಲ್ಲ. ಕ್ಲಿನಿಕಲ್ ಪ್ರಾಕ್ಟೀಸ್ ಆಗಿ ಈ ಅಧ್ಯಯನವನ್ನು ಉಪಯೋಗಿಸಬೇಡಿರಿ ಎಂದು ಕೊವಾಟ್ ಹೇಳಿದೆ.