ಸನ್ಮಾರ್ಗ ವಾರ್ತೆ
ಕೊಚ್ಚಿ: ಆಡಳಿತಗಾರ ಪ್ರಫುಲ್ ಖೋಡ ಪಟೇಲ್ ವಿರುದ್ಧ ಲಕ್ಷದ್ವೀಪ ನಿವಾಸಿಗಳ ನಿರಾಹಾರ ಹೋರಾಟ ಆರಂಭವಾಗಿದ್ದು ಸೇವ್ ಲಕ್ಷದ್ವೀಪ್ ಫೋರಂನ ಕರೆಯಂತೆ ಬೆಳಗ್ಗೆ ಆರಂಭಗೊಂಡ ಸತ್ಯಾಗ್ರಹ ಹನ್ನೆರಡು ಗಂಟೆಯವರೆಗೆ ಇರಲಿದೆ. ಅನ್ನಸತ್ಯಾಗ್ರಹದೊಂದಿಗೆ ವ್ಯಾಪಾರಿ ಸಂಸ್ಥೆಗಳು ಬಂದ್ ಮಾಡಿ ವ್ಯಾಪಾರಿಗಳು ಬೆಂಬಲ ಘೋಷಿಸಿದ್ದಾರೆ. ಕಾರ್ಮಿಕರು ಮೀನುಗಾರಿಕಾ ಬೋಟುಗಳನ್ನು ಸಮುದ್ರಕ್ಕೆ ಇಳಿಸುವುದಿಲ್ಲ. ವಾಹನಗಳನ್ನು ರಸ್ತೆಗಳಿಸಿಲ್ಲ. ಹಡಗಿನ ಸಿಬ್ಬಂದಿ ಮುಷ್ಕರದಲ್ಲಿದ್ದಾರೆ. ಜನರು ಮನೆಯೊಳಗೆ ಬಾಯಿಗೆ ಬಟ್ಟೆ ಕಟ್ಟಿ ಪ್ಲಕಾರ್ಡ್ ಹಿಡಿದು ಪ್ರತಿಭಟಿಸಿದರು.
ಸೋಮವಾರ ಲಕ್ಷದ್ವೀಪದಲ್ಲಿ ಪೂರ್ಣ ಹರತಾಳ ನಡೆಯುತ್ತಿದೆ. ಈ ಹಿಂದೆ 2010ರಲ್ಲಿ ಕವರತ್ತಿಯಲ್ಲಿ ಹರತಾಳ ನಡೆದಿತ್ತು. ಅಗತ್ಯ ವಸುಗಳನ್ನು ಸಿಗುತ್ತಿಲ್ಲ ಎಂದು ಅಂದು ಹರತಾಳ ನಡೆದಿತ್ತು.
ಕೊರೋನ ಮಾನದಂಡ ಪಾಲಿಸಿ ನಿರಾಹಾರ ಸತ್ಯಾಗ್ರಹ ಸಾಂಕೇತಿಕ ರೂಪದಲ್ಲಿರುತ್ತದೆ ಎಂದು ಸೇವ್ ಲಕ್ಷದ್ವೀಪ್ ಫಾರಂ ಪದಾಧಿಕಾರಿಗಳು ಹೇಳಿದರು. ವಿವಾದಿತ ಕಾನೂನು ಹಿಂಪಡೆಯಬೇಕು. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಯಲಿದೆ. ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಎಲ್ಲ ವಿಲೇಜ್ ದ್ವೀಪಗಳ ಪಂಚಾಯತ್ಗಳಲ್ಲಿ ಸಬ್ಕಮಿಟಿಗಳನ್ನು ಹೋರಾಟಗರು ಏಕೀಕರಿಸಿ ಹರತಾಳ ನಡೆಸುತ್ತಿದ್ದಾರೆ. ದ್ವೀಪದ ಬಿಜೆಪಿಯವರು ಕೂಡ ಹರತಾಳಕ್ಕೆ ಬೆಂಬಲ ನೀಡಿದ್ದಾರೆ. ಮುಂದಿನ ಹೋರಾಟ ರೀತಿ ಮುಂದಿನ ದಿನಗಳಲ್ಲಿ ಘೋಷಣೆಯಾಗಲಿದೆ.
ಇವೆಲ್ಲದ್ದರ ನಡುವೆ ಅಡ್ಮಿಸ್ಟ್ರೇಟರ್ ಸುರಕ್ಷಾ ಕ್ರಮ ಹೆಚ್ಚಿಸಿದ್ದಾರೆ. ಕೊರೋನ ಮಾನದಂಡ ಉಲ್ಲಂಘಿಸಿ ಜನರು ಗುಂಪು ಸೇರಿದರೆ ಬಂಧಿಸಲಾಗುವುದೆಂದು ಜಿಲ್ಲಾಡಳಿತ ಹೇಳಿದೆ. ಎರ್ನಾಕುಳಂ ವಿಲ್ಲಿಂಗ್ಟನ್ ಐಲೆಂಡಿನ ಲಕ್ಷದ್ವೀಪ ಅಡ್ಮಿಸ್ಟ್ರೇಶನ್ ಕಚೇರಿ ಮುಂದೆ ಸೋಮವಾರ ಮಧ್ಯಾಹ್ನ ಯುಡಿಎಫ್ ಸಂಸದರಿಂದ ಪ್ರತಿಭಟನೆ ನಡೆಯಲಿದೆ.












