Home ಸುದ್ದಿ ಇಸ್ರೇಲಿ ಹ್ಯಾಕಿಂಗ್ ವ್ಯವಸ್ಥೆಯನ್ನು ಖರೀದಿಸಲು ಸೌದಿಯಿಂದ ಯತ್ನ: ಹಾರೆಟ್ಜ್
ಕನ್ನಡಕ್ಕೆ: ಆಯಿಷತುಲ್ ಅಫೀಫ
ಅಂಕಾರ: ಸೌದಿ ಅರೇಬಿಯವು ಇಸ್ರೇಲಿ ಸಂಸ್ಥೆಯೊಂದರೊಂದಿಗೆ ಸೆಲ್ ಫೋನ್ ಗಳನ್ನು ಹ್ಯಾಕ್ ಮಾಡುವ ಸುಧಾರಿತ ವ್ಯವಸ್ಥೆಯನ್ನು ಖರೀದಿಸಲು ಮಾತುಕತೆ ನಡೆಸಿದೆ ಎಂದು ಇಸ್ರೇಲಿ ಡೈಲಿ ಹಾರೆಟ್ಜ್ ವರದಿ ಮಾಡಿದೆ.
ಹೆರ್ಜ್ಲಿಯಾ ಮೂಲದ ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ ನ ಇಬ್ಬರು ಪ್ರತಿನಿಧಿಗಳು 2017 ರಲ್ಲಿ ಪೆಗಾಸಸ್ 3 ತಂತ್ರಾಂಶವನ್ನು ಪ್ರಚಾರಪಡಿಸಲು ವಿಯೆನ್ನಾದಲ್ಲಿ ಸೌದಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ಪತ್ರಿಕೆ ತಿಳಿಸಿದೆ.
ಹಾರೆಟ್ಜ್ ಪತ್ರಿಕೆಯು ಆ ಇಬ್ಬರು ಸೌದಿ ಅಧಿಕಾರಿಗಳನ್ನು ಗುರುತಿಸಿದ್ದು, ಅಬ್ದುಲ್ಲಾ ಅಲ್-ಮಲಿಹಿ ,ರಾಜಕುಮಾರ ಟರ್ಕಿ ಅಲ್-ಫೈಸಲ್ ರ ಸಹಾಯಕ- ರಾಜ್ಯದ ಗುಪ್ತಚರ ಸೇವೆಗಳ ಮಾಜಿ ಮುಖ್ಯಸ್ಥ-ಮತ್ತು ಈಗಿನ ಗುಪ್ತಚರ ಮುಖ್ಯಸ್ಥರಾಗಿರುವ ನಾಸರ್ ಅಲ್-ಖಹ್ತನಿ ಎಂದು ಪ್ರಕಟಿಸಿದೆ.
ಕೊಲ್ಲಿ ರಾಷ್ಟ್ರದಲ್ಲಿ ಸಂಪರ್ಕ ಹೊಂದಿರುವ ಯುರೋಪಿಯನ್ ವ್ಯಾಪಾರಿಯೊಬ್ಬರ ಬಗ್ಗೆ ಇಸ್ರೇಲ್ ಪೋಲಿಸರು ಸಲ್ಲಿಸಿದ ದೂರಿನ ಮೂಲಕ ಈ ವಿಷಯವು ಬಹಿರಂಗಗೊಂಡಿದೆ. .
ಆದರೆ, ಈ ವರದಿಯ ಬಗ್ಗೆ ಸೌದಿ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ.
ವಿಶಾಲ್ ಬ್ಲೋವರ್ ಆಗಿರುವ ಎಡ್ವರ್ಡ್ ಸ್ನೋಡೆನ್ ಅವರ ಪ್ರಕಾರ, ಈ ತಿಂಗಳ ಆರಂಭದಲ್ಲಿ ಇಸ್ರೇಲಿ ಸೈಬರ್ ಭದ್ರತಾ ಸಂಸ್ಥೆಯಿಂದ ಮಾಡಲ್ಪಟ್ಟ ತಂತ್ರಾಂಶವನ್ನು ಕೊಲೆಯಾದ ಸೌದಿ ಪತ್ರಕರ್ತ ಜಮಾಲ್ ಖಶೊಗಿಯ ಜಾಡು ಹಿಡಿಯಲು ಬಳಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಷ್ಯಾದಿಂದ ವೀಡಿಯೊ ಕರೆ ಮೂಲಕ ಟೆಲ್ ಅವಿವ್ ನಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ವಿರೋಧಿಗಳನ್ನು ಪತ್ತೆ ಮಾಡಲು ಪೆಗಾಸಸ್ ಸ್ಪೈವೇರ್ ತಂತ್ರಜ್ಞಾನವನ್ನು ಇಸ್ರೇಲಿ ಎನ್ಎಸ್ಒ ಗ್ರೂಪ್ ಮೂಲಕ ಸರ್ಕಾರಗಳಿಗೆ ಮಾರಾಟ ಮಾಡಿದೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ಅವರು ದೊತವಾಸದಿಂದ ಜೀವಂತವಾಗಿ ಹೊರಬಂದಿದ್ದಾರೆಂದು ಹೇಳಿದ್ದ ಸೌದಿ ಆಡಳಿತವು, ಬಳಿಕ ಅವರು ಕೊಲ್ಲಲ್ಪಟ್ಟಿದ್ದಾರೆಂದು ಒಪ್ಪಿಕೊಂಡಿತ್ತು.
ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧವಿಲ್ಲ.