ಪ್ರತಿರೋಧದ ಎಲ್ಲ ಅವಕಾಶವನ್ನು ಫೆಲೆಸ್ತೀನ್ ಮುಕ್ತವಾಗಿರಿಸಿಕೊಂಡಿದೆ- ಹನಿಯ್ಯ

0
757
Senior political Hamas leader Ismail Haniya speaks in the presence of the new leader of Hamas in the Gaza Strip, during the opening of a new mosque in Rafah town in the southern Gaza Strip on February 24, 2017. / AFP PHOTO / SAID KHATIB

 

ಮುಸ್ತಫಾ ಹಬ್ಶುಷ್

ಗಾಝಾ: ಫೆಲೆಸ್ತೀನ್ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ಪ್ರಾದೇಶಿಕ ಒಕ್ಕೂಟವನ್ನು ನಿರ್ಮಿಸುವಂತೆ ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯ್ಯ ಕರೆ ನೀಡಿದ್ದಾರೆ.
ಟೆಹ್ರಾನ್ ನಲ್ಲಿ ನಡೆದ ಇಸ್ಲಾಮಿಕ್ ಯುನಿಟಿ ಕಾನ್ಫರೆನ್ಸ್ ನ 32 ನೇ ಅಧಿವೇಶನದಲ್ಲಿ ಮಾತಾಡುತ್ತಾ ಅವರು ಹೀಗೆಂದಿದ್ದಾರೆ.

ಎರಡು ದಿನದ ಸಮಾವೇಶವು ಪ್ರಪಂಚದಾದ್ಯಂತದ 100 ಕ್ಕಿಂತ ಹೆಚ್ಚು ರಾಷ್ಟ್ರಗಳಿಂದ ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳನ್ನು ಒಟ್ಟು ಸೇರಿಸಿತ್ತು.

ಆತಿಥೇಯ ದೇಶ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಸೇರಿದಂತೆ ಅಧಿಕಾರಿಗಳೂ ಈ ಕಾರ್ಯಕ್ರಮದಲ್ಲಿ ಪಾಲುಗೊಂಡಿದ್ದರು.

ಇಸ್ರೇಲ್ ಫೆಲೆಸ್ತೀನಿನ ಏಕೈಕ ಶತ್ರು. ಅದು ಫೆಲೆಸ್ತೀನನ್ನು ಆಕ್ರಮಿಸಿಕೊಂಡಿದೆ ಮತ್ತು ಇಸ್ಲಾಮಿಕ್ ಮತ್ತು ಕ್ರಿಶ್ಚಿಯನ್ ಪವಿತ್ರ ಸ್ಥಳಗಳನ್ನು ಅಪವಿತ್ರಗೊಳಿಸುತ್ತಿದೆ” ಎಂದು ಹನಿಯ್ಯ ಹೇಳಿದರು.

ಎಲ್ಲಾ ಇಸ್ರೇಲ್ ಯೋಜನೆಗಳನ್ನು ಎದುರಿಸಲು ಮತ್ತು ಆಕ್ರಮಿತ ನಗರದ ಜೆರುಸಲೇಮ್ ನಲ್ಲಿ ಫೆಲೆಸ್ತೀನಿಯನ್ ದೃಢತೆಯನ್ನು ಹೆಚ್ಚಿಸಲು ಇಸ್ಲಾಮಿ ಕಾರ್ಯತಂತ್ರವನ್ನು ಅಳವಡಿಸಲು ಹಮಾಸ್ ಮುಖಂಡ ಕರೆ ನೀಡಿದರು.

“ಪ್ರತಿರೋಧದ ಎಲ್ಲಾ ವಿಧಗಳನ್ನು ಅಳವಡಿಸಲು ನಾವು ಮುಕ್ತರಾಗಿದ್ದೇವೆ” ಎಂದು ಹನಿಯ್ಯ ಹೇಳಿದರು.