ಕಸ್ಬಾ ಬೆಂಗರೆ ರಕ್ತದಾನ ಶಿಬಿರ: ಜೀವ ಉಳಿಸುವ ಕಾರ್ಯ ಶ್ರೇಷ್ಠ ಕಾರ್ಯ

0
1362

ಜೀವ ಉಳಿಸುವ ಕಾರ್ಯ ಶ್ರೇಷ್ಠ ಕೆಲಸ. ಸಮಾಜದಲ್ಲಿ ಇಂತಹ ಸೇವಾ ಕಾರ್ಯಗಳು ಹೆಚ್ಚಾಗಿ ನಡೆಯಬೇಕಿದೆ. ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ  ಆಯೋಜಿಸಿದ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಅಭಿನಂದನಾರ್ಹ ಎಂದು ತೋಟ ಬೆಂಗ್ರೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಜಯ್ ಸುವರ್ಣ ರವರು ರಕ್ತದಾನವನ್ನು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ವೆಲ್ಫೇರ್ ಪಾರ್ಟಿ ಬೆಂಗ್ರೆ ಕಸ್ಬಾ ಕಾರ್ಯದರ್ಶಿ ಫೈಝಲ್ ಬೆಂಗ್ರೆಯವರು ” ದ್ವೇಷ ಹರಡುವವರ ಮಧ್ಯೆ ಪರಸ್ಪರ ರಕ್ತ ಸಂಬಂಧವನ್ನು ಬೆಳೆಸುವ ರಕ್ತದಾನ ಶಿಬಿರಗಳು ಶ್ಲಾಘನೀಯ” ಎಂದರು.

ಈ ಸಂದರ್ಭದಲ್ಲಿ ಅತ್ಯಧಿಕ ಬಾರಿ ರಕ್ತದಾನ ಮಾಡಿದ ಲತೀಶ್ ಪುತ್ರನ್ ಮತ್ತು ನಝೀರ್ ಅಹ್ಮದ್ ರವರನ್ನು ಸನ್ಮಾನಿಸಲಾಯ್ತು. ತಣ್ಣೀರು ಬಾವಿಯಲ್ಲಿ ಇತ್ತೀಚೆಗೆ ನಡೆದ ದುರ್ಘಟನೆಯಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಇಜಾಸ್ ರವರನ್ನು ಅಬ್ದುರ್ರಹಮಾನ್ ಮೋನಾಕ ಬೆಂಗ್ರೆಯವರು ಸನ್ಮಾನಿಸಿದರು.

 

ಪ್ರಭಾಕರ್ ಕುದ್ರೋಳಿ ಬೆಂಗ್ರೆ ಸನ್ಮಾನಿತರಿಗೆ  ಮೊಮೆಂಟೋ  ಉಡುಗೊರೆ ನೀಡಿ ಶುಭಹಾರೈಸಿದರು. ಅಬ್ದುಲ್ ಸಮದ್ ಬೆಂಗ್ರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಪಮ ಮಾಸಿಕದ ವ್ಯವಸ್ಥಾಪಕರಾದ ಮುಹಮ್ಮದ್ ಮುಹ್ಸಿನ್ ರವರು ವಹಿಸಿದ್ದರು.ನೂರಕ್ಕೂಮಿಕ್ಕಿ ದಾನಿಗಳು ರಕ್ತದಾನ ಮಾಡಿದರು.