ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊರೋನ ಮಹಾಮಾರಿಯ ಕಾರಣದಿಂದ ಜೀವ ಕಳೆದುಕೊಂಡ ಜನರ ಕುಟುಂಬಕ್ಕೆ ನಾಲ್ಕು ಲಕ್ಷ ಸಹಾಯಧನ ನೀಡುವ ಕುರಿತು ಕೇಂದ್ರ ಸರಕಾರ ಅಸಹಾಯಕತೆ ವ್ಯಕ್ತಪಡಿಸಿದ್ದನ್ನು ಟೀಕಿಸಿದ್ದಾರೆ. ಇದನ್ನು ಅವರು ಮೋದಿ ಸರಕಾರದ ಕ್ರೌರ್ಯವೆಂದು ಬಣ್ಣಿಸಿದ್ದಾರೆ.
ಜೀವಕ್ಕೆ ಬೆಲೆ ಕಟ್ಟುವುದು ಅಸಾಧ್ಯವಾಗಿದೆ. ಸರಕಾರಿ ಧನ ಸಹಾಯ ಒಬ್ಬ ಸಣ್ಣ ಸಹಾಯ ಮಾತ್ರ ಆಗಿರುತ್ತದೆ. ಆದರೆ ಮೋದಿ ಸರಕಾರ ಇದನ್ನು ಜನರಿಗೆ ನೀಡಲು ಹಿಂದೇಟು ಹಾಕಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಆರೋಪಿಸಿದ್ದಾರೆ.
ಕೊರೋನ ರೋಗದಲ್ಲಿ ಮೊದಲು ಚಿಕಿತ್ಸೆಯ ಕೊರತೆಯಾಯಿತು. ನಂತರ ಸುಳ್ಳು ಅಂಕಿ-ಅಂಶ ಮತ್ತು ಅದರ ಮೇಲಾಗಿ ಈ ಕ್ರೌರ್ಯ ಎಂದು ಅವರು ಬರೆದಿದ್ದಾರೆ.
ಕೇಂದ್ರ ಸರಕಾರಕ್ಕೆ ಉಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರ ಕೊರೋನದಿಂದ ಪ್ರಾಣಕಳಕೊಂಡ ಕುಟುಂಬಗಳಿಗೆ ನಾಲ್ಕು ಲಕ್ಷ ರೂಪಾಯಿ ಧನ ಸಹಾಯ ನೀಡಲು ಸಾಧ್ಯವಿಲ್ಲ. ಯಾಕೆಂದರೆ ಇಷ್ಟು ಹಣದ ಕಾಸಿನ ಭಾರ ಸಹಿಸಲು ಸಾಧ್ಯವಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆರ್ಥಿಕ ಸ್ಥಿತಿ ಸರಿಯಾಗಿಲ್ಲ ಎಂದು ತಿಳಿಸಿದ್ದಾರೆ.












