Home ಸುದ್ದಿ ಫೆಲೆಸ್ತೀನ್: ಅರಬ್ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿರುವ ಅಮೇರಿಕ
ಫೆಲೆಸ್ತೀನ್ ಪ್ರತಿರೋಧವನ್ನು ಖಂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯಲ್ಲಿ ಮಂಡಿಸಲಾಗಿರುವ ಕರಡು ನಿರ್ಣಯದ ಪರವಾಗಿ ಮತ ಚಲಾಯಿಸುವಂತೆ ಅಮೇರಿಕವು ಹಲವಾರು ಅರಬ್ ರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ವರದಿಯಾಗಿದೆ. ಇಸ್ರೇಲಿ ಪತ್ರಿಕೆ ಹರೆಟ್ಜ್ ಪ್ರಕಾರ, ಅಮೆರಿಕವು ಮಂಡಿಸಿರುವ ಕರಡಿಗೆ ಬೆಂಬಲ ನೀಡುವಂತೆ ಒಂಬತ್ತು ಅರಬ್ ರಾಷ್ಟ್ರಗಳ ರಾಯಭಾರಿಗಳಿಗೆ ಅಮೇರಿಕಾದ ವಿಶೇಷ ಪ್ರತಿನಿಧಿ ಜೇಸನ್ ಗ್ರೀನ್ ಬ್ಲಾಟ್ ಪತ್ರಗಳನ್ನು ಕಳುಹಿಸಿದ್ದಾರೆ.
ಮೊರಾಕೊ, ಓಮನ್, ಬಹ್ರೇನ್, ಜೋರ್ಡಾನ್, ಸೌದಿ ಅರೇಬಿಯಾ, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್ ಮತ್ತು ಕತಾರ್ ನ ರಾಯಭಾರಿಗಳಿಗೆ ಗ್ರೀನ್ ಬ್ಲಾಟ್ಟ್ ಪತ್ರವನ್ನು ಕಳುಹಿಸಿದ್ದಾರೆ ಎಂದು ಹರೆಟ್ಜ್ ವರದಿ ಮಾಡಿದೆ. ಆದರೆ, ಅಮೇರಿಕಾದ ಈ ಪ್ರಸ್ತಾಪವನ್ನು ಹಮಾಸ್ ವಿರೋಧಿಸಿದೆ. “ಇದು ಹಮಾಸ ನ್ನು ಶತ್ರು ಎಂದು ಪರಿಗಣಿಸಿ ಗಾಜಾದ ಮೇಲೆ ನಿರ್ಬಂಧವನ್ನು ಹೇರುವ ಪ್ರಯತ್ನವಾಗಿದೆ”ಎಂದಿದೆ.
ಫೆಲಸ್ತೀನ್ ಅಥಾರಿಟಿ ಮತ್ತು ಫತಾಹ್ ಕೂಡ ಅಮೆರಿಕಾದ ಕರಡು ನಿರ್ಣಯವನ್ನು ಟೀಕಿಸಿದೆ, ಇದು ಫೆಲೆಸ್ತೀನಿಯರ ವಿರುದ್ಧ ಇಸ್ರೇಲ್ ಆಕ್ರಮಣಕ್ಕಾಗಿ “ಸಂಪೂರ್ಣ” ಅಮೆರಿಕನ್ ಬೆಂಬಲವೆಂದು ಅದು ಹೇಳಿದೆ. ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯ್ಯ ಅವರು ತೀರ್ಮಾನವನ್ನು ಖಂಡಿಸಿದ್ದಾರೆ ಮತ್ತು ಈ ಬಗ್ಗೆ ಮಾತುಕತೆ ನಡೆಸುವಂತೆ ಅರಬ್ ರಾಷ್ಟ್ರಗಳೊಂದಿಗೆ ಕೇಳಿಕೊಂಡಿದ್ದಾರೆ.
ಇದರ ವಿರುದ್ಧ ಮತ ಚಲಾಯಿಸಲು ಮತ್ತು ವಿಶ್ವಸಂಸ್ಥೆಯ ಇತರ ಸದಸ್ಯ ರಾಷ್ಟ್ರಗಳನ್ನು ಮನವೊಲಿಸುವ ಹೊಣೆಯನ್ನು ಇರಾನ್ ವಹಿಸಿಕೊಂಡಿದೆ.