Home ಆದ್ಯಾತ್ಮ ಪ್ರವಾದಿ ಎತ್ತಿ ತೋರಿಸಿರುವ ಮಾರ್ಕ್ಸ್ ಸಿದ್ಧಾಂತದ ವೈಫಲ್ಯಗಳು
✒ ನಿಯಾಝುರ್ರಹ್ಮಾನ್ ಪೆರ್ಲ
ಅಂತಿಮ ಪ್ರವಾದಿ ಮುಹಮ್ಮದ್(ಸ) ಭೂಮಿಯಲ್ಲಿ ವಿಮೋಚನೆ ಮತ್ತು ಮೋಕ್ಷದ ಕಲ್ಪನೆಯನ್ನು ಸಂತುಲಿತವಾಗಿ ಕಟ್ಟಿಕೊಟ್ಟರು. ಭೂಮಿಯ ವಿಮೋಚನೆಗೆ ಆಕಾಶದ ಮೋಕ್ಷವನ್ನು ಸಂತುಲಿತವಾಗಿ ಸಮನ್ವಯಗೊಳಿಸಿದರು.
ವಿಮೋಚನೆ ಮತ್ತು ಮೋಕ್ಷದ ಬಗ್ಗೆ ವಾಸ್ತವಿಕ ಕಲ್ಪನೆಗಳಿಲ್ಲದೆ ಮತ್ತು ಸಂತುಲಿತ ದೃಷ್ಟಿಕೋನವಿಲ್ಲದೆ ಭೂಮಿಯಲ್ಲಿ ಸ್ವರ್ಗ (ಕಮ್ಯೂನಿಸ್ಟ್ ಸ್ವರ್ಗ) ಎಂದು ಹೇಳಿ ಜಗತ್ತಿನ ಶತ ಕೋಟಿಗಳನ್ನು ಪ್ರಭಾವಿಸಿದ ಕಾರ್ಲ್ ಮಾರ್ಕ್ಸ್, ಅದರಲ್ಲಿ ವಿಫಲವಾಗಿರುವುದನ್ನು ನೋಡಬಹುದಾಗಿದೆ. ಧಮನಿತರ ವಿಮೋಚನೆಯೆಂಬ ಘೋಷಣೆ ಯೊಂದಿಗೆ ಶತಕೋಟಿಗಳನ್ನು ಪ್ರಲೋಭನೆಗೈಯು ತ್ತಿರುವ ಆಶಯವಾಗಿದೆ ಮಾಕ್ರ್ಸ್ನದ್ದು. ಮೋಕ್ಷ ಮತ್ತು ವಿಮೋಚನೆಯ ಸಾಧ್ಯತೆಗಳನ್ನು ಒಂದೇ ಹೊತ್ತಿನಲ್ಲಿ ವಹಿಸುತ್ತಿರುವ ಇಸ್ಲಾಮ್ ಅದರ ಸಾಧ್ಯತೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿ ಕೊಂಡರೆ ಅದಕ್ಕೆ ಜಗತ್ತಿನಲ್ಲಿ ಬಹುವಿಧ ಸಂಚಲನವನ್ನು ಮೂಡಿಸಲು ಸಾಧ್ಯವಿದೆಯೆಂದು ಸಾಬೀತುಪಡಿಸಿದೆ.
ಅನ್ಯಾಯವು ತಾಂಡವಾಡುತ್ತಿರುವ ಸಮಾಜ ದಲ್ಲಿ ಅನ್ಯಾಯ, ಮರ್ದನ, ಶೋಷಣೆಗೊಳಪಟ್ಟ, ಬದಿಗೊತ್ತಲ್ಪಟ್ಟವರ, ಧ್ವನಿಯಿಲ್ಲದವರ ಪರ ನೆಲೆ ನಿಲ್ಲುವುದೇ ಅಲ್ಲಿನ ನೀತಿ. ನೀವು ಯಾವುದೇ ಕಠಿಣ ಸಂದರ್ಭದಲ್ಲೂ ನ್ಯಾಯದ ಪರವಾಗಿರಿ ಎಂಬುದು ಕುರ್ಆನ್ನ ಪಾಠವಾಗಿದೆ. ಆದರೆ ಅದೇ ಕುರ್ಆನ್ ಅನ್ಯಾಯಕ್ಕೊಳಗಾದವರ ಪರ ಪಕ್ಷಪಾತಿತನವನ್ನು ಹೊಂದಲು ಪ್ರೇರಣೆಯನ್ನು ನೀಡುತ್ತದೆ. ಇದು ಅದರ ಪ್ರಯೋಗ ಪಾಠವಾಗಿದೆ. ಇಲ್ಲಿ ಪಾಠವು ಪ್ರಯೋಗವನ್ನು ರದ್ದುಪಡಿಸುವುದಿಲ್ಲ. ಅವುಗಳ ಮಧ್ಯೆ ದ್ವಂದ್ವವೂ ಇಲ್ಲ. ಅವುಗಳು ಪೂರಕವೂ ಅವುಗಳ ಪರಸ್ಪರ ವ್ಯಾಖ್ಯಾನವೂ ಆಗಿದೆ. ಇಸ್ಲಾಮನ್ನು ಸ್ವೀಕರಿಸುವುದಕ್ಕೆ ಮುಂಚೆ ರೂಢಿಗತವಾದ ಜನಾಂಗ, ವರ್ಣ, ಭಾಷೆ, ಮಹಿಮೆಗಳು ಲಾಂಛನಗಳು ಗೋಚರಿಸಿದ ಹೊತ್ತಲ್ಲೆಲ್ಲಾ ಪ್ರವಾದಿಯವರು(ಸ) ಕಟು ಭಾಷೆಯಲ್ಲಿ ಮಾತೆತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲೆಲ್ಲಾ ಸಮಚಾಯಿಷಿಕೆಯ `ಬ್ಯಾಲನ್ಸಿಂಗ್’ ಆದ ಸಮದೂರ ಸಿದ್ಧಾಂತವನ್ನು ಅಳವಡಿಸಿ ರುವುದನ್ನು ಕಾಣಲು ಸಾಧ್ಯವಿಲ್ಲ. ಶೋಷಿತ/ಶೋಷಕರ ಮಧ್ಯೆ ಸಮದೂರ ಅಂತರವಲ್ಲ, ಶೋಷಣೆಗೊಳಗಾದವನ ಪರ ವಕಾಲತ್ತು ಆ ಹೊತ್ತಿನ ನ್ಯಾಯದ ಬೇಡಿಕೆಯಾಗಿದೆ. ಅದು ಪ್ರವಾದಿ ನಡೆಯೂ ಹೌದು. ಸಮದೂರ ಸಿದ್ಧಾಂತ, ಸಮಾನ ಅಂತರ ಕಾಯ್ದಿರಿಸುವಿಕೆ ಯಂತಹ ನಡೆಗಳು ಇಂದು ಒಂದು ರೀತಿಯಲ್ಲಿ ಮತ್ತೊಂದು ಅನ್ಯಾಯಕ್ಕೆ ಜನ್ಮವೀಯುತ್ತದೆ. ಫ್ಯಾಸಿಸ್ಟ್ ವಿರೋಧಿ ಹೋರಾಟ ಮತ್ತು ಇಸ್ಲಾಮೀ ಭಯೋತ್ಪಾದನಾ ವಿರೋಧಿ ಹೋರಾಟವೆಂಬ ಮಿಥ್ಯೆ ಕಲ್ಪನೆಯನ್ನು ಹೊಂದಿಕೊಂಡು ವಾಮ ಪಂಥೀಯರು ನಡೆಸುತ್ತಿರುವ ಹೋರಾಟಗಳು ಇಸ್ಲಾಮ್ ಭೀತಿಗೆ ಜನ್ಮ ನೀಡುತ್ತದೆ. ಆ ಮೂಲಕ ಒಂದು ಅನ್ಯಾಯದ ನಡೆಗೆ ಹೇತು ವಾಗುತ್ತದೆ. ಇಸ್ಲಾಮೀ ಜಗತ್ತಿನೊಂದಿಗೆ ಆರೋಗ್ಯ ಪೂರ್ಣವೂ ಕ್ರಿಯಾತ್ಮಕವೂ ಆಗಿ ಅಭಿ ಸಂಬೋಧಿಸಲು ಇರುವ ಅರ್ಹತೆಯನ್ನು ಗಳಿಸದೆ ಸಮ ಸಮಾಜವನ್ನು ಹುಟ್ಟು ಹಾಕಲು ಸಾಧ್ಯವಿದೆಯೇ? ಸಮತಾವಾದವನ್ನು ಸಮಾಜದ ಮುನ್ನೆಲೆಗೆ ಒಯ್ಯಲು ಸಾಧ್ಯವಿದೆಯೇ? ಈ ನಿಟ್ಟಿನಲ್ಲಿ ಪ್ರವಾದಿಯನ್ನು ಮುಂದಿಟ್ಟುಕೊಂಡು ಒಂದು ಅಂತರ್ ಶಿಸ್ತೀಯ ತೌಲನಿಕ ಅಧ್ಯಯನಕ್ಕೆ ಪ್ರಸಕ್ತ ಸಂದರ್ಭವಿದು.
ಮಾಕ್ರ್ಸ್ ವಾದ ಪರ-ವಿರೋಧ ಚಿಂತನೆಗಳು ಅದರ ಒಳಗೂ ಹೊರಗೂ ಇಂದು ಸಕ್ರಿಯ ವಾಗಿದೆ. ನನ್ನದು ಕೊನೆ ಮಾತಲ್ಲ ಎಂದು ನಂಬಿಕೆಯಿರಿಸಿದ ಸಮತಾವಾದದ ಹರಿಕಾರನಿಗೆ ತಾನು ಬಿತ್ತಿದ ಆಶಯಗಳ ಬೀಜಗಳು ನಿರೀಕ್ಷಿತ ಫಲ ನೀಡಿಲ್ಲವೆಂದು ನಿರಾಸೆಗೊಂಡರು/ಗೊಳಿಸಿ ದರು. ಆದರೂ ಎಲ್ಲಾ ನಿರಾಶೆ, ವಿಮರ್ಶೆಗಳಿಗಿಂತ ಮಿಗಿಲಾಗಿ ದಮನಿತರ ಪರ ಮಾಕ್ರ್ಸ್ಗೆ ಇರುವ ಕಾಳಜಿ ನಿರಂತರ ನ್ಯಾಯದ ಪರ ನೆಲೆ ನಿಲ್ಲಲು ಇರುವ ದಾಹವನ್ನು ಇಲ್ಲಿ ಒತ್ತಿ ಹೇಳಬೇಕಾಗಿದೆ. ಪ್ರವಾದಿಯೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಒಂದು ಆರೋಗ್ಯಪೂರ್ಣವೂ ವೈಜ್ಞಾನಿಜಕವೂ ಆದ ಆರ್ಥಿಕ ನೀತಿಯನ್ನು ಪ್ರವಾದಿಯವರು(ಸ) ಅಳವಡಿಸಿಕೊಂಡರು. ಅದರ ಸಲುವಾಗಿ ಮನುಷ್ಯ ನನ್ನು ಕೇವಲ ಆರ್ಥಿಕ ಜೀವಿಯಾಗಿ ಪರಿಗಣಿಸ ಲಿಲ್ಲ. ಆ ಕಾರಣದಿಂದ ತನ್ನ ಜೀವಿತಾವಧಿ ಯಲ್ಲಿಯೇ ಮಾಕ್ರ್ಸ್ ತರಹ ನಿರಾಶೆಗೊಳ್ಳಬೇಕಾಗಿ ಬರಲಿಲ್ಲ.
ಮನುಷ್ಯನನ್ನು ಕೇವಲ ವಸ್ತುವನ್ನಾಗಿ ಬಗೆದು ಕೊಂಡು ಕೇವಲ ಆರ್ಥಿಕ ದೃಷ್ಟಿಕೋನವನ್ನು ಮಾತ್ರ ಹೊಂದಿದ್ದರೆ ಚರಿತ್ರೆಯಲ್ಲಿ ಶೋಷಿತರ, ಬದಿಗೊತ್ತಲ್ಪಟ್ಟವರ ಪರ ಹೋರಾಟಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಪ್ರವಾದಿ ಯವರಿಗೆ ಸಾಧ್ಯವಿರಲಿಲ್ಲ. ಜನಾಂಗ, ಗೋತ್ರ, ವರ್ಣ, ವೈವಿಧ್ಯತೆಯನ್ನು ಅಭಿಸಂಬೋಧಿಸದೇ ಇರುತ್ತಿದ್ದರೆ ಮದೀನಾ ರಾಷ್ಟ್ರವನ್ನು ಕಟ್ಟಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಜನತೆಯ ಅಸ್ಮಿತೆಗಳನ್ನು ರದ್ದುಪಡಿಸಿಕೊಂಡು ಜನತೆಯನ್ನು ಮುನ್ನಡೆಸಲು ಸಾಧ್ಯವಿಲ್ಲ ಎಂಬುದು ಪ್ರವಾದಿ ಕಲಿಸಿದ ಪಾಠವಾಗಿದೆ. ಆ ಕಾರಣಗಳಿಂದಲೇ ಕರಿವರ್ಣದ ಬಿಲಾಲ್(ರ)ರನ್ನು ಅದಾನ್ ಕರೆ ಕೊಡಲು ಪ್ರವಾದಿಯವರು(ಸ) ನಿಯುಕ್ತಿಗೊಳಿಸಿ ರುವುದು. ಅರಬರಿಗೆ ಅರಬೇತರರಿಗಿಂತ ಯಾವುದೇ ಶ್ರೇಷ್ಠತೆಯಿಲ್ಲ ದೇವಭಯದ ಹೊರತಾಗಿ ಎಂದು ಸಾರಲು ಸಾಧ್ಯವಾಗಿರುವುದು ಅದೇ ಕಾರಣದಿಂದಾಗಿದೆ.
ಸೈದ್ಧಾಂತಿಕವೂ ಪ್ರಾಯೋಗಿಕವೂ ಆದ ನೆಲೆಗಳಲ್ಲಿ ಮಾಕ್ರ್ಸ್ ಸಿದ್ಧಾಂತ ವಿಮರ್ಶಿಸಲ್ಪಟ್ಟಿದೆ. ಮನುಷ್ಯನ ಆಧ್ಯಾತ್ಮಿಕ ಅಸ್ತಿತ್ವವನ್ನು ನಿರಾಕರಿಸಿ ಕೊಂಡು ಅವನನ್ನು ಬರೇ ಆಹಾರಕ್ಕಾಗಿ ಅಲೆ ದಾಡುವ ಜೀವಿಯಾಗಿ ಸರಳೀಕರಿಸಿರುವುದೆಂಬ ಆಕ್ಷೇಪ ಮಾಕ್ರ್ಸ್ ವಾದದ ಮೇಲಿದೆ. ವ್ಯಕ್ತಿ ಮತ್ತು ಸಮಾಜ ಜತೆಗಿನ ಮೂಲ ಸಂಬಂಧವೂ ಆರ್ಥಿಕತೆಯೆಂದು ಮಾಕ್ರ್ಸ್ ಸಿದ್ಧಾಂತದ ಪ್ರತಿಪಾದನೆಯಾಗಿದೆ. ಉತ್ಪಾದನಾ ಸಲಕರಣೆಗಳನ್ನು ವಶಪಡಿಸಿಕೊಳ್ಳುವುದೇ ಸ್ವಾತಂತ್ರ್ಯದೆಡೆಗೆ ಇರುವ ರಹದಾರಿ ಎಂದೆಣಿಸಲಾಗುತ್ತದೆ. ಸಮಾಜ ಶಾಸ್ತ್ರಜ್ಞರು ಈ ವಾದವನ್ನು ವಿಶ್ಲೇಷಿಸಿದ್ದಾರೆ. ವೈಜ್ಞಾನಿಕವೆಂದು ಹಕ್ಕು ಮಂಡನೆಗೈಯುವ ಈ ವಾದಕ್ಕೆ ವೈಜ್ಞಾನಿಕವೆಂದು ಸಾಬೀತಪಡಿಸಲು ಮತ್ತು ನಿರಾಕರಿಸಲು ಸಾಧ್ಯವಾಗಿದೆ. ಸಮಾಜದ ಮೇಲು ಚೌಕಟ್ಟನ್ನು ನಿರ್ಣಯಿಸುವುದು ಕೇವಲ ಆರ್ಥಿಕ ಘಟಕಗಳು ಮಾತ್ರವಲ್ಲ. ಧರ್ಮ, ಸಂಸ್ಕೃತಿ, ಜನಾಂಗ, ರಾಜಕೀಯದಂತಹ ಇನ್ನಿತರ ಅನೇಕ ಘಟಕಗಳು ಅಲ್ಲಿ ತಮ್ಮ ಪಾತ್ರ ವಹಿಸುತ್ತವೆ. ಯಾವುದೇ ಒಂದು ಘಟಕವನ್ನು ಮಾತ್ರವೇ ಪ್ರತ್ಯೇಕವಾಗಿ ಹೆಕ್ಕಿ ತೆಗೆದು ಒಟ್ಟು ಸಾಮಾಜಿಕ ಸಂಬಂಧಗಳ ಬಗೆಗಿನ ಸಾಮಾನ್ಯ ತತ್ವವನ್ನು ರೂಪಿಸಲು ಸಾಧ್ಯವಿಲ್ಲ.
ಮಾಕ್ರ್ಸ್ವಾದದ ತಿರುಳೆಂದು ವಿಶ್ಲೇಷಿಸಲ್ಪಡ ಬಹುದಾದ ತಾರ್ಕಿಕ ಭೌತವಾದ ಮತ್ತು (dialectic meterialism) ಚಾರಿತ್ರಿಕ ಭೌತವಾದ (historical meterialism)ವನ್ನು ಪ್ರಶ್ನೆಗೊಳಪಡಿಸ ಲಾಗಿದೆ. ವರ್ಗ ಕ್ರಾಂತಿಯು ಅನಿವಾರ್ಯವಾಗಿದೆ. ಸ್ವಾಭಾವಿಕವಾದ ಚರಿತ್ರೆಯ ಬೆಳವಣಿಗೆಯ ಫಲ ವಾಗಿ ಊಳಿಗಮಾನ್ಯ ವ್ಯವಸ್ಥೆ ಮತ್ತು ಬಂಡವಾಳ ಶಾಹಿ ವ್ಯವಸ್ಥೆಯು ನಿರ್ನಾಮವಾಗುತ್ತದೆ ಮತ್ತು ಅಲ್ಲಿ ಸಮಾಜವಾದ ಹುಟ್ಟುತ್ತದೆ. ತದನಂತರ ಸಮಸ್ತಜನ ಸ್ವಾಮ್ಯವಾದ
ಜನ್ಮತಾಳುತ್ತದೆಯೆಂಬ ಮಾಕ್ರ್ಸ್ವಾದವು `ಚಾರಿತ್ರಿಕ ನಿಯತಿವಾದ’ ಎಂದು ವಿಮರ್ಶಕರು ಸೂಚಿಸಿದ್ದಾರೆ. ನಾಸ್ತಿಕವಾದಿಯೆಂದು ಸ್ವಯಂ ಘೋಷಿಸಿಕೊಂಡ ಮಾಕ್ರ್ಸ್, ದೇವವಿಶ್ವಾಸವನ್ನು ಹೊಂದಿದರೆ ಮಾತ್ರವೇ ಸಾಧ್ಯವಾಗುವ ಶುಭಾಪ್ತಿ ವಿಶ್ವಾಸವನ್ನು ಹೊಂದಿದ್ದರು ಎಂಬುದನ್ನು ಇಲ್ಲಿ ಅರ್ಥೈಸಬಹುದಾಗಿದೆ. ಮೋಕ್ಷ-ವಿಮೋಚನೆ, ಇಹ-ಪರ ಕಲ್ಪನೆಗಳು ಸಮಂಜಸವಾಗಿ ಸಮ್ಮೇಳಿಸುವ ಇಲ್ಲಿ, ವಿಶ್ವಾಸಿಗೆ ಮಾತ್ರ ಸಾಧ್ಯವಾಗುವ ಈ ಶುಭಾಪ್ತಿ ವಿಶ್ವಾಸವನ್ನು ಕಾರ್ಲ್ಮಾಕ್ರ್ಸ್ ಹೊಂದಿರುವುದು ಚರಿತ್ರೆಯ ವಿಶೇಷತೆಯಾಗಿದೆ.
ಮಾನವನ ಇತಿಹಾಸವು ಪೂರ್ಣವಾಗಿ ಮಾಕ್ರ್ಸ್ ಗ್ರಹಿಸಿದ ರೀತಿ ಯಲ್ಲಿ ಉಳ್ಳವರು/ಇಲ್ಲದವರ ನಡುವೆ ನಡೆದ ಕೇವಲ ಸಂಘರ್ಷವಾಗಿರಲಿಲ್ಲ. ನವ ಮಾಕ್ರ್ಸ್ವಾದಿ ಚಿಂತಕರಲ್ಲಿ ತನ್ನನ್ನು ಗುರುತಿಸಿಕೊಂಡಿರುವ ಮಿಶೆಲ್ ಪುಕೋರವರ ಪ್ರಕಾರ ಸಾಮಾಜಿಕ ಬದಲಾವಣೆಗಳ ಮೂಲವು ಕೇವಲ ಆರ್ಥಿಕತೆ ಅಲ್ಲ. ಸರ್ವ ರಾಷ್ಟ್ರ ವಿದ್ಯಮಾನಕ್ಕೆ ಬದಲಾಗಿ ಪ್ರಾದೇಶಿಕ ಘಟಕಗಳು ಬದಲಾವಣೆಯ ಚಾಲಕ ಶಕ್ತಿ ಎಂದಾಗಿದೆ.
ಮೌಲ್ಯ ಲಾಭಗಳ ಬಗ್ಗೆ ಇರುವ ಮಾಕ್ರ್ಸ್ ಪರಿಕಲ್ಪನೆಗಳೂ ವಿಮರ್ಶೆಗೆ ಈಡಾಗಿದೆ. ಶ್ರಮವು ಮೌಲ್ಯವನ್ನು ನಿಶ್ಚಯಿಸುತ್ತದೆ ಎಂಬ ಮಾಕ್ರ್ಸ್ ತತ್ವವು ಸ್ವೀಕಾರಾರ್ಹವಲ್ಲವೆಂಬುದು ಪ್ರಮುಖ ಎಡ ಚಿಂತಕ ಕಾಲ್ ಮೆಂಗನ್ರ ಅಭಿಮತ. ಲಾಭವನ್ನು ಒಂದು ಕೆಟ್ಟ ವಿಷಯವನ್ನಾಗಿ ಎಣಿಸಬೇಕಾಗಿಲ್ಲ. ಆದರೆ ಶೋಷಣೆಯನ್ನು ಮಾತ್ರವೇ ಪ್ರತ್ಯೇಕವಾಗಿ ಕಾಣಬೇಕು. ಒಡೆಯ ಎಂದೆಂದೂ ಶ್ರಮಿಕನ ಶೋಷಕನಾಗಿರ ಬೇಕೆಂದೇನೂ ಇಲ್ಲ. ಇತಿಹಾಸದುದ್ದಕ್ಕೂ ಕಾರ್ಮಿಕ/ಒಡೆಯನ ಪರಸ್ಪರ ಸಂಬಂಧವು ಸಂಘರ್ಷ-ಸಹಕಾರಗಳ ಮಿಶ್ರಣವಾಗಿದೆ.
ಸಾಮಾಜಿಕ ಸಮಾನತೆ, ಸಮತಾವಾದದ ಬಗ್ಗೆ ಮಾಕ್ರ್ಸ್ ದೃಷ್ಟಿಕೋನವು ಉಟೋಪಿಯನ್ ಸಮಾಜವಾದದ ಪುನರ್ ಮಂಡನೆಯೆಂದು ಎಣಿಸಲ್ಪಟ್ಟಿದೆ. ವ್ಯಕ್ತಿ ಅಪ್ರಧಾನವೂ ರಾಷ್ಟ್ರವು ಪ್ರಧಾನವೂ ಆಗಿರುವ ತನಕ ಅಲ್ಲಿ ವ್ಯಕ್ತಿ ಸ್ವಾತಂತ್ರ್ಯವು ಕಸಿಯಲ್ಪಡುತ್ತಿರುತ್ತದೆ. ಪ್ರತಿಯೊಬ್ಬರೂ ಅವರವರ ಸಾಮಥ್ರ್ಯಕ್ಕೆ ಮತ್ತು ಅವರವರ ಆವಶ್ಯಕತೆಗೆ ಅನುಗುಣವಾಗಿ ಎಂಬ ತತ್ವವು ಹೇಳಲು ಹಿತಕರವೆನಿಸಿದರೂ ಪ್ರಾಯೋಗಿಕವಲ್ಲ. ವ್ಯಕ್ತಿಯಲ್ಲಿ ಅದು ಆಲಸ್ಯತನವನ್ನು ಹುಟ್ಟು ಹಾಕುತ್ತದೆ. ವ್ಯಕ್ತಿಯಲ್ಲಿ ಆಸಕ್ತಿಯನ್ನು ಹುಟ್ಟು ಹಾಕುವುದು ದುಡಿಮೆಯ ಪ್ರತಿಫಲವಾಗಿದೆ. ವಿತರಣೆಯ ಸಮಾನತೆಯು ಉತ್ಪಾದನಾ ಪ್ರಕ್ರಿಯೆಯಲ್ಲಿನ ಪಾಲುದಾರರ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.
ಇಸ್ಲಾಮಿನ ಅಂತಿಮ ಪ್ರವಾದಿ ಮುಹಮ್ಮದ್(ಸ) ಕಾರ್ಮಿಕನ ಬೆವರು ಆರುವುದಕ್ಕಿಂತ ಮುಂಚೆ ಅವನ ಪ್ರತಿಫಲವನ್ನು ನೀಡಲು ಆದೇಶಿಸಿರುವುದನ್ನು ನೋಡಬಹುದಾಗಿದೆ. ಮನಷ್ಯ ಬುದ್ಧಿಗೆ ನಿಲುಕದ ಕೃತಕ ವಿತರಣೆಯ ಶೃಂಖಲೆಗಳು ಪ್ರವಾದಿಯ ರಾಷ್ಟ್ರ ಕಲ್ಪನೆಯಲ್ಲಿಲ್ಲ. ಖಾಸಗಿ ಒಡೆತನಕ್ಕೆ ಅಲ್ಲಿ ಯಾವುದೇ ನಿ ಯಂತ್ರಣವಿಲ್ಲ. ದುಡಿಮೆಯ ಉತ್ಸಾಹವನ್ನು ದುಡಿಮೆಗಾರನಿಂದ ಕೆಡಿಸಿ ಬಿಡುವ ಯಾವುದೇ ಸಮಾಜೋ-ರಾಜಕೀಯ ನೀತಿಯನ್ನು ರೂಪಿಸಿರುವುದನ್ನು ಕಾಣಲು ಸಾಧ್ಯವಿಲ್ಲ. ವ್ಯಕ್ತಿಗೆ ಅನಿಯಂತ್ರಿತವಾಗಿ ಸಂಪಾದಿಸಲು ಅಲ್ಲಿ ಹಕ್ಕು ಇತ್ತು. ಆದರೆ ಸಂಪತ್ತಿನ ಯಥಾರ್ಥ ಒಡೆಯನಾದ ಸೃಷ್ಟಿಕರ್ತನು ನಿಶ್ಚಯಿಸಿದ ಧನಿಕನ ಸಂಪತ್ತಿನಲ್ಲಿ ಕಡ್ಡಾಯ ದಾನವನ್ನು (ಝಕಾತ್) ಸ್ಥಾಪಿಸಿರುವುದನ್ನು ಕಾಣಲು ಸಾಧ್ಯವಿದೆ.
ಚಾರಿತ್ರಿಕ ಭೌತಿಕವಾದ (historical materialism.) ಹುಟ್ಟು ಹಾಕಿದವರು ಕಾರ್ಲ್ ಮಾಕ್ರ್ಸ್ ಮತ್ತು ಏಂಗಲ್ಸ್ ಎಂಬುದು ಎಡ ಪಂಥೀಯ ವಾದವಾಗಿದೆ. ಸಮಾಜದಲ್ಲಿ ಸಂಪತ್ತಿನ ಆಧಾರದಲ್ಲಿ ಭಿನ್ನ ವರ್ಗಗಳಿವೆ. ಉಳ್ಳವರು/ ಇಲ್ಲದವರ ಮಧ್ಯೆ ಇತಿಹಾಸದಲ್ಲಿ ಸಂಘರ್ಷಗಳು ನಡೆದಿವೆ. ಆದರೆ ಇತಿಹಾಸದಲ್ಲಿ ನಡೆದ ಎಲ್ಲಾ ಸಂಘರ್ಷಗಳು ಉಳ್ಳವರು/ಇಲ್ಲದವರ ಮಧ್ಯೆ ನಡೆದ ಸಂಘರ್ಷಗಳು ಮಾತ್ರವೇ ಆಗಿರಲಿಲ್ಲ. ಬದಲಾಗಿ ಚರಿತ್ರೆಯಲ್ಲಿ ನಡೆದ ಹೆಚ್ಚಿನ ಎಲ್ಲಾ ಸಂಘರ್ಷಗಳು ಉಳ್ಳವರು/ಉಳ್ಳವರ ನಡುವೆಯೇ ಆಗಿತ್ತು. ಆ ಹೊತ್ತಿನಲ್ಲಿ ಇಲ್ಲದವರು ಉಳ್ಳವರ ಉಪಕರಣವಾಗಿದ್ದರು. ವರ್ಗ (class) ಮತ್ತು ಸಂಪತ್ತಿನ ಪ್ರಚೋದನೆಯಿಂದ ಅಲ್ಲದೇ ಇರುವ ಅದೆಷ್ಟೋ ಕಲಹಗಳನ್ನು ಇತಿಹಾಸದುದ್ದಕ್ಕೂ ದರ್ಶಿಸಲು ಸಾಧ್ಯವಿದೆ.
ಹನ್ನೊಂದನೇ ಶತಮಾನ ದಿಂದ ಮೊದಲುಗೊಂಡು ಹದಿನೈದನೇ ಶತಮಾನ ದವರೆಗೆ ಮುಂದುವರಿದ ಶೀತಲ ಯುದ್ಧ( cold war)ದ ಪ್ರಚೋದನೆಯು ಕೇವಲ ಆರ್ಥಿಕ ಹಿತಾಸಕ್ತಿಯ ಹಿನ್ನೆಲೆಯನ್ನು ಹೊತ್ತಿರುವುದು ಮಾತ್ರವಲ್ಲ. ಪ್ರಸಕ್ತ ಕಾಲದಲ್ಲಿ ತೃತೀಯ ಜಗತ್ತಿನಾ ದ್ಯಂತ ಸಮ್ರಾಜ್ಯಶಾಹಿಯು ಅತಿಕ್ರಮಣವನ್ನು ಹೂಡುವುದರಲ್ಲಿ ಅಡಕವಾಗಿರುವ ಉದ್ದೇಶವು ಕೇವಲ ಆರ್ಥಿಕ ಪ್ರಚೋದನೆ ಮಾತ್ರವೂ ಅಲ್ಲ ಇಂದು ಜಗತ್ತಿನಾದ್ಯಂತ ಮುಸ್ಲಿಮ್ ಸಮೂಹವು ಹುಟ್ಟು ಹಾಕುತ್ತಿರುವ ಅಸ್ತಿತ್ವಪರ- ಪ್ರಜಾಪ್ರಭುತ್ವಪರ ಹೋರಾಟಗಳನ್ನು ಕೇವಲ ವರ್ಗ ಎಂಬ ಏಕ ಮಾನ ದೃಷ್ಟಿಯಿಂದ ಅಳೆಯಲು ಸಾಧ್ಯವಿಲ್ಲ. ಇಂತಹ ಬದಿಗೊತ್ತುವಿಕೆ, ಅತಿಕ್ರಮಣ, ಪ್ರತಿರೋಧ ಗಳಲ್ಲೆಲ್ಲಾ ಧರ್ಮ, ಜನಾಂಗವು ಸುಪ್ರಧಾನವಾದ `ELEMENT’ ಆಗಿದೆ. ಉಳ್ಳವನು/ಇಲ್ಲದವನ ಮಧ್ಯೆ ಸಂಘರ್ಷಗಳನ್ನು ಮಾತ್ರವಲ್ಲ, ಸಹಕಾರದ ವರ್ತನೆಯನ್ನು ಕಾಣಲೂ ಸಾಧ್ಯವಿದೆ. ಅದೇ ಹೊತ್ತಿನಲ್ಲಿ ವರ್ಗ ಕ್ರಾಂತಿಯನ್ನು ಕಾಣಲೂ ಸಾಧ್ಯವಿದೆ. ರೋಮಾ ಸಾಮ್ರಾಜ್ಯದಲ್ಲಿ `ಸ್ಪಾರ್ಟಕಸ್’ನ ನೇತೃತ್ವದಲ್ಲಿ ಮಾಲಿಕರೆದುರಿಗೆ ಗುಲಾಮರ ಸಂಘರ್ಷವು ನಡೆದಿದೆ. ಆ ಸಂಘರ್ಷಗಳನ್ನು ಅಲ್ಲಿ ಬಲವಂತವಾಗಿ ಹಿಮ್ಮೆಟ್ಟಲಾಗುತ್ತದೆ. ಅಂದು ಆರು ಸಾವಿರ ಮಂದಿಯನ್ನು ಶಿಲುಬೆಗೇರಿಸಲಾಗಿತ್ತು. ಇದು ಅಂದು ಅಲ್ಲಿನ ಆರ್ಥಿಕತೆಯ ಮೇಲೆ ದುಷ್ಪರಿ ಣಾಮವನ್ನು ಬೀರಿತ್ತು.
ಚರಿತ್ರೆಯನ್ನು ಆರು ಹಂತಗಳಲ್ಲಿ ವಿಭಜಿಸಿದ ರೇಶೀಯ(Linear) ವಾದ-ಮಾಕ್ರ್ಸಿಯನ್ ವ್ಯಾಖ್ಯಾನವು ಚರಿತ್ರೆಯ ಬಗ್ಗೆ ಇರುವ ಕೇವಲ ಕಾವ್ಯ ಭಾವನೆಯಾಗಿದೆ. ಮಾನವ ಇತಿಹಾಸವು ಚರಿತ್ರೆಯುದ್ಧಕ್ಕೂ ಕ್ರಮಬದ್ಧವಾದ ರೀತಿಯಲ್ಲಿ ಚಲಿಸಲಿಲ್ಲ. ಊಳಿಗಮಾನ್ಯ ಕೃಷಿ ಸಂಬಂಧಗಳು ತಲೆ ಎತ್ತಿದಾಗ ಗುಲಾಮ ಪದ್ಧತಿಯ ಅಳಿದು ಹೋಗಿಲ್ಲ. ಗುಲಾಮ ಪದ್ಧತಿಯು ಏರಿಳಿತ ಮಟ್ಟದಲ್ಲಿ ಇಪ್ಪತ್ತನೇ ಶತಮಾನದ ತನಕ ಸಾಗಿ ಬಂದಿರುವುದು ಚಾರಿತ್ರಿಕ ಸತ್ಯ. ಗುಲಾಮ ಸಮೂಹವನ್ನು ಅತೀ ಹೆಚ್ಚು ಕ್ರೂರವಾಗಿ ಬದಿಗೊತ್ತಿರುವುದು/ಶೋಷಣೆಗೈದಿರುವುದು/ ಮಾರಾಟಗೈದಿರುವುದು ಬಂಡವಾಳಶಾಹಿಯು ತನ್ನ ಪಾರಮ್ಯವನ್ನು ಮೆರೆದ ವೇಳೆಯಲ್ಲಿಯೇ ಆಗಿದೆ.
ಪ್ರಥಮವಾಗಿ ಮಾಕ್ರ್ಸವಾದವು ಎಡವಿರು ವುದು ಮನುಷ್ಯನನ್ನು ಅರ್ಥೈಸುವುದರಲ್ಲಿಯೇ ಆಗಿದೆ. ಇಸ್ಲಾಮಿನ ದೃಷ್ಟಿಯಲ್ಲಿ ಮನುಷ್ಯ ಆದ ಮರ ಸಂತತಿಯಾಗಿದೆ. ಮಾಕ್ರ್ಸ್ವಾದದ ದೃಷ್ಟಿಕೋನದಲ್ಲಿ ಉಪಕರಣದ ಉಪಭೋಗದ ಸೃಷ್ಟಿಯಾಗಿದೆ. ಇಸ್ಲಾಮಿನ ದೃಷ್ಟಿಯಲ್ಲಿ ಮನುಷ್ಯನು ಸೃಷ್ಟಿಕರ್ತನ ಸೃಷ್ಟಿಯಾಗಿದ್ದಾನೆ. ಸೃಷ್ಟಿಕರ್ತನಿಂದಲೇ ನಾಮಗಳು ಊದಲ್ಪಟ್ಟವನು. ಮಾನವನ ವಿಕಾಸ ಪಥದಲ್ಲಿ ಉತ್ಪಾದನಾ ಉಪಕರಣಗಳಿಗಿಂತಲೂ ಮಿಗಿಲಾಗಿ ಭಾಷೆಯು ಪ್ರಧಾನ ಪಾತ್ರವನ್ನು ವಹಿಸಿದೆ. ಆ ಕಾರಣಗಳಿಂದಲೇ ಮಾನವನ ಸೃಷ್ಟಿಯ ವೇಳೆಯಲ್ಲಿಯೇ ಅವನಿಗೆ ನಾಮವನ್ನು ಕಲಿಸಿಕೊಟ್ಟಿರುವುದು. ಮಾನವನ ಗ್ರಹಿಕೆಗಳ ವಿಕಾಸ ಕ್ಷಮತೆಯನ್ನು ಹೊಂದಿರುವುದು ಭಾಷೆಯ ಮೂಲಕವೆಂದು ಕುರ್ಆನ್ ಸೂಚಿಸುತ್ತದೆ. ಉತ್ಪಾ ದನಾ ಸಲಕರಣೆಗಳ ವಿಕಾಸ ಎನ್ನುವುದಕ್ಕಿಂತ ಭಾಷಾ ಅಭಿವೃದ್ಧಿಯೇ ಮನುಷ್ಯನ ಬೆಳವಣಿಗೆಯ, ಅಭಿವೃದ್ಧಿಯ ಅಡಿಪಾಯವಾಗಿ ವರ್ತಿಸಿದೆ. ಉಪಕರಣಗಳು ಮಾನವ ಗ್ರಹಿಕೆಗಳ ವಿಕಾಸದಲ್ಲಿ ಒಂದು ಪಾಲನ್ನು ವಹಿಸಿದೆ ಎಂದರೆ ತಪ್ಪಲ್ಲ. ಒಂದರ್ಥದಲ್ಲಿ ಮಾಕ್ರ್ಸ್ವಾದವು ಅರ್ಧ ಸತ್ಯವನ್ನು ಪೂರ್ಣ ಸತ್ಯವೆಂದು ರೂಪಿಸಿ ಅದರ ಮೇಲೆ ನಿರ್ಮಿಸಿದ ಅರ್ಧ ಸತ್ಯಗಳ ಪ್ರಣಾಳಿಕೆ (Ideology)ಯಾಗಿದೆ.
ಎಲ್ಲಾ ರೀತಿಯ ನೇತ್ಯಾತ್ಮಕ ತೀವ್ರ ಚಿಂತನೆ ಗಳಿಂದ ಮಾಕ್ರ್ಸ್ ವಾದವು ಮುಕ್ತಿ ಹೊಂದಿದರೆ ಅದು ಸಮಾಜದ ನಾಡಿಮಿಡಿತವನ್ನು, ಚಲನೆ, ನಿಯಮಗಳನ್ನು ಅರ್ಥೈಸಲು ಸಾಧ್ಯವಾಗುವ ಒಂದು ಉಪಕರಣವಾಗುತ್ತದೆ. ಮನುಷ್ಯನ ಶರೀರಾಂಗಗಳಿಗೂ ಕೆಲವೊಂದು ಚಲನೆ ನಿಯಮ ಗಳು ಇರುವ ರೀತಿಯಲ್ಲಿಯೇ ಸಮಾಜದ ಶರೀರಾಂಗಗಳಿಗೂ ಕೆಲವೊಂದು ಚಲನಾ ನಿಯಮಗಳಿವೆ. ಅದನ್ನು ಅರ್ಥೈಸಿದರೆ ಅದರಲ್ಲಿ ಗುಣಾತ್ಮಕವಾಗಿ ಹಸ್ತಕ್ಷೇಪವನ್ನು ನಡೆಸಲು ಮತ್ತು ಇತ್ಯಾತ್ಮಕ ಬದಲಾವಣೆಯನ್ನು ತರಲು ಸಾಧ್ಯವಾಗ ಬಹುದು. ಈ ಸತ್ಯವು ಇಸ್ಲಾಮ್ ಮತ್ತು ಮಾಕ್ರ್ಸ್ ವಾದದ ಮಧ್ಯೆ ಪರಸ್ಪರ ಸಹಮತವಿರುವ ಸತ್ಯವಾಗಿದೆ. ಮಾಕ್ರ್ಸ್ವಾದದ ಕಾಲಹರಣಗೊಂಡ ತೀವ್ರ ಚಿಂತನೆಯನ್ನು ವ್ಯವಕಲನಗೊಳಿಸಿದರೆ ಅದೊಂದು ಸಮಾಜಶಾಸ್ತ್ರವಾಗಿದೆ. ಸಾಮಾಜಿಕ ವಿಶ್ಲೇಷಣಾ ಕ್ರಮವಾಗಿದೆ. ತೀವ್ರ ಚಿಂತನೆಗಳನ್ನು ಹೊರತುಪಡಿಸುವುದರ ಜತೆಗೆ ಮಾಕ್ರ್ಸ್ಗೆ ಕಾಣಲು ಸಾಧ್ಯವಾಗದ ಹಲವು ವಾಸ್ತವಗಳನ್ನು ಸೇರ್ಪಡೆ ಗೊಳಿಸಿದರೆ(Addition) ಅದು ಉತ್ತಮವಾದ ಸಾಮಾಜಿಕ ವಿಶ್ಲೇಷಣಾ ಉಪಕರಣವಾಗಿದೆ. ಈ ರೀತಿ ಸಂಕಲನ ವ್ಯವಕಲನ ಪ್ರಕ್ರಿಯೆಗೆ ಒಳಗಾದ ಒಂದು ಪ್ರಣಾಳಿಯನ್ನು ಮಾಕ್ರ್ಸ್ವಾದವೆಂದು ಹೇಳಬಹುದೇ? ಎಂಬ ಪ್ರಶ್ನೆಯನ್ನು ಬೇರೆಯೇ ಎತ್ತಬೇಕು. ಅದೇನಿದ್ದರೂ ಮಾನವ ಜನಾಂಗಕ್ಕೆ ಕಾಲ್ರ್ಸ್ಮಾಕ್ರ್ಸ್ ಮಹಾಮುನಿಯೇ ಆಗಿದ್ದಾರೆ.
ಮಾಕ್ರ್ಸವಾದವು ವಿಮೋಚನೆಯ ಧರ್ಮಕ್ಕೆ ಪ್ರಬಲವಾದ ಭೌತಿಕ ಶರೀರವನ್ನು ನೀಡಿರುವ ಕಾರಣದಿಂದಲೇ ಅದು ಹಲವು ದ್ವಂದ್ವಗಳಿಗೆ ಸಿಲುಕಿರುವುದು. ಒಂದು ಸಾಮಾಜಿಕ ವ್ಯವಸ್ಥೆ ಎಂಬ ನೆಲೆಯಲ್ಲಿ ಸೋತು ಹೋಗಿರುವುದು ಅಲ್ಲೇ ಆಗಿದೆ. ಆ ಹೊತ್ತಿನಲ್ಲಿಯೂ ಅದರ ಆತ್ಮದ ಇಸ್ಲಾಮೀ ಅಂಶವನ್ನು ಕಾಣದಿರಲು ಸಾಧ್ಯವಿಲ್ಲ. ಸಮಕಾಲೀನ ಜಗತ್ತಿನಲ್ಲಿ ಇಸ್ಲಾಮೀ ವಿಮೋಚನಾ ನೆಲೆಗಟ್ಟನ್ನು ವಿಸ್ತರಿಸುವುದರಲ್ಲಿ, ಹರಿತಗೊಳಿಸುವುದರಲ್ಲಿ ಅದು ಸಹಾಯವನ್ನು ಒದಗಿಸಿದೆ/ಒದಗಿಸುತ್ತದೆ ಎಂಬುದು ಚಾರಿತ್ರ್ರಿಕ ಸತ್ಯವಾಗಿದೆ.
ಪ್ರವಾದಿ ಮುಹಮ್ಮದ್(ಸ) ಸಂಘರ್ಷ ಸಾಧ್ಯತೆ ಯಿರುವ ಹಲವು ಮುಹೂರ್ತಗಳನ್ನು ತನ್ನ ಜಾಣ ನಡೆ(Diplomatic)ಯಿಂದ ಸಂಘರ್ಷ ಮುಕ್ತಿ(Conflict Resolution)ಗೊಳಿಸಿದರು.
ಪ್ರವಾದಿಯು ತನ್ನ ಆಪ್ತ ಸಂಗಾತಿ ಉಮರ್(ರ)ರವರು ಹುದ್ಯಬಿಯಾ ಸಂಧಿಯಲ್ಲಿ ತಮ್ಮ ಪ್ರವಾದಿತ್ವದ ಬಗ್ಗೆ ಸಂಶಯ ತಾಳು ವಷ್ಟರ ಮಟ್ಟಿಗೆ ಅವರು ದೂರ ದೃಷ್ಟಿತ್ವವನ್ನು ಹೊಂದಿದ್ದರು. ಚರಿತ್ರೆಯು ಕೇವಲ ಸಂಘರ್ಷದ್ದು ಮಾತ್ರವಲ್ಲ ಅದೇ ಸಂಘರ್ಷ ವಾತಾವರಣಗಳಿಂದಲೇ ಸ್ನೇಹ, ಭ್ರಾತೃತ್ವ, ಸಹೋದರತೆಗೆ ಮೇಲುಗೈ ಇರುವ ಸಮಾಜದ ನವ ನಿರ್ಮಾಣ ಸಾಧ್ಯವೆಂಬ ಸತ್ಯವನ್ನು ಪ್ರವಾದಿಯನ್ನು ಮುಂದಿಟ್ಟುಕೊಂಡು ಅಧ್ಯಯನ ನಡೆಸಿದರೆ ನವ ಮಾಕ್ರ್ಸ್ ಸಿದ್ಧಾಂತಗಳಿಗೆ ಅರ್ಥೈಸಬಹುದಾಗಿದೆ. ಇಸ್ಲಾಮನ್ನು, ಇಸ್ಲಾಮಿನ ಪ್ರವಾದಿಗಳನ್ನು ವಿಶೇಷತಃ ಅಂತಿಮ ಪ್ರವಾದಿ ಮುಹಮ್ಮದ್(ಸ) ಅವರನ್ನು ಅರಿಯಲು ಮಾಕ್ರ್ಸ್ ವಾದದ ಒಳಗಿನಿಂದ ನವ ಮಾಕ್ರ್ಸ್ವಾದಿಗಳು ಹೊಸ ಚಿಂತನಾ ಚೌಕಟ್ಟನ್ನು ಹೊಂದಬೇಕಾಗಿದೆ. ಅದಾಗಲೇ ಚಾರಿತ್ರಿಕ ನಿಯತಿ ವಾದ( Historical Determinism)ವನ್ನು ಮಂಡಿಸುವಲ್ಲಿ ವಿಶ್ವಾಸಿಗಳಿಗೆ ಮಾತ್ರವೇ ಸಾಧ್ಯವಾಗುವ ಶುಭಾಪ್ತಿ ವಿಶ್ವಾಸವನ್ನು ಹೊಂದಿ ಅರ್ಧದಲ್ಲಿಯೇ ಹಿಂದಿರು ಗಿದ ಕಾಲ್ರ್ಸ್ಮಾಕ್ರ್ಸ್ಗೆ ಮರು ಹುಟ್ಟನ್ನು ನೀಡಬಹುದಾಗಿದೆ.
ಮಾಕ್ರ್ಸ್ ವಾದವನ್ನು ಪ್ರಜಾಪ್ರಭುತ್ವಯುತವಾಗಿಯೂ ಸೃಜನಶೀಲ ದೃಷ್ಟಿಯಿಂದಲೂ ಅಳೆಯಲು ಎಡ ಚಿಂತಕರಿಂದ ಇನ್ನೂ ಸಾಧ್ಯವಾಗಿಲ್ಲ. ಅವರು ಅದನ್ನು ದಿವ್ಯ ಬೋಧನೆಯ ರೀತಿಯಲ್ಲಿ ಅರ್ಥೈಸಿದರು. ಆದರೆ ಒಂದು ದಿವ್ಯ ಬೋಧನೆಗೆ ಇರಬೇಕಾದ ಆಳ ಅಗಲಗಳು ಅದರಲ್ಲಿ ಇಲ್ಲ.
ಸಾಮ್ರಾಜ್ಯಶಾಹಿಯು ಇಂದು ಬೃಹತ್ ಮಟ್ಟದಲ್ಲಿ ತನ್ನನ್ನು ಜ್ಞಾನ ನಿರ್ಮಿತಿ(Knowledge Construction)ಯಲ್ಲಿ ತೊಡಗಿಸಿ ಕೊಂಡಿದೆ. ಅದರಂಗವಾಗಿ ಬೃಹತ್ತಾದ ಬೌದ್ಧಿಕ ಸನ್ನಾಹವನ್ನು ಅದು ಹೂಡುತ್ತಿದೆ. ಆ ಮೂಲಕ ತನ್ನನ್ನು ದೊಡ್ಡಮಟ್ಟದ ಜ್ಞಾನ ಜನ್ಯ ಹಿಂಸೆ(Epistemological Violence)ಯಲ್ಲಿ ತೊಡಗಿಸಿಕೊಂಡಿದೆ ಮತ್ತು ತನ್ನ ಪಾರಮ್ಯ ವನ್ನು ಯಥಾವತ್ತಾಗಿ ಕಾಯ್ದುಕೊಳ್ಳುವ ವಾತಾವರಣವನ್ನು ಹುಟ್ಟು ಹಾಕುತ್ತಿದೆ.
ಜಗತ್ತು ಇಂದು ಹೊಸ ಚಿಂತನಾ ಪರ್ವದ ಅಂಚಿನಲ್ಲಿದೆ. ಜನತೆಯ ಆತ್ಮ ಸಂಘರ್ಷಗಳನ್ನು ಇತಿಹಾಸದುದ್ದಕ್ಕೂ ಆತ್ಮ ಹರ್ಷದಿಂದ ಅಭಿಸಂಬೋದಿಸಿರುವ ಇಸ್ಲಾಮ್ ಈ ಜ್ಞಾನೋ ತ್ಸವದ ಸಂದರ್ಭವನ್ನು ಉತ್ಸಾಹದಿಂದ ಅಭಿಮುಖೀಕರಿಸುತ್ತಿದೆ. `ಉತ್ತರ ಸಿದ್ಧಾಂತಗಳ(Post Theories) ಆಚೆಗೆ’ ಇಸ್ಲಾಮೀ ಜಗತ್ತಿಗೆ ಈ ಸಂದರ್ಭದಲ್ಲಿ ಕೇವಲ ಆರ್ಥಿಕ ಸಂಘರ್ಷವನ್ನಲ್ಲ ಬದಲಾಗಿ ಜನತೆಯ ಎಲ್ಲಾ ರೀತಿಯ ಸಾಮಾಜಿಕ, ಸಾಂಸ್ಕೃ ತಿಕ, ಆಧ್ಯಾತ್ಮಿಕ, ರಾಜಕೀಯ ಸಂಘರ್ಷಗಳನ್ನು ಸಂಭ್ರಮದಿಂದ ಅಭಿಮುಖೀಕರಿಸಿರುವ ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶವನ್ನು ಜ್ಞಾನ ಮೀಮಾಂಸೆಯುತವಾಗಿ (Epistemological ) ಮುನ್ನೆಲೆಗೆ ತರಲು ಸಾಧ್ಯವಾಗಬೇಕಿದೆ.