ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಬಿಜೆಪಿ ಕಾರ್ಯಕಾರಿಣಿಯಿಂದ ಸ್ಥಾನ ಕಳಕೊಂಡ ಬಳಿಕ ನಂತರ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಟ್ವಿಟರ್ನಲ್ಲಿ ತಮ್ಮ ಬಯೋಡಾಟಾ ತಿದ್ದಿದ್ದು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂಬುದನ್ನು ಪ್ರೊಫೈಲ್ನಿಂದ ತೆಗೆದುಹಾಕಿದ್ದಾರೆ.
ಬಿಜೆಪಿಗೆ ಸಂಬಂಧಿಸಿದ ಯಾವುದೇ ಸ್ಥಾನಮಾನಗಳು ಸುಬ್ರಮಣಿಯನ್ ಸ್ವಾಮಿಯ ಟ್ವಿಟರ್ ಪ್ರೊಫೈಲ್ನಲ್ಲಿಲ್ಲ. ಆದರೆ ರಾಜ್ಯಸಭಾ ಸಂಸದ, ಮಾಜಿ ಕೇಂದ್ರ ಸಚಿವ, ಹಾರ್ವಡ್ ಪಿಎಚ್ಡಿ ಇನ್ ಇಕಾನಮಿಕ್ಸ್; ಪ್ರೊಫೆಸರ್ ಇತ್ಯಾದಿ ವಿವರಗಳನ್ನು ಕಾಣಬಹುದಾಗಿದೆ.
ಸುಬ್ರಮಣಿಯನ್, ಪ್ರಧಾನಿ ಮೋದಿಯವರ ಆರ್ಥಿಕ ನೀತಿಗಳ ಪ್ರಧಾನ ಟೀಕಾಕಾರಾಗಿದ್ದು ಮೋದಿ ಸಚಿವಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ, ನಿರ್ಮಿಲಾ ಸೀತಾರಾಮನ್ರನ್ನು ತೀಕ್ಷ್ಣ ಭಾಷೆಯಲ್ಲಿ ಅವರು ಟೀಕಿಸಿದ್ದರು. ಆರೆಸ್ಸೆಸ್ಗೆ ನಿಕಟರಾಗಿರುವ ಸ್ವಾಮಿ ಪಾರ್ಟಿಯನ್ನು ಕೆಲವು ಸಮಯದಲ್ಲಿ ಪ್ರತಿರೋಧಿಸುತ್ತಿದ್ದರು.
ಬಿಜೆಪಿ ಕಾರ್ಯಕಾರಿಣಿಯಿಂದ ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿ ಹೊರಬಿದ್ದಿದ್ದಾರೆ. ವರುಣ್ ಗಾಂಧಿ ರೈತರ ಪರ ಸರಕಾರವನ್ನು ಉಗ್ರವಾಗಿ ಟೀಕಿಸಿದ್ದರು. ಕಾರ್ಯಕಾರಿಣಿಯಲ್ಲಿ ಕೇಂದ್ರ ಸಚಿವ ಇಂದ್ರಜಿತ್ ಸಿಂಗ್, ಸುರೇಶ್ ಪ್ರಭು, ದುಶ್ಯಂತ್ ಸಿಂಗ್ ,ವಿಜಯ್ ಗೋಯಲ್ ,ವಿನಯರ್ ಕಟಿಯಾರ್, ಎಸ್ಎಸ್ ಅಹುಲ್ವಾಲಿಯಾರಿಗೂ ಜಾಗವಿಲ್ಲ. ಬಿಜೆಪಿ ಕಾರ್ಯಕಾರಿಣಿಯಲ್ಲಿ ಒಟ್ಟು 80 ಮಂದಿ ಇದ್ದಾರೆ.












