ಪತ್ರಕರ್ತ ಸಿದ್ದೀಕ್ ಕಪ್ಪನ್‌‌ಗೆ ವೈದ್ಯಕೀಯ ಚಿಕಿತ್ಸೆ ನಿರಾಕರಣೆ: ಉ.ಪ್ರದೇಶ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ

0
447

ಸನ್ಮಾರ್ಗ ವಾರ್ತೆ

ನವದೆಹಲಿ: ಬಂಧಿತ ಕೇರಳದ ಪತ್ರಕರ್ತ ಸಿದ್ಧೀಕ್ ಕಪ್ಪನ್‌ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿರುವ ಉತ್ತರಪ್ರದೇಶ ಸರಕಾರದ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಲಾಗಿದೆ. ರೋಗದಿಂದ ಗುಣ ಮುಕ್ತರಾದ ಬಳಿಕ ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ಏಪ್ರಿಲ್ 28ರಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು

ಆದರೆ ಕೊರೋನಾ ಪಾಸಿಟಿವ್ ಆಗಿದ್ದರೂ ಮೇ 26ರಂದು ಮಧ್ಯರಾತ್ರಿ ನಿದ್ದೆ ಮಾಡುತ್ತಿದ್ದ ವೇಳೆ ತರಾತುರಿಯಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮಥುರಾ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ಅರ್ಜಿಯಲ್ಲಿ ಆರೋಪಿಸಲಾಗಿದೆ. ಇದು ನ್ಯಾಯಾಂಗ ನಿಂದನೆ ಯಾಗಿದೆ ಎಂದು ವಕೀಲರಾದ ವಿಲ್ಸ್ ಮ್ಯಾಥ್ಯೂಸ್ ಅವರ ಮೂಲಕ ಕೇರಳ ಪತ್ರಕರ್ತ ಯೂನಿಯನ್ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ. ಸ್ನಾನ ಗ್ರಹದಲ್ಲಿ ಬಿದ್ದು ಹಲ್ಲಿಗೆ ಗಾಯವಾಗಿತ್ತು. ಇದರ ಚಿಕಿತ್ಸೆ ಇನ್ನೂ ನಡೆದಿಲ್ಲದಿರುವಂತೆಯೇ ಡಿಸ್ಚಾರ್ಜ್ ಮಾಡಿ ಜೈಲಿಗೆ ರವಾನಿಸಲಾಗಿತ್ತು ಎಂದು ಕೇರಳ ಪತ್ರಕರ್ತರ ಯೂನಿಯನ್ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.

ಕೊರೋಣದಿಂದ ಅವರು ಗುಣಮುಖರಾಗಿ ರಲಿಲ್ಲ. ಮಧುಮೇಹದಿಂದ ಕಣ್ಣಿನ ದೃಷ್ಟಿಗೆ ಹಾನಿಯಾಗುವ ನಿರ್ಣಾಯಕ ಹಂತದಲ್ಲಿ ಇಂತಹ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಯ ಕುರಿತು ಮಥುರಾದ ಅಧಿಕಾರಿಗಳನ್ನು ಭೇಟಿಯಾಗಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆದುದರಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವುದಾಗಿ ವಕೀಲರಾದ ವಿಲ್ಸ್ ಮ್ಯಾಥ್ಯೂಸ್ ತಿಳಿಸಿದ್ದಾರೆ